ಡಿಸೆಂಬರ್ 19 2024 ಗುರುವಾರ ಬೆಳಗ್ಗೆ 10 ಗಂಟೆ
ಶ್ರೀಮಠದ ಸ್ಥಾಪಕ ಗುರುಗಳಾದ ಪೂಜ್ಯಶ್ರೀ ಚನ್ನಬಸವ ಸ್ವಾಮಿಗಳ ಕೃಪಾಶೀರ್ವಾದದೊಂದಿಗೆ ಶ್ರೀ ಸುತ್ತೂರು ಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳು ಮತ್ತು ಶ್ರೀ ಸಿದ್ದಗಂಗಾ ಮಠದ ಪರಮಪೂಜ್ಯ ನಿರಾಶ್ವ ಶ್ರೀ ಸಿದ್ದಲಿಂಗ ಮಹಾ ಸ್ವಾಮಿಗಳು ಗಳವರ ದಿವ್ಯ ಸಾನಿಧ್ಯದಲ್ಲಿ ಮತ್ತು ನಾಡಿನ ಹಲವಾರು ಪೂಜೆ ಮಠಾಧಿಪತಿಗಳ ಸಮ್ಮುಖದಲ್ಲಿ ಶಾಖ ಮಠದ ಉದ್ಘಾಟನೆ ಏರ್ಪಡಿಸಿದ್ದು ಈ ಕಾರ್ಯಕ್ರಮದಲ್ಲಿ ಗಣ್ಯ ಮಹನೀಯರುಗಳು ಭಾಗವಹಿಸಲಿದ್ದಾರೆ
ಸ್ಥಳ: ಮೂಡಲಪುರ ಉತ್ತುವಳ್ಳಿ ಮುಖ್ಯ ರಸ್ತೆ ಚಾಮರಾಜನಗರ
ಚಾಮರಾಜನಗರ ತಾಲೂಕಿನ ಹರವೆ ಗ್ರಾಮದಲ್ಲಿರುವ ಶ್ರೀ ವಿರಕ್ತಮಠವು ಸುಮಾರು 400 ವರ್ಷಗಳ ಹಿಂದೆ ಸ್ಥಾಪನೆಯಾಗಿದೆ ಈ ಮಠದ ಮೂಲ ಗುರುಗಳಾದ ಶ್ರೀ ಚನ್ನಬಸವ ಸ್ವಾಮಿಗಳು ಊರಿನ ಜನರಲ್ಲಿ ಧರ್ಮ ಜಾಗೃತಿ ಮೂಡಿಸಿ ಧರ್ಮ ಮತ್ತು ಶರಣರ ತತ್ವವನ್ನು ಸಾರಿದರು. ನಿರಂತರವಾಗಿ ತೊಡಗಿಸಿಕೊಂಡು ಊರಿನ ಜನರಿಗೆ ಮಾದರಿಯಾಗಿದ್ದರು ಮಠದ ಸುತ್ತಲೂ ಕೊಟ್ಟಿಗೆ ಕಟ್ಟಿಸಿ ಸಲುವಾಗಿ ಜಾನುವಾರುಗಳನ್ನು ಸಾಕಿದ್ದರು ಇವರ ನಂತರ ಶ್ರೀ ಮಠವು ಹಲವಾರು ಗುರುಗಳ ಸೇವಾ ಲಭ್ಯತೆಯನ್ನು ಕಂಡಿದೆ.
ಇದೇ ಪರಂಪರೆಯಲ್ಲಿ ಶ್ರೀ ರುದ್ರಪ್ಪದೇವರು ಮತ್ತು ಶ್ರೀಮತಿ ಶಿವಲಿಂಗಪ್ಪನವರ ಪುತ್ರರಾದ ಶ್ರೀ ನಿ.ಪ್ರ.ಸ್ವ. ಶ್ರೀ ಶಿವನಂದ ಸ್ವಾಮಿಗಳು 1934ರಲ್ಲಿ ಶ್ರೀಮಠದ ಉತ್ತರಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡರು. ತುಮಕೂರಿನ ಶ್ರೀ ಸಿದ್ದಗಂಗಾ ಮಠದಲ್ಲಿ ಸಂಸ್ಕೃತ ಮತ್ತು ವೇದ ಅಧ್ಯಯನ ಮಾಡಿ ನಡೆದಾಡುವ ದೇವರು ಎಂದೇ ಪ್ರಖ್ಯಾತರಾದ ಶ್ರೀ ಶಿವಕುಮಾರ ಸ್ವಾಮಿಗಳ ಒಡನಾಡಿಯಾಗಿ ಆತ್ಮೀಯ ವಲದಲ್ಲಿ ಗುರುತಿಸಿಕೊಂಡಿದ್ದರು.
ಅಲ್ಲದೆ ಸುತ್ತೂರು ಮಠದ ಪರಮ ಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳು ಹಾಗೂ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳವರ ನಿಕಟವರ್ತಿಗಳಾಗಿದ್ದು ಅವರ ನಡುವೆ ಆತ್ಮೀಯತೆ ಪ್ರೀತಿ ವಿಶ್ವಾಸಗಳು ಅಪಾರವಾಗಿದ್ದವು. ಶ್ರೀ ಶಿವಾನಂದ ಸ್ವಾಮಿಗಳು ಉತ್ತಮ ವಾಗ್ಮಿಗಳಾಗಿದ್ದು ತಮ್ಮ ಸರಳ ನೇರ ನುಡಿಗಳಿಂದ ತಮ್ಮ ಹಾಸ್ಯ ಭರಿತ ಮಾತು ಮತ್ತು ಭಾಷೆಗಳಿಂದ ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯಾದ್ಯಂತ ಪ್ರಸಿದ್ಧರಾಗಿದ್ದರು. ನಿ.ಪ್ರ.ಸ್ವ. ಶ್ರೀ ಶಿವನಂದ ಸ್ವಾಮಿಗಳ ಕಾರ್ಯಕ್ರಮ ದ ಅಧಿಕಾರ ವಹಿಸಿಕೊಂಡವರು ನಿ.ಪ್ರ.ಸ್ವ. ಶ್ರೀ ಸರ್ಪಭೂಷಣ ಸ್ವಾಮಿಗಳು ಇವರು ಶ್ರೀ ಶಿವಲಿಂಗ ಸ್ವಾಮಿ ಮತ್ತು ಶ್ರೀಮತಿ ನಾಗರತ್ನಮ್ಮನವರ ಸುಪುತ್ರರು ಪುರಾತನ ಪರಂಪರೆ ಮಠವನ್ನು ಎಲ್ಲಿಯೂ ಕುಂದುಂಟಾಗದಂತೆ ಮುನ್ನಡೆಸುತ್ತಿದ್ದಾರೆ ಗ್ರಾಮಾಂತರ ಪ್ರದೇಶದ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲೆಂದು ಶ್ರೀ ಚನ್ನಬಸವೇಶ್ವರ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಒಂದರಿಂದ 10ನೇ ತರಗತಿವರೆಗೆ ಕನ್ನಡ ಮತ್ತು ಆಂಗ್ಲ ಮಾಧ್ಯಮದಲ್ಲಿ ಶಾಲೆಯನ್ನು ತೆರೆದಿದ್ದಾರೆ ಇದರಲ್ಲಿ ನೂರಾರು ಬಡ ಗ್ರಾಮೀಣ ಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ
ಒಟ್ಟಾರೆಯಾಗಿ ಪ್ರಸ್ತುತ ಶ್ರೀಗಳ ಅವಧಿಯಲ್ಲಿ ಶ್ರೀಮಠವು ಸರ್ವತೋಮುಖವಾಗಿ ಪ್ರಗತಿಯನ್ನು ಕಾಣುತ್ತಿದೆ. ಈಗ ಚಾಮರಾಜನಗರದಲ್ಲಿ ಮಠದ ಶಾಖೆಯನ್ನು ತೆರೆದು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲು ಉದ್ದೇಶಿಸಿದ್ದಾರೆ.
ಮುಂದಿನ ಯೋಚನೆಗಳು ವಿದ್ಯಾರ್ಥಿ ನಿಲಯ ಸ್ಥಾಪನೆ, ಯೋಗ ಮತ್ತು ಧ್ಯಾನ ಶಿಬಿರಗಳು, ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕಾರ್ಯಕ್ರಮಗಳ ಯೋಜನೆ.