You are currently viewing ಶ್ರೀ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯ  “ಅಂಶುಮದಾಗಮ ಸಂಪದನಾತ್ಮಕಮಧ್ಯಯನಮ್ ” ಎಂಬ ಗ್ರಂಥಕ್ಕೆ  2024ನೇ ಸಾಲಿನ ‘ಸಂಸ್ಕೃತ ಗ್ರಂಥ ಪುರಸ್ಕಾರ’

ಶ್ರೀ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯ “ಅಂಶುಮದಾಗಮ ಸಂಪದನಾತ್ಮಕಮಧ್ಯಯನಮ್ ” ಎಂಬ ಗ್ರಂಥಕ್ಕೆ 2024ನೇ ಸಾಲಿನ ‘ಸಂಸ್ಕೃತ ಗ್ರಂಥ ಪುರಸ್ಕಾರ’

ಶ್ರೀ ಮಲೆಮಹದೇಶ್ವರ ಬೆಟ್ಟದ ಶ್ರೀ ಸಾಲೂರು ಬೃಹನ್ಮಠದ ಪೀಠಾಧಿಪತಿಗಳಾದ ಡಾ. ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಯ ಪಿ.ಎಚ್ಡಿಯ ಮಹಾಪ್ರಬಂಧ ಅಂಶುಮದಾಗಮ ಸಂಪದನಾತ್ಮಕಮಧ್ಯಯನಮ್ ಎಂಬ ಗ್ರಂಥಕ್ಕೆ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯವು 2024ನೇ ಸಾಲಿನ ‘ಸಂಸ್ಕೃತ ಗ್ರಂಥ ಪುರಸ್ಕಾರ’ ವು ಲಭಿಸಿದೆ. ಪೂಜ್ಯರು ಸಂಶೋಧನಾ ಪ್ರಬಂಧಕ್ಕೆ. ಕುಂದೂರು ಮಠದ ಮಠಾಧೀಪತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ನೀಡಿದ್ದರು.

ಪ್ರೌಢಪ್ರಬಂಧದಲ್ಲಿ
ಶ್ರೀಗಳು ಸಂಪಾದಿಸಿರುವ ಪ್ರೌಢಪ್ರಬಂಧದಲ್ಲಿ ಅಂಕುಮದಾಗಮದಲ್ಲಿ 84 ಅಧ್ಯಾಯಗಳಿವೆ. 84 ಅಧ್ಯಾಯಗಳು ಇವುಗಳೆಲ್ಲ ಪರಿಪೂರ್ಣವಾಗಿ ದೇವಾಲಯಗಳು ಮತ್ತು ಅವುಗಳ ಪೂಜಾದಿ ಆರಂಭಿಸಿ, ಸಕಳ ಸ್ಥಾಪನ, ಅತ್ಯಾರ್ಥಯಜನ ಪವಿತ್ರ ವಿಧಿ, ಪಂಚಾಮೃತ ವಿಧಿ, ಚೂರ್ಣೋತ್ಸವ ವಿಧಿ, ಪರಸುಪ್ರತ್ತಯ ವಿಧಿ, ಪಾದ್ಯಾದಿವಿಧಿಗಳನ್ನು ಇಲ್ಲಿ ಅತ್ಯಂತ ಸುವಿಸ್ತಾರವಾಗಿ ವರ್ಣಿತವಾಗಿವೆ. ವಿವಿಧ ದೇವತೆಗಳಿಗೆ ಸಂಬಂಧಿಸಿದ ಅರ್ಚನಾ ಕ್ರಮಗಳ ವಿವರಗಳೂ ಇವೆ. ಉದಾಹರಣೆಗೆ ವಿನಾಯಕ ವ್ರತ, ಮುಖಲಿಂಗಾರ್ಚನ, ಗೌರೀಪವಿತ್ರ ವಿಧಿ, ನಕ್ಷತ್ರ ಪೂಜಾ ವಿಧಿ. ಅರ್ಧನಾರೀಶ್ವರ ಪೂಜಾ ವಿಧಿ. ಚಂದೇಕಾರ್ಚನ ವಿಧಿ ಮಹಾಶಾಂತಿ ವಿಧಿ, ದೇವೀಪೂಜಾ ವಿಧಿ. ಈ ಆಗಮದ ಅತ್ಯಂತ ಮಹತ್ವದ ಮತ್ತೊಂದು ಸಂಗತಿ ಏನೆಂದರೆ, ಇಲ್ಲಿ ದೇವಾಲಯಗಳ ನಿರ್ಮಾಣ, ಮೂರ್ತಿ ನಿರ್ಮಾಣದ ವಿಧಾನಗಳೂ ಸೇನಾಸ್ಥಂಭ, ಅಶ್ವಸ್ತಂಭಗಳ ಸ್ಥಾಪನೆ ಇತ್ಯಾದಿ ವಿವರಗಳಿವೆ. ಇವುಗಳ ಜತೆಗೆ, ರುದ್ರಾಕ್ರ ಭಸ್ಮಾದಿ ವಿಧಿಗಳು, ಕೃತ್ತಿಕಾದೀಪ ವಿಧಿ, ವಿವಿಧ ಪ್ರಾಯಶ್ಚಿತ್ರಗಳು, ಪ್ರದೋಷ ಪೂಜಾದಿ ವಿಧಿಗಳೆಲ್ಲವೂ ವಿಸ್ತಾರವಾಗಿ ವಿವರಣೆಗೊಂಡಿವೆ. ಇದು ದೇವಾಲಯಗಳ ವಿವಿಧ ಕರ್ಮ ವಿಧಾನಗಳಿಗೆ ಸಹಕಾರಿಯಾಗಲಿವೆ. ಶೈವ ದೇವಾಲಯಗಳ ವಿಧಿವಿಧಾನಗಳ ಬಗ್ಗೆ ಅಧ್ಯಯನ ಮಾಡುವ ಸಂಶೋಧಕರಿಗೆ ಇದು ಅನುಕೂಲವಾಗುತ್ತದೆ
ಸಾಲೂರು ಶ್ರೀಗಳನ್ನು ಪಿಎಚ್. ಡಿವರೆಗೂ ಕೈ ಹಿಡಿದು ಮುನ್ನಡೆಸಿರುವವರು ಮತ್ತೊಬ್ಬ ಶ್ರೀಗಳು. ಕುಂದೂರು ಮಠದ ಮಠಾಧೀಫತಿಗಳು ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೂ ಆಗಿರುವ ಖ್ಯಾತ ವಿದ್ವಾಂಸರಾದ ಡಾ.ಶರತ್‌ ಚಂದ್ರ ಸ್ವಾಮೀಜಿ ಮಾರ್ಗದರ್ಶನ ಗುರಿ ತಲುಪಿಸಿದೆ. ಅಂದು ಸೋತು ಬಂದ ಶಿಷ್ಯನನ್ನು ಇಂದು ಗೆಲ್ಲಿಸಿದ್ದಾರೆ. ಶ್ರೀಗಳು ಪಿಯುಸಿ ಫೇಲ್ ಆದ ಸಂದರ್ಭದಲ್ಲಿ ಡಾ.ಶರತ್ ಚಂದ್ರ ಸ್ವಾಮೀಜಿ ಆತ್ಮಸ್ಥೆರ್ಯ ತುಂಬಿದರು. ಸಂಸ್ಕೃತ ಅಧ್ಯಯನ ಮಾಡಿಸಿದರು. ಎಂ.ಎ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಾಗ ಮತ್ತೆ ಪರೀಕ್ಷೆ ಬರೆಯಲು ಸಲಹೆ ನೀಡಿ ಪೂಜ್ಯರು ಎಂ.ಫೀಲ್ ಮತ್ತು ಪಿ.ಎಚ್ಡಿ ಗೆ ಮಾರ್ಗದರ್ಶನ ನೀಡಿದರು

ಪರಮಪೂಜ್ಯ ಲಿಂ. ಶ್ರೀ ಗುರುಸ್ವಾಮೀಜಿ ಆಶೀರ್ವಾದ, ಪ್ರೇರಣೆ ನೀಡಿದ ಕುಂದೂರು ಮಠದ ಡಾ.ಶರತ್‌ಚಂದ್ರ ಸ್ವಾಮೀಜಿ, ಸುತ್ತೂರು ದೇಗುಲಮಠದ ಶ್ರೀಗಳ ಮಾರ್ಗದರ್ಶನದಲ್ಲಿ ಶ್ರೀಮಠದ ಅಭ್ಯುದಯಕ್ಕಾಗಿ ಅಳಿಲು ಸೇವೆ ಸಲ್ಲಿಸುತ್ತಿದ್ದೇನೆ. ಪಿಯುಸಿ ಫೇಲ್ ಆದ ಬಳಿಕ ಸಂಸ್ಕೃತ ಅಧ್ಯಯನದಲ್ಲಿ ತೊಡಗಿ ಪಿಎಚ್.ಡಿ ಪದವಿ ಪಡೆದಿದ್ದೇನೆ. ಒಬ್ಬ ಯಶಸ್ತಿ ವ್ಯಕ್ತಿಯ ಹಿಂದೆ ಒಂದು ನೋವಿನ ಕಥೆ ಇರುತ್ತದೆ. ಹಾಗೆ ಆ ನೋವಿನ ಕತೆಗೂ ಒಂದು ಯಶಸ್ವಿ ಅಂತ್ಯ ಇರುತ್ತದೆ.
| ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಪೀಠಾಧಿಪತಿ, ಶ್ರೀ ಸಾಲೂರು ಬೃಹನ್ಮಠ , ಮಹದೇಶ್ವರ ಬೆಟ್ಟ

Spread the love

Leave a Reply