ತಾಲೂಕಿನ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಪರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಜಗಜ್ಯೋತಿ, ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವಣ್ಣನವರ ೮೯೨ನೇ ಜಯಂದಿ ಕಾರ್ಯಕ್ರಮ ಮೇ ೨೭ರಂದು ಬೆಳಿಗ್ಗೆ ೧೦ ಗಂಟೆಗೆ ಪಟ್ಟಣದ ಕೊಂಗವೀರೇಗೌಡರ ಹಾಸ್ಟೆಲ್ ಮೈದಾನದಲ್ಲಿ ನಡೆಯಲಿದೆ.
ಮಂಗಳವಾರ ೧೦-೩೦ಕ್ಕೆ ನಡೆಯುವ ಧರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ದೇವನೂರು ಗುರುಮಲ್ಲೇಶ್ವರ ದಾಸೋಹ ಮಠದ ಶ್ರೀ ಮಹಂತಸ್ವಾಮೀಜಿ ಹಾಗೂ ಸಾಲೂರು ಬೃಹನ್ಮಠದ ಮುಮ್ಮಡಿ ಶಾಂತಮಲ್ಲಿಕಾರ್ಜುನಸ್ವಾಮೀಜಿ ವಹಿಸುವರು. ಮುಡಿಗುಂಡ ವಿರಕ್ತ ಮಠದ ಶ್ರೀ ಶ್ರೀಕಂಠಸ್ವಾಮೀಜಿ ಉದ್ಘಾಟಿಸುವರು. ಮೈಸೂರು ಕುಂದೂರು ಮಠದ ಶ್ರೀ ಡಾ.ಶರಶ್ಚಂದ್ರಸ್ವಾಮೀಜಿ ಬಸವ ನುಡಿ ನುಡಿಯವರು, ಜಾಗತೀಕ ಲಿಂಗಾಯತ ಮಹಾಸಭಾ ತಾಲೂಕು ಘಟಕದ ಗೌರವಾಧ್ಯಕ್ಷರಾದ ಕಾಮಗಾರೆ ಪಟ್ಟಣದ ಮಠದ ಮುಮ್ಮಡಿ ಶಾಂತಮಲ್ಲಿಕಾರ್ಜುನಸ್ವಾಮೀಜಿ ಅಧ್ಯಕ್ಷತೆ ವಹಿಸುವರು.
ಗುಂಡೇಗಾಲ ಪಟ್ಟದ ಮಠದ ಮಲ್ಲಿಕಾಜುಸ್ವಾಮೀಜಿ, ಚಿಲಕವಾರಿ ಗುರುರಾಮಯೋಗೀಶ್ವರ ಮಠದ ಇಮ್ಮಡಿ ಗುರುಲಿಂಗಸ್ವಾಮೀಜಿ, ಹೊಂಡರಬಾಳು ಮಠದ ಶ್ರೀ ಪ್ರಸನ್ನ ಮಲ್ಲಿಕಾರ್ಜುನಸ್ವಾಮೀಜಿ, ಕುಂತೂರು ಮಠದ ಶಿವಪ್ರಭುಸ್ವಾಮೀಜಿ, ಚಿಕ್ಕಿಂದವಾಡಿ ಮಠದ ಬಾಲಷಡಕ್ಷರಸ್ವಾಮೀಜಿ, ಆಲಹಳ್ಳಿ ಮಠದ ಇಮ್ಮಡಿ ಬಸಪ್ಪಸ್ವಾಮೀಜಿ, ಕೊಳ್ಳೇಗಾಲ ದಾಸೋಹ ಮಠದ ಶಿವಪ್ಪಸ್ವಾಮೀಜಿ ದಿವ್ಯ ಸಮ್ಮುಖ ವಹಿಸುವರು.
ಮಾಜಿ ಶಾಸಕಿ ಪರಿಮಳನಾಗಪ್ಪ, ಚಾಮೂಲ್ ಅಧ್ಯಕ್ಷ ನಂಜುAಡಸ್ವಾಮಿ, ಯುವ ಮುಖಂಡ ನಿಶಾಂತ್, ತಾ.ಪಂ.ಇಓ ಗುರುಶಾಂತಪ್ಪ ಬೆಳ್ಳುಂಡಗಿ, ಗ್ರಾಮಾಂತರ ಠಾಣೆ ಪಿಎಸ್ಐ ಸುಪ್ತೀತ್, ಜಾಗತಿಕ ಮಹಾಸಭಾ ಜಿಲ್ಲಾಧ್ಯಕ್ಷರಾದ ಕಾಳನಹುಂಡಿ ಗುರುಸ್ವಾಮಿ, ತಾಲೂಕು ಅಧ್ಯಕ್ಷ ಲೋಕೇಶ್ ಎಂ ಪಾಲ್ಗೊಳ್ಳುವರು, ಬೆಳಿಗ್ಗೆ ೮-೩೦ಕ್ಕೆ ರಾಜೇಶ್ ಹಂಪಾಪುರ ಇವರ ವೃಂದದವರಿAದ ಭಜನಾ ಕಾರ್ಯಕ್ರಮ ನಡೆಯಲಿದೆ, ಮಧ್ಯಹ್ನ ೧ ಗಂಟೆಗೆ ಪ್ರಸಾದ ವಿನಿಯೋಗ ನಡೆಯಲಿದೆ.
