
ವರದಿ ಲಿಂಗಪ್ಪ :
ರಕ್ಷಕರೆ ಭಕ್ಷಕರಾದರೆ ಸಾಮಾನ್ಯ ಜನರ ಗತಿ ಏನು? ಮನೆ ಮನೆಗೆ ಬರುವ ಪೊಲೀಸರನ್ನು ನಂಬುವುದು ಹೇಗೆ?
ಚಾಮರಾಜನಗರ ಕಡಿಮೆ ಸಮಯದಲ್ಲಿ ಹಣ ಡಬಲ್ ಮಾಡಿಕೊಡುತ್ತೇವೆ ಎಂದು ತಮಿಳುನಾಡು ಮೂಲದ ವ್ಯಕ್ತಿಗೆ ಲಕ್ಷಾಂತರ ರೂಪಾಯಿ ವಂಚಿಸಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ನಾಲ್ಕು ಮಂದಿ ಪೊಲೀಸರು ಸೇರಿ 7 ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.
ನಗರದ ಅನ್ಸಾರಿ ಮತ್ತು ಸೈಯದ್ ಇಮ್ರಾನ್ ಹಾಗೂ ನಾಲ್ಕು ಜನ ಪೊಲೀಸರು ಠಾಣೆಯ ಪ್ರಭಾರ ಪಿಎಸ್ಐ ನ ಅಯ್ಯನಗೌಡ ಸಿಬ್ಬಂದಿಗಳಾದ ಮಹೇಶ್, ಮೋಹನ್ ಹಾಗೂ ಪಟ್ಟಣ ಠಾಣೆಯ ಬಸವಣ್ಣ ಮತ್ತು ಕೇರಳ ಮೊಲದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಅಮಾನತು: ಸೆನ್ ಠಾಣೆಯ ಪಿ ಎಸ್ ಐ ಅಯ್ಯನಗೌಡ ಸಿಬ್ಬಂದಿಗಳಾದ ಮಹೇಶ್ ಮೋಹನ್ ಹಾಗೂ ಪಟ್ಟಣ ಠಾಣೆಯ ಬಸವಣ್ಣ ಅವರನ್ನು ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಟಿ. ಕವಿತಾ ತಿಳಿಸಿದ್ದಾರೆ. ತಮಿಳುನಾಡು ತಿರುಪೂರ್ ಗಾರ್ಮೆಂಟ್ಸ್ ವ್ಯಾಪಾರಿ ಸಚ್ಚಿದಾನಂದ ಎಂಬುವವರಿಂದ ಸುಮಾರು ೩.೭೦ ಲಕ್ಷ ದೋಚಿಕೊಂಡು ಆರೋಪಿಗಳು ಪರಾರಿಯಾಗಿದ್ದಾರೆ. ಈ ಸಂಬಂಧ ಸಚ್ಚಿದಾನಂದ ಅವರು ನೀಡಿರುವ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಕೈಗೊಂಡುದ್ದು ಆರೋಪಿಗಳಿಗೆ ಶೋಧ ನಡೆಸಿದ್ದಾರೆ.
ಸಬ್ ಇನ್ಸ್ಪೆಕ್ಟರ್ ಅಯ್ಯನಗೌಡ ಅವರನ್ನು ಹಿಡಿಯಲು ಸಿನಿಮಾದ ರೀತಿಯಲ್ಲಿ ಪೊಲೀಸರು ಕನಕಪುರದವರೆಗೂ ಹಿಂಬಾಲಿಸಿದ್ದಾರೆ. ಇಲ್ಲಿ ಪೊಲೀಸರೇ ಪೊಲೀಸರನ್ನು ಹಿಡಿಯುವ ನಗೆ ಪಾಟಲಿಗೆ ಪರಿಸ್ಥಿತಿಯಾಗಿದೆ.
ಅನ್ಸಾರಿ ಮತ್ತು ಸೈಯದ್ ಇಮ್ರಾನ್ ಅವರನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಏನಿದು ಪ್ರಕರಣ : ನಗರ ತಮಿಳುನಾಡಿನ ವ್ಯಾಪಾರಿ ಸಚ್ಚಿದಾನಂದ ಅವರನ್ನು ಪರಿಚಯ ಮಾಡಿಕೊಂಡಿದ್ದು ವ್ಯಾಪಾರದಲ್ಲಿ ನೀವು ಹೂಡಿಕೆ ಮಾಡಿದರೆ ಡಬಲ್ ಹಣ ಮಾಡಿಕೊಡುವುದಾಗಿ ಹೇಳಿದ್ದಾರೆ ಈ ಸಂಬಂಧ ಚರ್ಚಿಸಲು ಚಾಮರಾಜನಗರಕ್ಕೆ ಆಹ್ವಾನಿಸಿದ್ದಾರೆ ಸಚ್ಚಿದಾನಂದ ಅವರು ಸುಮಾರು ಮೂರು ಲಕ್ಷ ರೂ ತಂದಿದ್ದಾರೆ ನಗರದ ಸತ್ತಿ ರಸ್ತೆಯಲ್ಲಿರುವ ಡೆಲ್ಲಿ ದರ್ಬಾರ್ ಹೋಟೆಲ್ ನ ರೂಂ ನಂಬರ್ 107ರಲ್ಲಿ ಆರೋಪಿ ಅನ್ಸಾರಿ ಭೇಟಿಗೆ ಬಂದಾಗ ಪೇದೆಗಳಾದ ಬಸವಣ್ಣ ಮಹೇಶ್ ಹಾಗೂ ಮೋಹನ್ ರೂಂಗೆ ಬಂದು ಸಚ್ಚಿದಾನಂದ ಅವರನ್ನು ಬೆದರಿಸಿ ೩ ಲಕ್ಷ ಪಡೆದುಕೊಂಡಿದ್ದಾರೆ. ಅದಲ್ಲದೆ ಗೂಗಲ್ ಪೇ ಮೂಲಕ ೭೦೦೦೦ ಪಡೆದುಕೊಂಡಿದ್ದಾರೆ. ನಂತರ ದೂರು ದಾಖಲು ಪಡೆದುಕೊಂಡಿದ್ದಾರೆ. ಬಳಿಕ ಸಚ್ಚಿದಾನಂದ ಅವರನ್ನು ರೂಮ್ ನಿಂದ ಆಚೆ ಕಳಿಸಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ.
ಈ ಹಣ ಡಬ್ಬಿಂಗ್ ಪ್ರಕರಣದಲ್ಲಿ ರಕ್ಷಿಸಬೇಕಾದ ಪೊಲೀಸರೇ ಭಕ್ಷಕರಾಗಿ ರಾಬ್ಡಿ ಮಾಡಿರುವುದರಿಂದ ಇನ್ನು ಜನಸಾಮಾನ್ಯರನ್ನು ಹೇಗೆ ರಕ್ಷಿಸುತ್ತಾರೆ ಎಂಬುದರ ಜೊತೆಗೆ ಮನೆ ಮನೆ ಪೊಲೀಸರ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಾಗಿದ್ದು ಜನರು ಪೊಲೀಸರನ್ನು ಅನುಮಾನದಿಂದ ನೋಡುವಂತಾಗಿದೆ.
ಪೊಲೀಸರೇ ನನ್ನಲ್ಲಿದ್ದ ಹಣವನ್ನು ಪಡೆದುಕೊಂಡಿದ್ದಾರೆ ಎಂದು ಸಚ್ಚಿದಾನಂದ ಅವರ ಸ್ಪಷ್ಟವಾಗಿ ದೂರಿನಲ್ಲಿ ದಾಖಲಿಸಿದ್ದಾರೆ.