ಸೆಪ್ಟೆಂಬರ್ 24ಕ್ಕೆ ಜಿಲ್ಲೆಗೆ ಬಸವ ಸಂಸ್ಕೃತಿ ಅಭಿಯಾನ ಆಗಮನ

ಬಸವ ಸಂಸ್ಕೃತಿ ಅಭಿಯಾನ ಜಿಲ್ಲಾಧ್ಯಕ್ಷರಾಗಿ ಕೋಡಿಮೋಳೆ ರಾಜಶೇಖರ್ ಆಯ್ಕೆ

ಬಸವ ಸಂಸ್ಕೃತಿ ಅಭಿಯಾನ ಕರುನಾಡಿನ ಪ್ರತಿ ಜಿಲ್ಲೆಯ ವಚನ ಜಾಗೃತಿ ಜಾತ ಸೆಪ್ಟೆಂಬರ್ 1 ರಿಂದ ಅಕ್ಟೋಬರ್ 1 ರವರೆಗೆ ನಡೆಯಲಿದೆ.
ಬಸವಣ್ಣನಿಂದ ಬದುಕಿತ್ತೀ ಲೋಕವೆಲ್ಲ……..
ವಿಶ್ವ ಸಂಸ್ಕೃತಿಯ ಸ್ವರ್ಣೋಧ್ಯಾಯದಲ್ಲಿ ಸಮಾನತೆಯ ಸೂರ್ಯನಾಗಿ ಅವತರಿಸಿದವರು ವಿಶ್ವಗುರು ಬಸವಣ್ಣನವರು. 12ನೇ ಶತಮಾನದಲ್ಲಿ ಮಾನವೀಯತೆಯ ಮಣಿಹ ಪೂರೈಸಿದ ಮಹಾಮಾನವತಾವಾದಿಗಳು. ಕಾಯಕ -ದಾಸೋಹ -ಅನುಭವ -ಸಮಾನತೆ -ಶಿವಯೋಗ -ಸ್ತ್ರಿಕುಲೋದ್ಧಾರ-ಅನಿಷ್ಟ ಪದ್ಧತಿಗಳ ನಿರಾಕರಣೆ, ದಲಿತೋದ್ಧಾರ ಹೀಗೆ ಜಾಗತಿಕ ಮೌಲ್ಯಗಳನ್ನು ಪ್ರತಿಷ್ಠಾಪಿಸಿ ಸಕಲ ಜೀವಾತ್ಮರಿಗೂ ಲೇಸು ಬಯಸಿದವರು. ಅಷ್ಟೇ ಅಲ್ಲದೆ ಸಮಾಜೋಧಾರ್ಮಿಕ ಆಂದೋಲನದ ಮೂಲಕ 770 ಶರಣ ಶರಣೆಯರು ಒಂದೆಡೆ ಸೇರಿ ಕನ್ನಡದ ದೇಸಿ ನುಡಿಗಡಣ “ವಚನಗಳನ್ನು” ರಚಿಸಿದ್ದು ವಿಶ್ವದ ಇತಿಹಾಸದಲ್ಲಿಯೇ ಇದು ಮೊದಲು ಎಂದೆನಿಸಿದೆ. ಇದರ ನೇತೃತ್ವ ಬಸವಣ್ಣನವರದಾಗಿತ್ತು ವಿಶ್ವಕ್ಕೆ ಪ್ರಜಾಪ್ರಭುತ್ವದ ಪ್ರಥಮ ಸಂವಿಧಾನ “ಅನುಭವ ಮಂಟಪ” ವನ್ನು ನಿರ್ಮಿಸಿದ ಜಾಗತಿಕ ಯುಗಪುರುಷ ಶ್ರೀ ಬಸವಣ್ಣನವರು.
ಅರ್ಥರ್ ಮೈಲ್ಸ್ ಹೇಳಿದಂತೆ ಭಾರತದ ಮೊಟ್ಟಮೊದಲ ಸ್ವತಂತ್ರ ವಿಚಾರವಾದಿ ಎನಿಸಿದ ಬಸವಣ್ಣನವರು ಶತಮಾನಗಳಿಂದಲೂ ಜಿಡ್ಡುಗಟ್ಟಿನ ಸಮಾಜದಲ್ಲಿ ಉಚ್ಚ -ನೀಚ ಬಡವ -ಬಲ್ಲಿದ ಜಾತಿ- ಮತ ವರ್ಣ- ವರ್ಗ ಕಣಿ ಕಲ್ಪನೆ ಹೀಗೆ ಅನಂತ ಅನಿಷ್ಟಗಳನ್ನು ಬುಡ ಸಮೇತ ಕಿತ್ತು ಬಿಸಾಡಿ ಸರ್ವರಿಗೂ ಸಮಾನತೆಯ ಲಿಂಗಾಯತ ಧರ್ಮ ನೀಡಿದ ಧರ್ಮದೃಷ್ಟಾರರು ಶ್ರೀ ಬಸವಣ್ಣನವರು. ಹೀಗೆ ಸಮಗ್ರ ಸಂಸ್ಕೃತಿಯನ್ನು ಇಡೀ ಸಮುದಾಯಕ್ಕೆ ತಲುಪಿಸಿದ ವಿಶ್ವದ ಸಾಂಸ್ಕೃತಿಕ ನಾಯಕ ಶ್ರೀ ಬಸವಣ್ಣನವರು ಅವರ ನೆನಹೇ ನಮಗೆಲ್ಲ ನಿಜದ ನಂದಾದೀಪ.

ಲಿಂಗಾಯತ ಮಠಾಧಿಪತಿಗಳ ಒಕ್ಕೂಟ
ಧರ್ಮ ಗುರು ಬಸವಣ್ಣನವರ ಸಮಾಜೋಧಾರ್ಮಿಕ ಆಶಯಗಳನ್ನೇ ಆದರ್ಶವಾಗಿ ಇರಿಸಿಕೊಂಡು ಹುಟ್ಟು ಪಡೆದ ಸಮಾಜಮುಖಿ ಸಂಘಟನೆ ಲಿಂಗಾಯತ ಮಠಾಧಿಪತಿಗಳ ಒಕ್ಕೂಟ
ದಿನಾಂಕ 10.03.2021 ರಂದು ಸಂಸ್ಥೆಯನ್ನು ಆರಂಭಿಸಲಾಯಿತು. ಈ ನಾಲ್ಕು ವರ್ಷಗಳ ಅವಧಿಯಲ್ಲಿ 10 ಹಲವು ಜನಪರ ಕಾರ್ಯಕ್ರಮಗಳನ್ನು ಚಿಂತನ ಕಮಟಗಳನ್ನು ಪಾದಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿದೆ. ಲಿಂಗಾಯತ ಧರ್ಮ ಸ್ವತಂತ್ರ ಧರ್ಮದ ಮಾನ್ಯತೆಗಾಗಿ ಬೃಹತ್ ಸಮಾವೇಶಗಳನ್ನು ಸಂಘಟಿಸಿದ ಹೆಮ್ಮೆ ಒಕ್ಕೂಟದ್ದಾಗಿದೆ.
“ಕರ್ನಾಟಕ ಸಾಂಸ್ಕೃತಿಕ ನಾಯಕ ಬಸವಣ್ಣನವರು” ಎಂದು ಕರ್ನಾಟಕ ಸರ್ಕಾರ ಘೋಷಣೆ ಮಾಡುವಲ್ಲಿ ಸಂಘಟನೆ ಮಹತ್ವದ ಪಾತ್ರ ವಹಿಸಿದೆ. ಹೀಗೆ ಅನೇಕ ಮೌಲಿಕ ಮತ್ತು ಚಾರಿತ್ರಿಕ ಘಟನೆಗಳು ಸಾಕಾರವಾಗುವಲ್ಲಿ ಒಕ್ಕೂಟ ಅವಿರತ ಸೇವೆ ಸಲ್ಲಿಸಿದೆ, ಸಲ್ಲಿಸುತ್ತಿದೆ.
ಈಗ ಈ ಸಂಘಟನೆಯ ವತಿಯಿಂದ ಪ್ರಾರಂಭಗೊಳ್ಳಲಿರುವ ಮತ್ತೊಂದು ಮಹಾಕಾರ್ಯ “ಬಸವ ಸಂಸ್ಕೃತಿ ಅಭಿಯಾನ” ಕರುನಾಡಿನ ಜನಮನದ ಜಾಗೃತಿ ಅಭಿಯಾನ

ಚಾಮರಾಜನಗರ ರಾಜ್ಯದ ಲಿಂಗಾಯತರ ಮಠಾಧೀಶರ ನೇತೃತ್ವದಲ್ಲಿ ನಡೆಯುವ ಬಸವ ಸಂಸ್ಕೃತಿ ಅಭಿಯಾನ- 2025ರ ಜಿಲ್ಲಾಧ್ಯಕ್ಷರಾಗಿ ಕೋಡಿ ಮಳೆ ರಾಜಶೇಖರ್ ಹಾಗೂ ಗೌರವ ಅಧ್ಯಕ್ಷರಾಗಿ ಸಂತೆಮರಳ್ಳಿ ವೇದಮೂರ್ತಿಯವರನ್ನು ನೇಮಕ ಮಾಡಲಾಯಿತು. ನಗರದ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಕಚೇರಿಯಲ್ಲಿ ನಡೆದ ಬಸವ ಅನುಯಾಯಿಗಳು ವಿವಿಧ ಸಂಘ ಸಂಸ್ಥೆಗಳ ಮುಖಂಡರ ಸಭೆಯಲ್ಲಿ ಒಮ್ಮತದಿಂದ ಅಭಿಯಾನವನ್ನು ಯಶಸ್ವಿಗೊಳಿಸಲು ಸಮಿತಿಯನ್ನು ರಚನೆ ಮಾಡಲು ತೀರ್ಮಾನಿಸಲಾಯಿತು. ಬಸವ ಸಂಸ್ಕೃತಿ ಅಭಿಯಾನ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ನೇಮಕ ಮಾಡಿ ಒಂದು ತಿಂಗಳ ಕಾಲ ಜಿಲ್ಲೆಯಾದ್ಯಂತ ಸಂಚರಿಸಿ ಅಭಿಯಾನವನ್ನು ಯಶಸ್ವಿಗೊಳಿಸುವ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲಾಯಿತು. ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಲಿಂಗಾಯತರ ಮಠಾಧೀಶರ ನೇತೃತ್ವದಲ್ಲಿ ರಾಜ್ಯಾದ್ಯಂತ ಸೆಪ್ಟೆಂಬರ್ ಒಂದರಿಂದ ಆರಂಭಗೊಂಡು ಅಕ್ಟೋಬರ್ ಒಂದರವರೆಗೆ ಒಂದು ತಿಂಗಳ ಕಾಲ 31 ಜಿಲ್ಲೆಗೂ ಆಗಮಿಸಲಿದೆ. ಚಾಮರಾಜನಗರ ಜಿಲ್ಲೆಗೆ ಸೆಪ್ಟೆಂಬರ್ 24ರಂದು ಬಸವ ಸಂಸ್ಕೃತಿ ಅಭಿಯಾನ ಆಗಮಿಸಲಿದ್ದು ಈ ಅಭಿಯಾನವನ್ನು ಯಶಸ್ವಿಗೊಳಿಸಿ ಬಸವ ಪರಂಪರೆ ಸಂಸ್ಕೃತಿ ವಚನ ಸಾಹಿತ್ಯ ಹಾಗೂ ಬಸವ ಮಠಗಳು ಹಾಗೂ ಧರ್ಮ ಜಾಗೃತಿ ಮೂಡಿಸುವ ಉದ್ದೇಶ ಇದಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ಲಿಂಗಾಯತ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಬಸವ ಬಳಗ ಬಸವ ಅನುಯಾಯಿಗಳು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಕಾಳನಹುಂಡಿ ಗುರುಸ್ವಾಮಿ ಮನವಿ ಮಾಡಿದರು.
ಜಿಲ್ಲಾ ಬಸವ ಕೇಂದ್ರದ ಅಧ್ಯಕ್ಷ ಏನ್ ರಿಚ್ ಮಹದೇವ ಸ್ವಾಮಿ ಮಾತನಾಡಿ ಬಸವ ಸಂಸ್ಕೃತಿ ಅಭಿಯಾನ ಬೀದರ್ ನ ಕೂಡಲಸಂಗಮದಿಂದ ಲಿಂಗಾಯತ ಮಠಾಧೀಶರ ನೇತೃತ್ವದಲ್ಲಿ ಸಂಚರಿಸಿ ತಮ್ಮ ಜಿಲ್ಲೆಗೆ ಆಗಮಿಸುತ್ತಿದೆ ಅಭಿಯಾನ ಬಸವ ಸಂಸ್ಕೃತಿ, ವಚನ ಸಂಸ್ಕೃತಿ ಬಸವಾದಿ ಶರಣ ಆಚಾರ ವಿಚಾರಗಳನ್ನು ಬಿಂಬಿಸುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಅದ್ದೂರಿಯಾಗಿ ಆಚರಣೆ ಮಾಡುವ ಜೊತೆಗೆ ಶರಣ ಸಂಸ್ಕೃತಿಯನ್ನು ಪಸರಿಸುವ ಕೆಲಸವಾಗಬೇಕಾಗಿದೆ ಈ ನಿಟ್ಟಿನಲ್ಲಿ ಬಸವ ಅನುಯಾಯಿಗಳು ಅಭಿಯಾನದಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು. ಅಭಿಯಾನಿ ಕಾರ್ಯದರ್ಶಿಯಾಗಿ ಏನ್ ರಿಚ್ ಮಹಾದೇವಸ್ವಾಮಿ, ಖಜಾಂಚಿಯಾಗಿ ವೀರಶೈವ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿದ್ಧಮಲ್ಲಪ್ಪ, ಗೌರವ ಸಲಹೆಗಾರರಾಗಾಗಿ ವಕೀಲ ಕಾಳನಹುಂಡಿ ವಿರೂಪಾಕ್ಷ, ಎಲ್ಲಾ ವೀರಶೈವ ಲಿಂಗಾಯತ ಸಂಘ ಸಂಸ್ಥೆಗಳ ಜಿಲ್ಲಾಮಟ್ಟದ ಅಧ್ಯಕ್ಷರನ್ನು ಸಂಚಾಲಕರನಾಗಿ ಮಾಜಿ ಸೈನಿಕ ಗಂಗಾಧರ್, ಸುಂದರಪ್ಪ, ಲೋಕೇಶ್ ಬಿಂದು, ಹೆಗ್ಗೊಠಾರ ವಿಜಿ, ಬಸವಣ್ಣ ಹೊನ್ನೂರು ಶಿವಪ್ರಸಾದ್, ಚಾಮರಾಜನಗರ ಶಿಕ್ಷಕಿ ಯಾಲಕ್ಕೂರು ನಿರ್ಮಲ, ಅನಾಪುರ ಉಮೇಶ್, ತಿಮ್ಮರಾಜಿಪುರ ಪುಟ್ಟಣ್ಣ ಸೇರಿದಂತೆ ಅನೇಕರು ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಲು ನೇಮಕ ಮಾಡಲಾಯಿತು. ನಂಜೆದೇವನಪುರ ಗುರುಸ್ವಾಮಿ, ಆರ್ .ಪುಟ್ಟಮಲ್ಲಪ್ಪ, ಮೂಡ್ಲಪುರ ಮಹೇಶ್, ರಾಮಣ್ಣ,ಹೆಗ್ಗೊಠಾರ ಶಿವಸ್ವಾಮಿ, ಕೆಂಪನಪುರ ಮಹಾದೇವಸ್ವಾಮಿ, ಅರಕಲವಾಡಿ ನಾಗಮಲ್ಲಪ್ಪ ಘಾನಾಚಾರ ವೇದಿಕೆಯ ರಾಜ್ಯಧ್ಯಕ್ಷ ನವಿಲೂರು ಸಿದ್ದಪಲ್ಲಿಕಾರ್ಜುನ ಸ್ವಾಮಿ ಅಂಕನಶೆಟ್ಟಿಪುರ ಪ್ರಸನ್ನ, ನಾಗರಾಜು ಇದ್ದರು.

Spread the love

Leave a Reply