TRENDING

Banner1
Banner2
Banner3
Banner4
previous arrow
next arrow

News View

News

18-12-2024

17-12-2024

16-12-2024

ಕೊಳ್ಳೇಗಾಲ ಡಿ ೧೫ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯಕ್ಕೆ ನಟ ಡಾ.ಶಿವರಾಜ್ ಕುಮಾರ್ ರವರು ಅವರ ಪತ್ನಿ ಗೀತಾರವರ ಜತೆ ಭಾನುವಾರ ಬೆಳಿಗ್ಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.ಶಿವರಾಜ್ ಕುಮಾರ್ ಅನಾರೋಗ್ಯದ ಹಿನ್ನೆಲೆ ಡಿ.೧೮ ಕ್ಕೆ ವಿದೇಶಕ್ಕೆ ಚಿಕಿತ್ಸೆಗೆ ತೆರಳುವ ಮುನ್ನ ಪ್ರತಿ ವರ್ಷದಂತೆ ಈ ವರ್ಷವೂ ಶಿವರಾಜ್ ಕುಮಾರ್ ಹಾಗೂ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಆಗಮಿಸಿ ಶಿವನಸಮುದ್ರ ಸಮೂಹದ ದೇವಾಲಯಕ್ಕೆ ಭೇಟಿ ಪೂಜೆ ಸಲ್ಲಿಸಿದರು.ಮೊದಲಿಗೆ ವೆಸ್ಲಿ ಸೇತುವೆಯ ಕೆಳಗಡೆ ಕಾವೇರಿ ನದಿಯ ಬಳಿ ತೆರಳಿ ನೀರನ್ನು ದಂಪತಿಗಳು ತಲೆ ಮೇಲೆ ಪ್ರೋಕ್ಷಣೆ ಮಾಡಿಕೊಂಡು ಬಾಗಿನ ಅರ್ಪಿಸಿದರು.ಬಳಿಕ ಪಕ್ಕದಲ್ಲಿರುವ ಗಣಪತಿ ದೇವಸ್ಥಾನ, ಮಧ್ಯರಂಗನಾಥಸ್ವಾಮಿ ದೇವಸ್ಥಾನ, .ಮೀನಾಕ್ಷಿ ಸಮೇತ ಸೆÆÃಮೇಶ್ವರ ದೇವಸ್ಥಾನನದಲ್ಲಿ ಶ್ರೀ ಚಕ್ರ ದರ್ಶನ ಮಾಡಿದರು. ಹಾಗೂ ಆದಿಶಕ್ತಿ ಮಾರಮ್ಮ ದೇವಸ್ಥಾನದಲ್ಲಿ ದೇವಿಗೆ ಸೀರೆ ಕಾಣಿಕೆ ಮಾಡಿ ದಂಪತಿಗಳು ಅಭಿಮಾನಿಗಳ ಜೊತೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.ಶಿವನಸಮುದ್ರ ದೇವಾಲಯಕ್ಕೆ ಆಗಮಿಸಿದ್ದ ನಟ ಶಿವರಾಜ್ ಕುಮಾರ್ ದಂಪತಿಗಳನ್ನು ಸಮೂಹ ದೇವಾಲಯದ ಆಡಳಿತಾಧಿಕಾರಿ ಬಿ.ಆರ್.ಮಹೇಶ್ ಮಾರ್ಗದರ್ಶನದಲ್ಲಿ ಕಾರ್ಯನಿರ್ವಾಹಕಾಧಿಕಾರಿ ಸುರೇಶ್ ಅವರು ಹಾರ ಹಾಕಿ ಬರಮಾಡಿ ಕೊಂಡರು. ಬಳಿಕ ಶಿವರಾಜ್ ಕುಮಾರ್ ರವರು ಅಭಿಮಾನಿಗಳ ಜೊತೆ ಮಾತನಾಡಿದರು. ನಿರ್ಮಾಪಕರೊಬ್ಬರು ಉಪಹಾರ ವ್ಯವಸ್ಥೆ ಮಾಡಿದ್ದರು. ಈ ವೇಳೆ ಶಿವರಾಜ್ ಕುಮಾರ್ ಅಭಿಮಾನಿ ಗಳ ಸಂಘದ ಅಧ್ಯಕ್ಷರು ಲಾಡ್ಜ್ ಪ್ರಭು, ಅಪ್ಪು ಟೀಮ್ ಅಧ್ಯಕ್ಷ ರಾಜೇಶ್, ರಾಜ್ಯ ಘಟಕದ ಉಮೇಶ್, ಹೊನ್ನೇಗೌಡ, ಮಲ್ಲ, ನಾರಾಯಣ್, ಸತ್ತೇಗಾಲ ದಿವ್ಯಕುಮಾರ್ ಹಾಗೂ ಅಭಿಮಾನಿಗಳು ಹಾಜರಿದ್ದರು.

15-12-2024