ಅಕ್ರಮವಾಗಿ ಸಂಗ್ರಹಿಸಿಕ್ಫ್ಕಿದ್ದ ೭೪೩ ಕೆ.ಜಿ ಅಕ್ಕಿ ವಶ ಕೊಳ್ಳೇಗಾಲ: ಅಕ್ರಮವಾಗಿ ಪಡಿತರ ಅಕ್ಕಿಯನ್ನು ಸಂಗ್ರಹಿಸಿಟ್ಟಿದ್ದ ಸ್ಥಳಕ್ಕೆ ಪೊಲೀಸ್ ಇಲಾಖೆ ಮತ್ತು ಆಹಾರ ಇಲಾಖೆ ಜಂಟಿ ದಾಳಿ ನಡೆಸಿದಾಗ ಪರಾರಿಯಾಗಿದ್ದು, 14 ಮೂಟೆಯಲ್ಲಿ ಸಂಗ್ರಹಿಸಿಟ್ಟಿದ್ದ 743 ಕೆಜಿ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ.ಪಾಳ್ಯ ಗ್ರಾಮದ ಸುಬ್ಬನಾಯಕ ಎಂಬಾತ ಪರಾರಿಯಾದ ಆರೋಪಿ. ಈತ ಪಾಳ್ಯ ಗ್ರಾಮದ ಜನರಿಂದ ಕಡಿಮೆ ಬೆಲೆಗೆ ಪಡಿತರ ಅಕ್ಕಿಯನ್ನು ಖರೀದಿ ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಲುವಾಗಿ ಸಂಗ್ರಹಿಸಿಟ್ಟಿದ್ದ ಖಚಿತ ಮೇರೆಗೆ ಆಹಾರ ನಿರೀಕ್ಷಕ ಪ್ರಸಾದ್ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಸುಪ್ರೀತ್ ಸಿಬ್ಬಂದಿಗಳು ದಾಳಿ ನಡೆಸಿದಾಗ ಆರೋಪಿ ಪರಾರಿಯಾಗಿದ್ದು, ದಾಸ್ತಾನು ಮಾಡಿದ್ದ ಅಕ್ಕಿ ಮೂಟೆಗಳನ್ನು ವಶಕ್ಕೆ ಪಡೆದಿದ್ದಾರೆ.ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಪರಾರಿಯಾದ ಆರೋಪಿ ಪತ್ತೆಗೆ ಕ್ರಮ ಜರುಗಿಸಿದ್ದಾರೆ.ದಾಳಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ಐ ಮಧು ಕುಮಾರ್, ಡಿವೈಎಸ್ಪಿ ಅಪರಾಧ ಪತ್ತೆದಳದ ಎಎಸ್ಐ ತಖೀಉಲ್ಲಾ, ಹೆಡ್ ಕಾನ್ಸಟೇಬಲ್ ವೆಂಕಟೇಶ್, ರವಿಕುಮಾರ್, ಬಿಳಿಗೌಡ ಇದ್ದರು.