You are currently viewing ಐದು ಹುಲಿಗಳಿಗೆ ವಿಷ ಪ್ರಾಷನ – ಮೂವರ ಬಂಧನ

ಐದು ಹುಲಿಗಳಿಗೆ ವಿಷ ಪ್ರಾಷನ – ಮೂವರ ಬಂಧನ

ಚಾಮರಾಜನಗರ ಜುಲೈ 28 ಮಲೆ ಮಾದೇಶ್ವರ ಬೆಟ್ಟ ವನ್ಯಜೀವಿಧಾಮದ ಹೂಗ್ಯo ಅರಣ್ಯ ವಲಯದ ಮೀಣ್ಯಂ ಗಾಜನೂರು ಅರಣ್ಯ ವಲಯದಲ್ಲಿ ಸತ್ತ ತಾಯಿ ಹುಲಿ ಮತ್ತು ನಾಲ್ಕು ಮರಿಗಳಿಗೆ ವಿಷ ಪ್ರಾಷನ ಮಾಡಿ ದಾರುಣ ಸಾವಿಗೆ ಕಾರಣರಾದ ಆರೋಪಿಗಳನ್ನು ಅರಣ್ಯ ಇಲಾಖೆ ಬಂಧಿಸಿದೆ. ಕೋನಪ್ಪ ಮಾಧುರಾಜ ನಾಗರಾಜ ಬಂಧಿತ ಆರೋಪಿಗಳು.
ಮಾಧುರಾಜ ನಾಗರಾಜ ಇವರು ಮೀಣ್ಯಂ ಗ್ರಾಮ ಪಂಚಾಯಿತಿಯ ಕೊಪ್ಪ ಗ್ರಾಮದವರು.
ಕಳೆದು ಹೋದ ಹಸು ಹುಡುಕಲು ಹೋದಾಗ ಅದರ ಕಳೆಬರಹ ಸಿಕ್ಕಿತ್ತು ಯಾವುದೇ ಭೇಟಿ ಆಡಿದ ಪ್ರಾಣಿ ಉಳಿದ ಭೇಟಿ ತಿನ್ನಲು ಮತ್ತೆ ಬರುತ್ತದೆ ಎಂಬುದನ್ನು ಅರಿತಿದ್ದ ಕೊನಪ್ಪ ಈ ಅವಕಾಶ ಬಿಡಬಾರದು ಎಂದು ತೀರ್ಮಾನಿಸಿ, ಗೆಳೆಯ ಮಧುರಾಜನ ಜೊತೆ ಚರ್ಚಿಸಿ ಹಸುವಿನ ಕಳೆಬರಹದ ಮೇಲೆ ಕ್ರಿಮಿನಾಶಕ ಚೆಲ್ಲಿ ಬರುತ್ತಾರೆ. ನಂತರ ಅಲ್ಲಿಗೆ ಮತ್ತೆ ಬಂದ ತಾಯಿ ಹುಲಿ ಮರಿಗಳನ್ನು ಕರೆದುಕೊಂಡು ಬಂದು ಅವುಗಳಿಗೆ ತಿನ್ನಿಸಿ ತಾನು ತಿನ್ನುತ್ತದೆ ಆ ವಿಷ ಐದು ಹುಲಿಗಳನ್ನು ಬಲಿ ತೆಗೆದುಕೊಳ್ಳುತ್ತದೆ.
ಇಡೀ ವಿಶ್ವವೇ ಮರುಗುವಂತೆ ಮಾಡಿದೆ:
ಐದು ಹುಲಿಗಳ ದಾರುಣ ಸಾವು ಇಡೀ ವಿಶ್ವದ ಗಮನ ಸೆಳೆದಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಪಿಸಿಸಿಎಫ್ ನೇತೃತ್ವದಲ್ಲಿ ತನಿಖೆಗೆ 5 ಜನರ ಸಮಿತಿ ರಚಿಸಿದ್ದಾರೆ. ಕೇಂದ್ರ ಸರ್ಕಾರ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದಿಂದ ಮೂವರ ಸಮಿತಿ ರಚಿಸಿ ತನಿಖೆ ಕೈಗೊಳ್ಳುವತ್ತಾ ಹೆಜ್ಜೆ ಇಟ್ಟಿದೆ. ಕೇಂದ್ರದ ತನಿಖಾ ತಂಡದ ಜೊತೆ ರಾಜ್ಯದ ತನಿಕ ಸಮಿತಿ ಸಂಪೂರ್ಣ ಸಹಕರಿಸುತ್ತದೆ ಎಂದು ಅರಣ್ಯ ಸಚಿವರು ತಿಳಿಸಿದ್ದಾರೆ.
ರಾಜ್ಯ ಅರಣ್ಯ ಸಚಿವ ಈಶ್ವರ್ ಕಂಡ್ರೆ ಸ್ವತಃ ಘಟನೆ ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಆದೇಶ ಹೊರಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮಾಡಿ ಹುಲಿಗಳ ಮತ್ತು ದನದ ಕಳೇಬರಹದ ಸ್ಯಾಂಪಲ್ ಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಕ್ಕೆ ಕೆಳುಹಿಸಿ ಕಳೇಬರಹವನ್ನು ಸುಡುವವರೆಗೂ ಇದ್ದು. ಸುದ್ದಿಗಾರರೊಂದಿಗೆ ಪ್ರಾಥಮಿಕ ತನಿಖೆ ಮಾಹಿತಿ ನೀಡಿ ನಂತರ ತೆರಳಿದ್ದಾರೆ.
ಗಂಭೀರ ಆರೋಪಗಳು: ಈ ಪ್ರಕರಣ ಅನೇಕ ಗಂಭೀರ ಆರೋಪಗಳಿಗೆ ಮುನ್ನುಡಿ ಇಟ್ಟಿದೆ ಹುಲಿಗಳ ಸಂರಕ್ಷಣೆಗೆ ರಾಜ್ಯ ಸರ್ಕಾರ ಪ್ರಾಮುಖ್ಯತೆ ಕೊಡುವುದರಲ್ಲಿ ವಿಫಲವಾಗಿರುವುದು ಮುಖ್ಯವಾದ ಅಂಶ. ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಕಳ್ಳ ಭೇಟಿ ತಡೆ ಸಿಬ್ಬಂದಿಗಳಿಗೆ ಕಳೆದ ಕೆಲ ತಿಂಗಳುಗಳಿಂದ ಸಂಬಳ ಕೊಟ್ಟಿಲ್ಲ ಎಂಬ ಆರೋಪಗಳಿವೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನ ನಾಗರಹೊಳೆಗಳಲ್ಲಿ ಈ ಹಿಂದೆ ವಿಷಪ್ರಾಶನ ಉರುಳಿನಿಂದ ಸತ್ತ ಹುಲಿಗಳ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಇಲಾಖೆ ವಿಫಲವಾಗಿದೆ ಎಂಬ ಗಂಭೀರ ಆರೋಪಗಳಿವೆ.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕಾಡು ರಕ್ಷಿಸುವುದನ್ನು ಮರೆತು ರಾಜ್ಯದ ಕೇಂದ್ರ ಸ್ಥಾನದಲ್ಲಿ ಕುಳಿತು ಅಧಿಕಾರ ನಡೆಸುತ್ತಿದ್ದಾರೆ ಎಂಬುದು ಪರಿಸರವಾದಿಗಳ ಆರೋಪ.
ಮಲೆ ಮಾದೇಶ್ವರ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶ ಎಂದು ಘೋಷಣೆ ಮಾಡುವಂತೆ ಕೇಂದ್ರ ಉನ್ನತಾಧಿಕಾರಿ ಸಮಿತಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಇದ್ದಾಗಲೇ ಶಿಫಾರಸ್ಸು ಮಾಡಿತ್ತು
ವಿವಿಧ ಲಾಭಿ, ಪ್ರಭಾವಿ, ಪ್ರಭಾವಿಗಳ ಒತ್ತಡದಿಂದ ಇದು ಜಾರಿಯಾಗಿಲ್ಲ ಎಂಬ ಗಂಭೀರ ಆರೋಪ ಕೇಳಿಬರುತ್ತಿದೆ ಮಲೆ ಮಾದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆದಾಗ ಘೋಷಣೆ ಮಾಡಲಾಗುತ್ತದೆ ಎಂದು ಎಣಿಸಲಾಗಿತ್ತು ಅದು ಸಹ ಆಗಲಿಲ್ಲ
ಸರ್ಕಾರದ ನಿರ್ಲಕ್ಷ್ಯ:
ಇಲಾಖೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಮೀನಾಮೇಷ ಎಣಿಸುತ್ತಿರುವುದು ಪರಿಸರವಾದಿಗಳ ಹಾಗೂ ಸಾರ್ವಜನಿಕರ ಕೆಂಗಣ್ಣಿಗೆ ಸರ್ಕಾರ ಗುರಿಯಾಗಿದೆ. ಐಪಿಎಲ್ ಗೆಲುವಿನ ಸಂಭ್ರಮಾಚರಣೆಯ ಸಮಯದಲ್ಲಿ ಕಾಲು ತುಳಿತಕ್ಕೆ ಸಿಕ್ಕ ಸತ್ತವರಿಗೆ ನ್ಯಾಯ ಒದಗಿಸುವ ದೃಷ್ಟಿಯಿಂದ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಕೈಗೊಂಡ ಸರ್ಕಾರ ಮೂಕ ಪ್ರಾಣಿಗಳ ವಿಷಯದಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ರಕ್ಷಿಸುವ ಕೆಲಸದಲ್ಲಿ ತೊಡಗಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

Spread the love

Leave a Reply