You are currently viewing ಜಯದ ನಿರೀಕ್ಷೆಯಲ್ಲಿದ್ದ ನರೇಂದ್ರ ಅವರಿಗೆ ತಡೆಯೊಡ್ಡಿದ ನಿಶಾಂತ್

ಜಯದ ನಿರೀಕ್ಷೆಯಲ್ಲಿದ್ದ ನರೇಂದ್ರ ಅವರಿಗೆ ತಡೆಯೊಡ್ಡಿದ ನಿಶಾಂತ್

ಹನೂರು: ಮೈಸೂರು ಮತ್ತು ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಆಡಳಿತ ಮಂಡಳಿಯ ಕೊಳ್ಳೇಗಾಲ ಕ್ಷೇತ್ರದಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ನಿರ್ದೇಶಕ, ಮಾಜಿ ಶಾಸಕ ಆರ್ ನರೇಂದ್ರ ಹಾಗೂ ಮಲ್ಲೇಶ್ ರವರ ನಡುವೆ ಜಿದ್ದಾಜಿದ್ದಿಯ ಸಮಬಲದ ಹೋರಾಟ ನಡೆದು ಆರ್ ನರೇಂದ್ರ 9 ಮಲ್ಲೇಶ್ 8 ಮತಗಳನ್ನು ಪಡೆದುಕೊಂಡಿದ್ದಾರೆ. ಆದರೆ ಬೈಲೂರಿನ ಡೆಲಿಕೇಟ್ ಮತ ಇನ್ನು ಕೋರ್ಟ್ ನಲ್ಲಿ ಇರುವುದರಿಂದ ಫಲಿತಾಂಶಕ್ಕೆ ತಡೆ ನೀಡಲಾಗಿದೆ.ಎಂ ಸಿ ಡಿ ಸಿ ಸಿ ಬ್ಯಾಂಕ್ ನ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಾಲ್ಕನೇ ಬಾರಿಗೆ ಸ್ಪರ್ಧಿಸಿದ್ದ ಆರ್ ನರೇಂದ್ರರವರು ಭರ್ಜರಿ ಜಯದ ನಿರೀಕ್ಷೆಯಲ್ಲಿದ್ದರು, ಗೆಲುವಿನ ನಾಗಾಲೋಟಕ್ಕೆ ಬಿಜೆಪಿಯ ಯುವ ಮುಖಂಡ ನಿಶಾಂತ್ ತಡೆ ಹೊಡ್ಡಿದ್ದಾರೆ ಎಂದರೆ ತಪ್ಪಾಗಲಾರದು.

ಹೌದು ಕಳೆದ ನಾಲ್ಕು ದಿನಗಳಿಂದ ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಂಘದ ಹದಿಮೂರು ಡೆಲಿಕೇಟ್ ಗಳು ಆರ್ ನರೇಂದ್ರ ರವರ ಜೊತೆ ರೆಸಾರ್ಟ್ ನಲ್ಲಿ ಉಳಿದುಕೊಂಡಿದ್ದರು. ಗುರುವಾರ ಮತದಾನದ ಹಿನ್ನೆಲೆ ಹದಿಮೂರು ಜನರು ಸಹ ನೇರವಾಗಿ ಮತದಾನ ಕೇಂದ್ರಕ್ಕೆ ಬಂದು ಕೇವಲ ಮತದಾನ ಪ್ರಾರಂಭವಾದ 20 ನಿಮಿಷದಲ್ಲಿಯೇ ಮತ ಚಲಾವಣೆ ಮಾಡಿದ್ದಾರೆ. ಆದರೆ ನರೇಂದ್ರ ರವರ ಬಣದಲ್ಲಿದ್ದ ನಾಲ್ವರು ಡೆಲಿಕೇಟ್ ಗಳನ್ನು ಮೈತ್ರಿ ಅಭ್ಯರ್ಥಿ ಮಲ್ಲೇಶ್ ರವರ ಪರ ಮತದಾನ ಮಾಡಿಸುವಲ್ಲಿ ನಿಶಾಂತ್ ರವರು ಯಶಸ್ವಿಯಾಗಿದ್ದಾರೆ. ಈ ಮೂಲಕ ಮುಂದಿನ ವಿಧಾನಸಭಾ ಚುನಾವಣೆಗೆ ಈಗನಿಂದಲೇ ಅಡಿಪಾಯ ಹಾಕಿಕೊಳ್ಳುತ್ತಿದ್ದಾರೆ.

ಜಯದ ವಿಶ್ವಾಸದಲ್ಲಿದ್ದ ಆರ್ ನರೇಂದ್ರ: ಹನೂರು ಹಾಗೂ ಕೊಳ್ಳೇಗಾಲ ತಾಲೂಕಿನ 18 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸುಮಾರು ಹದಿಮೂರಕ್ಕೂ ಹೆಚ್ಚು ಡೆಲಿಕೇಟ್ ಕಾಂಗ್ರೆಸ್ ಬೆಂಬಲಿತ ಸದಸ್ಯರೇ ಆಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವುದರಿಂದ ಆರ್ ನರೇಂದ್ರ ರವರು ೧೪ ಮತಗಳನ್ನು ಪಡೆಯುವ ಮೂಲಕ ಜಯಗಳಿಸುತ್ತೇನೆ ಎಂಬ ವಿಶ್ವಾಸದಲ್ಲಿದ್ದರು. ಆದರೆ ಆರ್ ನರೇಂದ್ರ ರವರ ಬಣದಲಿದ್ದ ನಾಲ್ವರು ಕೈಕೊಟ್ಟಿರುವುದರಿಂದ ಇದೀಗ ಸಮಬಲದ ಹೋರಾಟ ನಡೆದಿದ್ದು ಕೋರ್ಟ್ ನ ಆದೇಶದ ನಂತರ ಬೈಲೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಡೆಲಿಗೇಟ್ ಮತ ಎಣಿಕೆ ಆದರೆ ಇಬ್ಬರಿಗೂ ಒಂಬತ್ತು ಮತಗಳು ಆಗಲಿದೆ. ನಂತರ ಲಾಟರಿ ಮುಖಾಂತರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.

ಚಾಣಾಕ್ಷ ಯುವ ಮುಖಂಡ ನಿಶಾಂತ್: ಆರ್ ನರೇಂದ್ರ ರವರ ವಿರುದ್ಧ ಮಲ್ಲೇಶ್ ರವರು ಸ್ಪರ್ಧಿಸಿದಾಗ ಮಲ್ಲೇಶ್ ರವರು ಮೂರು ಮತಗಳನ್ನು ಪಡೆಯಬಹುದು ಆರ್ ನರೇಂದ್ರ ಅವರು 14 ಮತಗಳನ್ನು ಪಡೆಯುವ ಮೂಲಕ ಜಯಗಳಿಸಲಿದ್ದಾರೆ ಎಂದು ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚರ್ಚೆ ನಡೆದಿತ್ತು.

ಇದೀಗ ಯುವ ಮುಖಂಡ ನಿಶಾಂತ್ ರವರು ಚುನಾವಣಾ ರಾಜಕೀಯದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ವಿರೋಧ ಪಕ್ಷದವರ ಮತಗಳನ್ನು ಸೆಳೆಯುವುದರ ಜೊತೆಗೆ ವೀರಶೈವ ಲಿಂಗಾಯತ ಡೆಲಿಕೇಟ್ ಗಳ ಮತಗಳನ್ನು ಕ್ರೋಡಿಕರಿಸುವುದರ ಮೂಲಕ ಗೆಲುವಿನ ಸನಿಹಕ್ಕೆ ಬಂದಿರುವುದು ಕ್ಷೇತ್ರದಲ್ಲೆಡೆ ನಿಶಾಂತ್ ರವರ ರಾಜಕೀಯ ನೈಪುಣ್ಯತೆಯ ಬಗ್ಗೆ ಚರ್ಚೆ ನಡೆಯುತ್ತಿದ್ದು ಮುಂದಿನ ದಿನಗಳಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಲಿದ್ದಾರೆ ಎಂಬ ಚರ್ಚೆ ನಡೆಯುತ್ತಿದೆ.

ಮುಂದಿನ ದಿನಗಳಲ್ಲಿ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯತಿ, ಗ್ರಾಮ ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು ಈ ಚುನಾವಣೆಯಲ್ಲಿ ಶಾಸಕ ಎಂಆರ್ ಮಂಜುನಾಥ್, ಮಾಜಿ ಶಾಸಕ ಆರ್ ನರೇಂದ್ರ, ಬಿಜೆಪಿ ಯುವ ಮುಖಂಡ ನಿಶಾಂತ್ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡು ತಮ್ಮ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

Spread the love

Leave a Reply