
ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮೊದಲ ಆಷಾಢ ಶುಕ್ರವಾರ ಅಂಗವಾಗಿ ಚಾಮುಂಡಿ ಬೆಟ್ಟದ ಪಾದದಲ್ಲಿ ಚಾಮುಂಡೇಶ್ವರಿ ದರ್ಶನಕ್ಕೆ ಆಗಮಿಸಿದ ಮುತ್ತೈದೆ ಮಹಿಳೆಯರಿಗೆ ಅರಿಶಿಣ ,ಕುಂಕುಮ ,ಬಳೆಗಳೊಂದಿಗೆ ಬಾಗಿನ (ಉಡಿ) ತುಂಬಿದ ಮಹಿಳೆಯರು
ನಂತರ ಮಾತನಾಡಿದ ಶ್ರೀ ದುರ್ಗಾ ಫೌಂಡೇಶನ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್
ಆಷಾಢ ಮಾಸದ ನಾಡ ಅಧಿದೇವತೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. ಈ ಹಿನ್ನಲೆಯಲ್ಲಿ ಸಾವಿರಾರೂ ಭಕ್ತಾಧಿಗಳು ತಾಯಿಗೆ ಹರಕೆ ತಿರಿಸಲು ಬೆಟ್ಟದ ಪಾದದಿಂದ ಬೆಟ್ಟದ ಮೇಲೆ ವರೆಗೂ ಅರಿಶಿನ ಕುಂಕುಮ ಹಚ್ಚುತ್ತಾರೆ. ಅಂತಹ ಮಹಿಳಾ ಭಕ್ತಾಧಿಗಳಿಗೆ ಅರಿಶಿನ ಕುಂಕುಮ ಹಾಗೂ ಬಳೆಗಳನ್ನು ನೀಡಿ ಅವರಿಗೆ ತಾಯಿ ಚಾಮುಂಡೇಶ್ವರಿ ಒಳಿತನ್ನು ನೀಡಲಿ ಎಂದು ಆರೈಸುತ್ತಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕಿ ಖುಷಿವಿನು, ಸರಸ್ವತಿ ಹಲಸಗಿ,
ಸವಿತಾ ಘಾಟ್ಕೆ, ಜಯಶ್ರೀ ಶಿವರಾಮ್, ಸುಶೀಲ, ಹಾಗೂ ಇನ್ನಿತರರು ಹಾಜರಿದ್ದರು