ಯುವ ಪುರಸ್ಕಾರ ಪ್ರಶಸ್ತಿ ಬಂದದ್ದು ನನಗೆ ಆಶ್ಚರ್ಯ- ದಿಲೀಪ್ ಕುಮಾರ್ ರ್ವಿಮರ್ಶಾತ್ಮಕವಾಗಿ ಬರೆಯಬೇಕಾದರೆ ಗಾಬರಿ ಕುತೂಹಲ ಇರಬೇಕು . ರೇಷ್ಮೆನಾಡು ದಿನ ಪತ್ರಿಕೆಯಲ್ಲಿ ನನ್ನ ಮೊದಲ ಲೇಖನ ನಾನು ಬರೆಯುವುದಕ್ಕೆ ಪ್ರಾರಂಭಿಸಿದ ಮೇಲೆ ನನ್ನ ಮೊದಲ ಲೇಖನ ವಚನ ಆಧರಿಸಿದ ಕದಂಬ ಮಾರಿ ತಂದೆ ಈ ಲೇಖನ 2016ರಲ್ಲಿ ನಮ್ಮ ರೇಷ್ಮೆನಾಡು ಪತ್ರಿಕೆಯಲ್ಲಿ ಪ್ರಕಟಗೊಂಡಿತ್ತು ಇದಕ್ಕೆ ಸಂಪಾದಕರಾಗಿದ್ದ ದಿವಂಗತ ಸದಾಶಿವ ಗಟ್ಟವಾಡಿಪುರ ಅವರೇ ಕಾರಣ ಈಗ ನನ್ನ ಶಬ್ದ ಸೋಪಾನ ವಿಮರ್ಶಾತ್ಮಕ ಕೃತಿಯ ಲೇಖಕರ ಮಾತಿನಲ್ಲಿ ಪ್ರಕಟಿಸಿದ್ದೇನೆ ಎಂದರು. ನನ್ನ ಪಚ್ಚೆಯ ಜಗಲಿ ವಿಮರ್ಶಾತ್ಮಕ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ಪ್ರಶಸ್ತಿ ನನಗೆ ಸಂತೋಷದ ಜೊತೆಗೆ ಆಶ್ಚರ್ಯವಾಯಿತು ಎಂದು ಯುವ ಪುರಸ್ಕಾರ ಪ್ರಶಸ್ತಿ ವಿಜೇತ ಆರ್ ದಿಲೀಪ್ ಕುಮಾರ್ ಹೇಳಿದರುಜಿಲ್ಲಾ ಕಾರ್ಯ ನಿರತ ಸಂಘದಿಂದ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು ಒಂದು ವಿಮರ್ಶಾತ್ಮಕ ಕೃತಿಗೆ ಮೊಟ್ಟಮೊದಲ ಬಾರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರ ಪ್ರಶಸ್ತಿ ಬಂದಿರುವುದು ಸಂತೋಷ ದ ವಿಷಯ ಜೊತೆಗೆ ಇಂತಹ ಕೃತಿಗಳಿಗೂ ಪ್ರಶಸ್ತಿ ಬರಬಹುದು ಎಂದು ನಾನು ನಿರೀಕ್ಷೆಯನ್ನು ಮಾಡಿರಲಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.