You are currently viewing ರೋಟರಿ ಸಿಲ್ಕ್ ಸಿಟಿಯ ವಿಶೇಷ ಹಾಗೂ ವಿನೂತನ ಕಾರ್ಯಕ್ರಮ ಆಯೋಜನೆಗೆ ಮನಸೋತ ಚಾಮರಾಜನಗರದ ಜನ

ರೋಟರಿ ಸಿಲ್ಕ್ ಸಿಟಿಯ ವಿಶೇಷ ಹಾಗೂ ವಿನೂತನ ಕಾರ್ಯಕ್ರಮ ಆಯೋಜನೆಗೆ ಮನಸೋತ ಚಾಮರಾಜನಗರದ ಜನ

ಚಾಮರಾಜನಗರದಲ್ಲಿ ಪ್ರಪ್ರಥಮ ಬಾರಿಗೆ ಬೃಹತ್ ಆಹಾರ ಮೇಳ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮಗಳನ್ನು ಡಿಸೆಂಬರ್ 14 15 ರಂದು ನಗರದ ರೋಟರಿ ಸಿಲ್ಕ್ ಸಿಟಿ ಸಂಸ್ಥೆಯಿಂದ ಆಯೋಜಿಸಲಾಗಿತ್ತು.
ಒಂದೇ ಸ್ಥಳದಲ್ಲಿ ಆಹಾರ ಹಾಸ್ಯ ಮನರಂಜನೆ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಶ್ರೀ ಸಿದ್ದ ಮಲ್ಲೇಶ್ವರ ವಿರಕ್ತ ಮಠ ಕಲ್ಯಾಣ ಮಂಟಪ ಆವರಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.ಚಾಮರಾಜನಗರ ಕೇಂದ್ರದಲ್ಲಿ ಇಂತಹದೊಂದು ಕಾರ್ಯಕ್ರಮದ ನಿರೀಕ್ಷೆಯಲ್ಲಿ ಜನರು ದಿನಗಣನೆ ಮಾಡುತ್ತಿದ್ದರು.
ಇಂತಹ ವಿಶೇಷ ವಿನುತನ ಕಾರ್ಯಕ್ರಮವನ್ನು ರೋಟರಿ ಸಿಲ್ಕ್ ಸಿಟಿ ಆಯೋಜನೆ ಮಾಡಿ ಜನರಿಗೆ ಮನೋರಂಜನೆ ನೀಡುವುದರ ಜೊತೆಗೆ ರಸದೌತಣ ನೀಡಿ ನಗರದ ಜನ ಮನ ಗೆದ್ದಿದ್ದಾರೆ. ಒಂದೇ ಸೂರಿನಡಿಯಲ್ಲಿ ವಸ್ತು ಪ್ರದರ್ಶನ ಮತ್ತು ಮಾರಾಟ ಆಹಾರ ಹಾಸ್ಯ ಮನೋರಂಜನೆ ಅನುಭವಿಸಲು ನಗರದ ಜನರಿಗೆ ಅವಕಾಶ ಮಾಡಿಕೊಟ್ಟ ರೋಟರಿ ಸಿಲ್ಕ್ ಅನ್ನು ನಗರದ ಜನತೆ ಅಭಿನಂದಿಸಿದ್ದಾರೆ.

Spread the love

Leave a Reply