ಸಮಸ್ಯೆಗಳ ಹುತ್ತವಾಗಿರುವ ಆಲೂರು ಹೊಮ್ಮ ಸರ್ಕಾರಿ ಶಾಲೆಗೆ ಅಧಿಕಾರಿಗಳ ದೌಡು!

ಚಾಮರಾಜನಗರ ಜೂ25. ದಲಿತ ಮಹಿಳೆ ಬಿಸಿಯೂಟ ತಯಾರು ಮಾಡಿದ ಕಾರಣಕ್ಕೆ ಶಾಲಾ ಮಕ್ಕಳು ಊಟ ಮಾಡದೇ ಇರುವ ಕಾರಣಕ್ಕೆ ರಾಜ್ಯದ ಗಮನ ಸೆಳೆದಿದರುವ ತಾ.ನ ಆಲೂರು ಹೊಮ್ಮ ಸರ್ಕಾರಿ ಶಾಲೆಗೆ ಇಂದು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಸಭೆ ನಡೆಸಿ ಎಲ್ಲರ ಅಹವಾಲು ಕೇಳಿ ಗೋಜಲು ಸರಿಪಡಿಸಲು ಪ್ರಯತ್ನಿಸಿದರು. ಇದು ಅತ್ಯಂತ ಅಮಾನವೀಯ,ಗಂಭೀರ ವಿಷಯ ಎಂದು ಗ್ರಾಮಸ್ಥರಿಗೆ ಮನದಟ್ಟು ಮಾಡಿದರು.
ಸಮಸ್ಯೆಗಳ ಹುತ್ತ
ದಶಕಗಳ ಕಾಲದಿಂದ ಅಸ್ತಿತ್ವದಲ್ಲಿರುವ ಈ ಸರ್ಕಾರಿ ಶಾಲೆ ಶಿಕ್ಷಕರ ಒಳಜಗಳದಿಂದ ನಲುಗಿದೆ. ಯಾರಿಗೂ ಮಕ್ಕಳಿಗೆ ಪಾಠ ಮಾಡುವ ಆಸಕ್ತಿ ಇಲ್ಲ. ಬೇಕಾಬಿಟ್ಟಿ ಬಂದು ಹೋಗುತ್ತಿದ್ದರು. ಇದನ್ನು ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೇ ಕಾರಣಕ್ಕೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಾಲೆಯಿಂದ ಬಿಡಿಸಿ ಮಕ್ಕಳನ್ನು ಬೇರೆ ಶಾಲೆಗಳಿಗೆ ದಾಖಲಿಸಿದರು. ಒಂದು ಕಾಲದಲ್ಲಿ ತುಂಬಿ ತುಳುಕುತ್ತಿದ್ದ ಶಾಲೆ ಕ್ರಮೇಣ ದಾಖಲಾತಿ ಇಲ್ಲದೇ ಸೊರಗಿತು.ಇದನ್ನು ಸಮಸ್ಯೆ ಕಂಡು ಬಂದಾಗಲೇ ಬಗೆಹರಿಸುವ ಎಲ್ಲಾ ಸಾಧ್ಯತೆಗಳಿದ್ದರು,ಬಿಇಓ ನಿರ್ಲಕ್ಷದಿಂದ ಪರಿಸ್ಥಿತಿ ಬಿಗಡಾಯಿಸಿತು. ಮಕ್ಕಳ ದಾಖಲಾತಿ ಕ್ಷೀಣಿಸಿದ್ದರಿಂದ ಬಿಸಿಯೂಟ ಅಡಿಗೆಗೆ ಇಬ್ಬರಿಂದ ಒಬ್ಬರಿಗೆ ಇಳಿಸುವ ಅನಿವಾರ್ಯತೆ ಏರ್ಪಟ್ಟಿತು. ದಲಿತ ಮಹಿಳೆ ಬಿಸಿಯೂಟ ತಯಾರಿಸುತ್ತಾರೆ ಎಂದಾಗ ದಾಖಲಾತಿ ಕ್ಷೀಣಿಸಿ ಒಂದಂಕಿಗೆ ಬಂದು ನಿಂತಿದೆ.ಮಕ್ಕಳು ಮನೆಗೆ ತೆರಳಿ ಊಟ ಮಾಡಿ ಬರುತ್ತಿದ್ದಾರೆ.
ತಿಳುವಳಿಕೆ
ಸ್ಥಳಕ್ಕೆ ದೌಡಾಯಿಸಿದ ಜಿಪಂ ಸಿಇಓ ಮೋನಾರೋತ್ ಪಾಲುದಾರರ ಸಭೆ ಕರೆದು ಅವರಿಗೆ ಪರಿಸ್ಥಿತಿ ವಿವರಿಸಿದರು. ಆಗ ಗ್ರಾಮಸ್ಥರು ಮೂಲ ಸಮಸ್ಯೆ ಬಗೆಹರಿಸಿದ್ದರೆ,ಪರಿಸ್ಥಿತಿ ಇಷ್ಟು ಅಧೋಗತಿಗೆ ಹೊಗುತ್ತಿರಲಿಲ್ಲ ಎಂದರು. ಮಕ್ಕಳನ್ನು ಎಂದಿನಂತೆ ಬಿಸಿಯೂಟಕ್ಕೆ ಕಳುಹಿಸಲು ಸಿಇಓ ಮನ ಒಲಿಸಿದರು.
ದೂರು ನೀಡಿದರೆ ಕ್ರಮ
ಬಿಸಿಯೂಟದ ದಲಿತ ಮಹಿಳೆ ಮಾತನಾಡಿ ಮಕ್ಕಳು ತಾನು ಅಡಿಗೆ ಮಾಡುವ ಕಾರಣಕ್ಕೆ ಬರುತ್ತಿಲ್ಲ. ಮುಖ್ಯ ಶಿಕ್ಷಕರು, ಸಿಬ್ಬಂದಿಯು ಊಟ ಮಾಡುತ್ತಿಲ್ಲ ಎಂದು ವಿವರಣೆ ನೀಡಿದರು. ಇದೊಂದು ಗಂಭೀರ ಸಮಸ್ಯೆ. ಆಕೆ ದೂರು ನೀಡಿದರೆ ತಾವು ಕಾನೂನಿನಂತೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಡಾ. ಕವಿತ ಸುದ್ದಿಗಾರರಿಗೆ ತಿಳಿಸಿದರು. ಸಭೆಗೆ ಡಿಡಿಪಿಐ ರಾಮಚಂದ್ರರಾಜೇ ಅರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತ ಶೆಟ್ಟಿ ಡಿ ವೈ ಎಸ್ ಪಿ ಲಕ್ಷ್ಮಯ್ಯ ಸಂತೆಮರಹಳ್ಳಿ ಸರ್ಕಲ್ ಇನ್ಸ್ಪೆಕ್ಟರ್ ಬಸವರಾಜು ಸಬ್ ಇನ್ಸ್ಪೆಕ್ಟರ್ ತಾಜುದ್ದೀನ್ ತಹಸಿಲ್ದಾರ್ ಗಿರಿಜಾ ಹಾಗೂ ಇತರ ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.

Spread the love

Leave a Reply