
15-22 2025
ಮಳವಳ್ಳಿ ಮಂಡ್ಯ ಜಿಲ್ಲೆ
ಸರ್ವರಿಗೂ ಹಾರ್ದಿಕ ಸ್ವಾಗತ.
ಜಯಂತಿ ಮಹೋತ್ಸವ ಸಮಿತಿ, ಮಳವಳ್ಳಿ
ಮನುಕುಲದ ಒಳತಿಗಾಗಿ ಋಷಿಮುನಿಗಳು ವಿಭೂತಿ ಪುರುಷರು ಸಾಧು ಸಂತರು ತಮ್ಮ ತಪ ಶಕ್ತಿಯಿಂದ ಅನೇಕ ಮಹತ್ಕಾರ್ಯಗಳನ್ನು ಮಾಡಿ ಲೋಕಸಂಪೂಜ್ಯರಾಗಿದ್ದಾರೆ. ಜನಮಾನಸದ ದಿವ್ಯ ಜ್ಯೋತಿಗಳಾಗಿದ್ದಾರೆ ಅಂತಹ ಮಹಾಮಹಿಮರ ಪಂಕ್ತಿಯಲ್ಲಿ ಪ್ರಾರ್ಥನೆಯಂತೆ ಕಪಿಲಾ ನದಿ ತೀರದಲ್ಲಿ ಸುತ್ತೂರಿನಲ್ಲಿ ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠವನ್ನು ಸಂಸ್ಥಾಪಿಸಿದರು. ಆ ಮೂಲಕ ಮನುಕುಲದ ಉದ್ಧಾರಕ್ಕೆ ಕಾರಣ ಪುರುಷರಾದರು. ಶ್ರೀಮಠದ ಗುರು ಪರಂಪರೆಯಲ್ಲಿ ಬಂದ ಎಲ್ಲ ಜಗದ್ಗುರುಗಳು ಲೋಕೋದ್ಧಾರಕ ಕಾರ್ಯಗಳಿಗೆ ಮೂಲ ಚೈತನ್ಯ ಶಕ್ತಿಯಾಗಿದ್ದಾರೆ. ಮಂತ್ರ ಮಹರ್ಷಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಮಹಾಸ್ವಾಮಿಗಳವರು ಮಹಾಮಂತ್ರ ಲೇಖನ ತಪಸ್ಸು ಹಾಗೂ ಜಗದ್ಗುರು ಡಾ. ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ ಧಾರ್ಮಿಕ, ಆಧ್ಯಾತ್ಮಿಕ, ಸಾಂಸ್ಕೃತಿಕ, ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮೊದಲಾದ ಜನೋಪಯೋಗಿ ಕಾರ್ಯಗಳು ಜನಮಾನಸದಲ್ಲಿ ಚಿರಸ್ಮರಣೀಯವಾಗಿದೆ.
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ದಿವ್ಯಸ್ಮರಣೆಗಾಗಿ ಜಯಂತಿ ಮಹೋತ್ಸವವನ್ನು ಪ್ರತಿ ವರ್ಷ ಮಾರ್ಗಶಿರ ಬಹುಳ ಮಾಸ ಶಿವರಾತ್ರಿ ಯಂದು ಪ್ರಾರಂಭಿಸಿ ಶ್ರದ್ಧಾ ಭಕ್ತಿಗಳಿಂದ ಆಚರಿಸಲಾಗುತ್ತದೆ ಮೈಸೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವವು ಆಬಳಿಕ ಭಕ್ತಾದಿಗಳ ಅಪೇಕ್ಷೆಯಂತೆ ಸಂತಸರಗೂರು ಗುಂಡ್ಲುಪೇಟೆ, ಕೊಳ್ಳೇಗಾಲ ಚಾಮರಾಜನಗರ ಕೆಆರ್ ನಗರ ನಂಜನಗೂಡು ಟಿ ನರಸೀಪುರ ಹುಣಸೂರು ಪಿರಿಯಾಪಟ್ಟಣ ಯಳಂದೂರು ಮೈಸೂರು ಬೆಂಗಳೂರು ಪಾಂಡವಪುರ ಹಾಗೂ ಶಿವಮೊಗ್ಗಗಳಲ್ಲಿ ನೆರವೇರಿದೆ ಈ ಜಯಂತಿ ಮಹೋತ್ಸವವೂ ಜನತೆಯಲ್ಲಿ ಭಾರತೀಯ ಸಂಸ್ಕೃತಿ ಧಾರ್ಮಿಕ ಕಥೆ ಹಾಗೂ ಭಾವೈಕ್ಯತೆಯನ್ನು ಮೂಡಿಸುವ ದಿಸೆಯಲ್ಲಿ ಮಹತ್ತರು ಪಾತ್ರ ವಹಿಸಿದೆ
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವವನ್ನು ಈ ವರ್ಷ ಮಳವಳ್ಳಿಯಲ್ಲಿ ಶ್ರದ್ಧಾಭಕ್ತಿಗಳೊಡನೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.ಮೈಸೂರಿನಲ್ಲಿ ನಡೆಯುತ್ತಿದ್ದ ಈ ಉತ್ಸವವು ಆ ಬಳಿಕ ಭಕ್ತಾದಿಗಳ ಅಪೇಕ್ಷೆಯಂತೆ ಸಂತೆಸರಗೂರು ಗುಂಡ್ಲುಪೇಟೆ, ಕೊಳ್ಳೇಗಾಲ, ಚಾಮರಾಜನಗರ, ಕೆ.ಆರ್ ನಗರ, ನಂಜನಗೂಡು, ಟಿ ನರಸೀಪುರ, ಹುಣಸೂರು, ಪಿರಿಯಾಪಟ್ಟಣ,, ಯಳಂದೂರು, ಮೈಸೂರು, ಬೆಂಗಳೂರು, ಪಾಂಡವಪುರ ಹಾಗೂ ಶಿವಮೊಗ್ಗಗಳಲ್ಲಿ ನೆರವೇರಿದೆ. ಈ ಜಯಂತಿ ಮಹೋತ್ಸವವೂ ಜನತೆಯಲ್ಲಿ ಭಾರತೀಯ ಸಂಸ್ಕೃತಿ ಧಾರ್ಮಿಕ ಕಥೆ ಹಾಗೂ ಭಾವೈಕ್ಯತೆಯನ್ನು ಮೂಡಿಸುವ ದಿಸೆಯಲ್ಲಿ ಮಹತ್ತರು ಪಾತ್ರ ವಹಿಸಿದೆ.
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವವನ್ನು ಈ ವರ್ಷ ಮಳವಳ್ಳಿಯಲ್ಲಿ ಶ್ರದ್ಧಾಭಕ್ತಿಗಳೊಡನೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ. ಮಳವಳ್ಳಿ ತಾಲೂಕು ಐತಿಹಾಸಿಕ ಧಾರ್ಮಿಕ ಆರ್ಥಿಕ ಸಾಂಸ್ಕೃತಿಕ ಹಿನ್ನೆಲೆಗಳಿಂದ ಕೂಡಿದೆ ಬೋಪೆಗೌಡನಪುರದಲ್ಲಿರುವ ಶ್ರೀ ಮಂಟೇಸ್ವಾಮಿ ಪುಣ್ಯಕ್ಷೇತ್ರವು ಧಾರ್ಮಿಕ ಮಹತ್ವವುಳ್ಳದ್ದಾಗಿದೆ 10ನೇ ಶತಮಾನದಲ್ಲಿ ನಿರ್ಮಿತವಾದ ಮಾರೆಹಳ್ಳಿ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನವು ಒಂದು ಪ್ರಮುಖ ಶ್ರದ್ಧಾ ಕೇಂದ್ರ. ಮಳವಳ್ಳಿ ತಾಲೂಕಿನಲ್ಲಿ 24 ವೀರಶೈವ ಲಿಂಗಾಯತ ಮಠಗಳಿವೆ. ಶಿಂಶ ಜಲಪಾತದ ಪ್ರಾಕೃತಿಕ ಸೊಬಗು, ಗಗನಚುಕ್ಕಿ ಬರಚುಕ್ಕಿ ಕಾವೇರಿ ವನ್ಯಜೀವಿ ಅಭಯಾರಣ್ಯ ಪ್ರೇಕ್ಷಣೀಯ ಪ್ರವಾಸಿ ತಾಣಗಳಾಗಿವೆ. ನಾಡಿನ ಸಾಂಸ್ಕೃತಿಕ ಉತ್ತಾನಕ್ಕೆ ಪೂರಕವಾದ ಮಹಾಪುರುಷರ ಪುಣ್ಯಸ್ಮರಣೆಯ ಇಂತಹ ಮಹೋತ್ಸವಗಳು ಜನರ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಪ್ರೇರಕಶಕ್ತಿಯಾಗಿದೆ.