
‘ನಮ್ಮೂರ ಸಂಭ್ರಮ ಸಾಂಸ್ಕೃತಿಕ ನಗರ ಮೈಸೂರಿನಲ್ಲಿ’
ಚಾಮರಾಜೇಶ್ವರಿ ಅಕ್ಕನ ಬಳಗದ ಇತಿಹಾಸ ವಲಸೆ ಜಗತ್ತಿನ ಒಂದು ಸಹಜ ಪ್ರಕ್ರಿಯೆ ಮನುಷ್ಯರು ಸಹ ನಾನ ಕಾರಣ ಮತ್ತು ಅಗತ್ಯಗಳಿಗೆ ಅನುಗುಣವಾಗಿ ಕಿರು ಸಮಯ ದೈನಂದಿನ ಅಲ್ಪಕಾಲ ದೀರ್ಘಕಾಲ ಹಾಗೂ ಶಾಶ್ವತವಾಗಿ ವಲಸೆ ಹೋಗುತ್ತಾರೆ ಅದಾಗಿಯೂ ಮೂಲ ನೆಲೆಯೊಂದಿಗೆ ಇರುವ ಸಂಬಂಧ ಕಡಿದುಕೊಳ್ಳಲು ಬಯಸುವುದಿಲ್ಲ ಅಂಥವರ ಮನಸ್ಸು ಯಾವುದಾದರೂ ರೂಪದಲ್ಲಿ ಅಂತಹ ಸಂಬಂಧ ವನ್ನು ಗಟ್ಟಿಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ನಿರಂತರವಾಗಿರುತ್ತದೆ.
ಹೀಗೆ ಮೂಲದಲ್ಲಿ ಚಾಮರಾಜನಗರ ತಾಲೂಕಿಗೆ ಸೇರಿದ ಪ್ರಸ್ತುತ ಮೈಸೂರು ನಗರದಲ್ಲಿ ತಳ ಊರಿರುವ ಭಗಿನಿಯರು ಪರಸ್ಪರರ ಸಂಪರ್ಕದಲ್ಲಿರ ಬಯಸಿ ಚಾಮರಾಜೇಶ್ವರಿ ಅಕ್ಕನ ಬಳಗ ಎಂಬ ಸಂಘಟನೆಯನ್ನು ಶ್ರೀಮತಿ ಮಾದಲಾಂಬಿಕ ನಂಜುಂಡಸ್ವಾಮಿಯವರ ನೇತೃತ್ವದಲ್ಲಿ ರಚಿಸಿಕೊಂಡು ಆ ಮೂಲಕ ಅನೇಕ ಸಮಾಜಮುಖಿ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ ಈ ಸಂಘಟನೆಯನ್ನು ದಿನಾಂಕ 29.03.2024 ರಂದು ಉದ್ಘಾಟಿಸಿದ ಶ್ರೀ ಸುತ್ತೂರು ಶ್ರೀಮಠದ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳು ಸಂಘಟನೆ ವ್ಯಾಪ್ತಿಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಬೇಕೆಂಬ ಸಲಹೆ ನೀಡಿದ್ದು ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತಿಳಿಸುವ ಚಿಂತನೆ ಇದೆ
ವಾರ್ಷಿಕೋತ್ಸವ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಗಳು ಜಗದ್ಗುರು ಶ್ರೀ ವೀರ ಸಿಂಹಾಸನ ಮಹಾಸಂಸ್ಥಾನ ಮಠ ಶ್ರೀ ಸುತ್ತೂರು ಕ್ಷೇತ್ರ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದೆ
ಕಾರ್ಯಕ್ರಮ ಉದ್ಘಾಟನೆ ಶ್ರೀಮತಿ ಗೀತಾ ಮಹಾದೇವ ಪ್ರಸಾದ್ ಮಾಜಿ ಸಚಿವರು ಗುಂಡ್ಲುಪೇಟೆ ತಾಲೂಕು ಚಾಮರಾಜನಗರ ಜಿಲ್ಲೆ ಅಧ್ಯಕ್ಷತೆ ಶ್ರೀಮತಿ ಶಾಂತ ಎಲ್ ಹುಳು ಮನಿ ಕ. ಆ.ಸೇ. ನಿರ್ದೇಶಕರು ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆ ಕರ್ನಾಟಕ ಸರ್ಕಾರ ಬೆಂಗಳೂರು ಮುಖ್ಯ ಅತಿಥಿಗಳು ಡಾಕ್ಟರ್ ಡಿ.ಎಸ್. ಗುರು, ಹಿರಿಯ ಪ್ರಾಧ್ಯಾಪಕರು, ಗಣಕ ವಿಜ್ಞಾನ ಅಧ್ಯಯನ ವಿಭಾಗ ಮೈಸೂರು ವಿಶ್ವವಿದ್ಯಾನಿಲಯ ಹಾಗೂ ಸಂಸ್ಥಾಪಕರು ಮತ್ತು ಖಜಾಂಚಿ ಮಹಾರಾಜ ಎಜುಕೇಶನ್ ಟ್ರಸ್ಟ್ ಮೈಸೂರು ಉಪಸ್ಥಿತಿ ಶ್ರೀ ಎಂ ಚಿನ್ನಸ್ವಾಮಿ ಉಪಾಧ್ಯಕ್ಷರು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕ ಶ್ರೀಮತಿ ಶಾರದಾ ಶಿವಲಿಂಗಸ್ವಾಮಿ ಅಧ್ಯಕ್ಷರು ಕದಳಿ ಮಹಿಳಾ ವೇದಿಕೆ ಮೈಸೂರು
ಸನ್ಮಾನ ಶ್ರೀ ಜಿ. ಗುರುಸ್ವಾಮಿ ಅಧ್ಯಕ್ಷರು ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಸಮಿತಿ ಚಾಮರಾಜನಗರ ಜಿಲ್ಲೆ ಹಾಗೂ ಅಧ್ಯಕ್ಷರು ರಾವ್ ಬಹುದ್ದೂರ್ ಗುಬ್ಬಿ ತೋಟದಪ್ಪ ಉಚಿತ ವಿದ್ಯಾರ್ಥಿ ನಿಲಯ ಕರಿ ನಂಜನಪುರ ಮತ್ತು ಶ್ರೀ ಸ್ವಾಮಿ ಪೊನ್ನಾಚಿ ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕೃತರು
ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಅಧ್ಯಕ್ಷೆ ಮಾದಲಾಂಬಿಕೆ ನಂಜುಂಡಸ್ವಾಮಿ ತಿಳಿಸಿದ್ದಾರೆ