ಮೈಸೂರಿನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐ ಓ ಸಿ) ಪೆಟ್ರೋಲಿಯಂ ಡಿಪೋ ಸ್ಥಳಾಂತರ ಮಾಡದಂತೆ ಮನವಿ

ಚಾಮರಾಜನಗರ ಆಗಸ್ಟ್ 13 ಮೈಸೂರಿನಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐ ಓ ಸಿ) ಪೆಟ್ರೋಲಿಯಂ ಡಿಪೋವನ್ನು ಬೆಂಗಳೂರಿನ ದೇವಣಗೊಂತಿಗೆಗೆ ಸ್ಥಳಾಂತರಿಸಿ ಮೈಸೂರು ಡಿಪವನ್ನು ಮುಚ್ಚುವ ನಿರ್ಧಾರವನ್ನು ಕೈ ಬಿಡುವಂತೆ ಹಾಗೂ ಅದನ್ನು ಸ್ಥಳಾಂತರಿಸುವುದರಿಂದ ಆಗುವ ಅನಾನುಕೂಲಗಳ ಬಗ್ಗೆ ದೆಹಲಿಯ ಕೇಂದ್ರ ಸಚಿವರ ಕಚೇರಿಯಲ್ಲಿ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ ಅವರನ್ನು ಚಾಮರಾಜನಗರ ಮತ್ತು ಮೈಸೂರಿನ ಪೆಟ್ರೋಲ್ ಬಂಕ್ ಮಾಲೀಕರು ಭೇಟಿಯಾಗಿ ಮನವಿ ಪತ್ರ ನೀಡಿದರು.
ಚಾಮರಾಜನಗರ ಮತ್ತು ಮೈಸೂರಿನ ಡೀಲರ್ ಗಳ ನಿಯೋಗಕ್ಕೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮೈಸೂರು ಕೊಡಗು ಸಂಸದ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಮತ್ತು ಕೋಲಾರದ ಸಂಸದರಾದ ಎಂ ಮಲ್ಲೇಶ್ ಬಾಬುರವರ ಉಪಸ್ಥಿತಿಯಲ್ಲಿ ಅವರ ಸಹಯೋಗದೊಂದಿಗೆ ನಿಯೋಗ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಹರ್ ದೀಪ್ ಸಿಂಗ್ ಪುರಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಸಚಿವರು ಈ ಬಗ್ಗೆ ಚರ್ಚಿಸುವುದಾಗಿ ಭರವಸೆ ನೀಡಿದರು.
ನಿಯೋಗದಲ್ಲಿ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಇಂಡಿಯನ್ ಆಯಿಲ್ ಡೀಲರ್ಸ್ ಅಸೋಸಿಯೇಷನ್ ಪ್ರತಿನಿಧಿಸಿ ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ನ ಕಾರ್ಯದರ್ಶಿ ರವಿಶಂಕರ್ ಕೆ.ಎಸ್. ಅಖಿಲ ಕರ್ನಾಟಕ ಫೆಡರೇಶನ್ ಆಫ್ ಪೆಟ್ರೋಲಿಯಂ ಟ್ರೇಡರ್ಸ್ ನ ಮಾಜಿ ಕಾರ್ಯದರ್ಶಿ ಮತ್ತು ಚಾಮರಾಜನಗರ ಮೈಸೂರು ಇಂಡಿಯನ್ ಆಯಿಲ್ ಡೀಲರ್ಸ್ ಅಸೋಸಿಯನ್ ನ ಗೌರವ ಕಾರ್ಯದರ್ಶಿ ರಂಜಿತ್ ಹೆಗಡೆ ಹೆಚ್. ಕೆ. ರಮೇಶ್ ಭಾಸ್ಕರ್, ಜಯರಾಮ್ ಶಿವಕುಮಾರ್ ಬಿ.ಜಿ ಮತ್ತು ಆಕಾಶ್ ಶಿವ ಹಾಜರಿದ್ದರು,

Spread the love

Leave a Reply