
ಹನೂರು : ಸಾಧು ಸಂತರ ಭವ್ಯ ಪರಂಪರೆಯನ್ನು ಹೊಂದಿರುವ ದೇಶ ಆಧ್ಯಾತ್ಮಿಕ ತುಂಬಿರುವ ದೇಶ ನಮ್ಮ ಭಾರತ ದೇಶ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ತಿಳಿಸಿದರು. ಪಟ್ಟಣದ ಶ್ರೀ ಮಲೆ ಮಹದೇಶ್ವರ ಕ್ರೀಡಾoಗಣದಲ್ಲಿ ಹಮ್ಮಿಕೊಂಡಿದ್ದ ಡಾ ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳವರ 110 ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡಿ ನಂತರ ಮಾತನಾಡಿದರು.ಈ ದೇಶದ ಪ್ರತಿಯೊಬ್ಬ ಪ್ರಜೆಯಲ್ಲೂ ಸಹ ಧಾರ್ಮಿಕತೆ ತುಂಬಿ ತುಳುಕುತ್ತಿದೆ.ಜಗತ್ತನ್ನು ಸೃಷ್ಟಿ ಮಾಡಿದ ಭಗವಂತನ ಮೇಲೆ ಅಪಾರವಾದ ಭಕ್ತಿ ಇದೆ. ಇಡೀ ದೇಶದಲ್ಲಿ ಕಣ್ಣಿಗೆ ಕಾಣುವ ಅನೇಕ ವೈಜ್ಞಾನಿಕ ಸಂಶೋಧನೆಗಳನ್ನು ವಿಜ್ಞಾನಿಗಳು ಮಾಡಿದರೆ ಅಂತರಂಗದ ಸಂಶೋಧನೆಯನ್ನು ಸಾಧು ಸಂತರು ಮಾಡಿದ್ದಾರೆ. ರಾಜೇಂದ್ರ ಶ್ರೀಗಳು ತಮ್ಮ ಅಸ್ತಿತ್ವವನ್ನು ನಶಿಸಿ ಲೋಕಕನ್ನ ಕಲ್ಯಾಣಕ್ಕಾಗಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಅಂತೇ ಆಯಾಯ ಕಾಲಮಾನಕ್ಕೆ ಬೇಕಾದಂತಹ ವ್ಯವಸ್ಥೆಗಳನ್ನು ನಾಡಿನುದ್ದಕ್ಕೂ ಮಠಮಾನ್ಯಗಳು ಮಾಡುತ್ತಲೇ ಬಂದಿವೆ. ಸುತ್ತೂರು ಮಠ ಸಿದ್ದಗಂಗಾ ಮಠ ಹಾಗೂ ಇನ್ನಿತರ ಮಠಗಳು ಸಮಾಜದ ಉನ್ನತಿಗಾಗಿ ಮೀಸಲಿರುವಂತಹ ಮಟಮಾನ್ಯ ಗಳಾಗಿವೆ. ಅತ್ಯಂತ ಕಿರಿಯ ವಯಸ್ನಲ್ಲೇ ಪಟ್ಟಾಭಿಷೇಕ ಪಡೆದರು ಸಹ ಅಲ್ಲಿಂದ ಇಲ್ಲಿಯವರೆಗೂ ನಿರಂತರವಾಗಿ ತಮ್ಮನ್ನು ತಾವು ಸಮಾಜಕ್ಕೋಸ್ಕರ ತೊಡಗಿಸಿಕೊಂಡವರಲ್ಲಿ ರಾಜೇಂದ್ರ ಶ್ರೀಗಳು ಮೊದಲಿಗರು. ಮೂಲ ಸೌಲಭ್ಯಗಳೆ ಇಲ್ಲದಂತಹ ದಿನಮಾನಗಳಲ್ಲಿ ಶಾಲೆಗಳನ್ನು ತೆರೆದು ಶಿಕ್ಷಣವನ್ನ ಕೊಟ್ಟಂತಹ ಮಹಾನ್ ತ್ಯಾಗಿ ಎಂದರು.
ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಮಾತನಾಡಿ ಮಹಾತ್ಮರ ನೀಡಿರುವ ಮಾರ್ಗ ನಮ್ಮ ಬದುಕಿಗೆ ಯಾವಾಗಲು ಬೆಳಕಾಗಿದೆ ಎಂದರೆ ತಪ್ಪಾಗಲಾರದು. ಧಾರ್ಮಿಕ ಸಾಮಾಜಿಕ ಶೈಕ್ಷಣಿಕ ಕ್ರಾಂತಿ ಉಂಟು ಮಾಡಿದ ಸಂಸ್ಥೆ ಗಳಲ್ಲಿ ಜೆ ಎಸ್ ಎಸ್ ಸಂಸ್ಥೆ ಮೊದಲ ಸಾಲಿನಲ್ಲಿ ಇರುತ್ತದೆ.ಡಾ ರಾಜೇಂದ್ರ ಮಹಾ ಸ್ವಾಮಿ ಗಳು ಅತ್ಯಂತ ಮೃದು ಸ್ವಭಾವಿ ಈ ನಾಡಿಗೆ ಕಷ್ಟದ ಹಾದಿಯಲ್ಲಿ ಬೆಳಕನ್ನು ಕೊಟ್ಟವರು ಸುತ್ತೂರು ಶ್ರೀ ಗಳು.ಮಹಾತ್ಮರು ಪರೋಪಕಾರಕ್ಕಾಗಿ ಹುಟ್ಟಿದವರು. ಇವರು ಹಾಕಿ ಕೊಟ್ಟಂತಹ ಮಾರ್ಗದಲ್ಲಿ ನಾವೆಲ್ಲರೂ ಸಹ ನಡೆದುಕೊಂಡು ಹೋಗಬೇಕಾಗಿದೆ. ರಾಜೇಂದ್ರ ಮಹಾಸ್ವಾಮಿಗಳು ತಾವು ಹೊಟ್ಟೆ ಹಸಿವಿನಿಂದ ಇದ್ದರು ತಮ್ಮ ಮಕ್ಕಳು ಹಸಿವಿನಿಂದ ಇರಬಾರದು ಎಂದು ಮಕ್ಕಳಿಗೆ ಹೊಟ್ಟೆ ತುಂಬಿಸಿ ಶಿಕ್ಷಣ ಕೊಡಿಸಿದರು. ಬಹಳ ಮುಖ್ಯ ಎಲ್ಲ ಮಠಗಳಲ್ಲೂ ಸಹ ಶಿಕ್ಷಣ ದಾಸೋಹ ಹುಟ್ಟು ಹಾಕುವ ಮೂಲಕ ಸರ್ಕಾರಕ್ಕೆ ನೆರವಾದರು ಎಂದರು.
ಹನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎಂ ಆರ್ ಮಂಜುನಾಥ್ ಮಾತನಾಡಿ ಇಡೀ ಸಮಾಜದಲ್ಲೇ ಜೆ ಎಸ್ ಎಸ್ ಸಂಸ್ಥೆಗಳಿಗೆ ಸರಿಸಾಟಿ ಯಾವುದು ಇಲ್ಲ ಕಾರಣ ಇಷ್ಟೇ ಇಡೀ ಜಗತ್ತಿನಲ್ಲಿ ಇವರು ಶಿಕ್ಷಣ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ಅದರಲ್ಲೂ ನಮ್ಮ ಹನೂರು ಭಾಗದಲ್ಲಿ ಶೈಕ್ಷಣಿಕ ಕ್ರಾಂತಿಯನ್ನು ಉಂಟು ಮಾಡುವ ಮೂಲಕ ನಮ್ಮ ಹನೂರು ತಾಲೂಕಿನ ಜನರು ಪ್ರಜ್ಞಾವಂತರಾಗಲು ಸಾಧ್ಯವಾಗಿದೆ.ಇದೆ ಸಂಸ್ಥೆ ಗಳಲ್ಲಿ ವಿದ್ಯಾ ಭ್ಯಾಸ ಪಡೆದು ಇಂದು ನೌಕರರಾಗಿರುವ ಎಲ್ಲರೂ ಸಹ ಸಮಾಜಕ್ಕೆ ಒಂದೊಂದು ಕೊಡುಗೆಯನ್ನು ನೀಡಬೇಕು.
ನಮ್ಮ ಹನೂರು ತಾಲೋಕು ಕೃಷಿಗೆ ಪ್ರಧಾನವಾದ ತಾಲೂಕು ಇಲ್ಲಿ ನಾನು ಅಧಿಕಾರಕ್ಕೆ ಬಂದ ಮೇಲೆ ಸುಮಾರು 220 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಉದ್ದಗಲಕ್ಕೂ ಸಹ ರಸ್ತೆ ಕಾಮಗಾರಿ ನಡೆಯುತ್ತಿದೆ.ಜೊತೆಗೆ ನಮ್ಮಲ್ಲೇ ಸಚಿವ ಸಂಪುಟ ನಡೆದ ಬಳಿಕ ನಮ್ಮ ರಾಜ್ಯದ ನಾಡ ದೊರೆ ಸಿದ್ದರಾಮಯ್ಯ ನವರು ನಮಗೆ ಅನೇಕ ರೀತಿಯ ಸಹಾಯ ಮಾಡಿದ್ದಾರೆ. ಹನೂರು ತಾಲೂಕಿನಲ್ಲಿ ಸುಮಾರು 12 ಏಕರೆ ಪ್ರದೇಶದಲ್ಲಿ ಒಂದೇ ಕಡೆ ತಾಲೂಕು ಆಡಳಿತ ಸೌಧ, ಬಸ್ ಡಿಪೋ, ಕೋರ್ಟ್ ಸೇರಿದಂತೆ ಇನ್ನಿತರ ಕಚೇರಿ ತೆರೆಯಲು ಕ್ರಮ ವಹಿಸಿದ್ದೇವೆ. ಜೊತೆಗೆ ಹನೂರು ಪಟ್ಟಣದಲ್ಲಿ 50 ಹಾಸಿಗೆಯುಳ್ಳ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಗುದ್ದಲಿ ಪೂಜೆ ಮಾಡಲು ಮುಂದಾಗಿದ್ದೇವೆ. ಬಹಳ ಮುಖ್ಯವಾಗಿ ಹನೂರು ತಾಲೂಕಿನ ಜೀವನಾಡಿ ಕಾವೇರಿ ನದಿಯಿಂದ ನೀರು ತರಲು ನಾನು ಸಹ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಹಾಗಾಗಿ ರೈತರು ನಡೆಸುತ್ತಿರುವ ಧರಣಿ ಕೈಬಿಡಬೇಕು ಎಂದರು.
ಇದೆ ಸಂದರ್ಭದಲ್ಲಿ ಗುರು ಮಲ್ಲೇಶ್ವರ ಮಠದ ಶ್ರೀ ಮಹಾoತ ಸ್ವಾಮಿ, ಸಾಲೂರು ಮಠದ ಡಾ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಶ್ರೀ ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಮುಮ್ಮಡಿ ಶಿವರುದ ಸ್ವಾಮೀಜಿ, ಮಾಜಿ ಶಾಸಕರಾದ ಬಾಲರಾಜು, ಎನ್ ಮಹೇಶ್, ನಿರಂಜನ್ ಕುಮಾರ್, ನರೇಂದ್ರ, ಪರಿಮಳ ನಾಗಪ್ಪ, ಸಮಾಜ ಸೇವಕರಾದ ನಿಶಾಂತ್, ದತ್ತೇಶ್ ಕುಮಾರ್, ಜನಧ್ವನಿ ವೆಂಕಟೇಶ್, ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಪದಾಧಿಕಾರಿಗಳು,ಸಾರ್ವಜನಿಕರು ಇದ್ದರು.
ಈ ವರ್ಷ ನಮ್ಮ ಹನೂರು ತಾಲೂಕಿನಲ್ಲಿ ರಾಜೇಂದ್ರ ಮಹಾ ಸ್ವಾಮೀಜಿಗಳ 110 ನೇ ಜಯಂತಿ ಮಹೋತ್ಸವ ಕಾರ್ಯಕ್ರಮ ಮಾಡುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಸಮಾಜ ಸೇವೆಗೆ ತಮ್ಮನ್ನು ತಾವು ಮೂಡಿಪಾಗಿದ್ದರು ಈ ಸಮಾಜಕ್ಕೆ ವಿದ್ಯಾ ಸಂಸ್ಥೆಗಳನ್ನು ನೀಡಿ ಯಾರು ಮಾಡದಂತ ಉತ್ತಮ ಕೆಲಸಗಳನ್ನು ಅವರು ಮಾಡಿದ್ದಾರೆ ಅವರು ಮಾಡಿದ ಸೇವೆಗಳನ್ನು ನಾವು ಮನದಲ್ಲಿಟ್ಟುಕೊಂಡು ಅವರು ತೋರಿದ ಹಾದಿಯಲ್ಲಿ ನಾವು ಸಾಗಬೇಕು ಶಿವರಾತ್ರಿ ದೇಶೀ ಕೇಂದ್ರ ಮಹಾ ಸ್ವಾಮೀಜಿಗಳ ಸಹಕಾರದಿಂದ ನಮ್ಮ ಕ್ಷೇತ್ರಕ್ಕೆ ತುಂಬಾ ಅನುಕೂಲವಾಗಿದೆ. ಸರಗೂರು ಗ್ರಾಮದಿಂದ ಮಾರ್ಟಳ್ಳಿ ತನಕ ನೀರಾವರಿ ಯೋಜನೆಗೆ ಡಿಪಿ ಆರ್ ಮಾಡಲಾಗಿದೆ ಅದನ್ನು ತಾವು ಮುಖ್ಯ ಮಂತ್ರಿಗಳ ಜೊತೆ ಮಾತನಾಡಿ ಯೋಜನೆ ಅನುಷ್ಠಾನ ವಾಗುವಂತೆ ಸಹಕಾರ ನೀಡಿ ನಿಮ್ಮ ಮಾರ್ಗದರ್ಶನ ಮುಖ್ಯ – ಆರ್ ನರೇಂದ್ರ ಮಾಜಿ ಶಾಸಕರು ಹನೂರು
ಪರಮ ಪೂಜ್ಯ ಶ್ರೀಗಳ ಕೃಪ ಕಟಾಕ್ಷ ದಿಂದ ಹನೂರು ಕ್ಷೇತ್ರದಲ್ಲಿ ಮಠಗಳು ಶಾಲಾ ಕಾಲೇಜುಗಳು ನಡೆಯುತ್ತಿವೆ. ನಮ್ಮ ಕ್ಷೇತ್ರದಲ್ಲಿ ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದುಕೊಂಡಿದ್ದೇವೆ ಎಂದರೆ ಜೆ ಎಸ್ ಎಸ್ ಸಂಸ್ಥೆಯ ಸಹಕಾರದಿಂದ ಸಾಧ್ಯವಾಗಿದೆ- ಪರಿಮಳ ನಾಗಪ್ಪ ಮಾಜಿ ಶಾಸಕಿ ಹನೂರು ವಿಧಾನಸಭಾ ಕ್ಷೇತ್ರ
ಜೆ ಎಸ್ ಎಸ್ ಸಂಸ್ಥೆಗೆ ಜೆ ಎಸ್ ಎಸ್ ಸಂಸ್ಥೆನೆ ಸಾಟಿ ಇಡೀ ದೇಶದದ್ಯಾoತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 300 ಕ್ಕೂ ಹೆಚ್ಚು ಸಂಸ್ಥೆಗಳು ಇದೆ ನಮ್ಮ ಹನೂರಿನಲ್ಲಿ ಶಿಕ್ಷಣ ಕ್ಷೇತ್ರ ಒಳ್ಳೆಯ ಸ್ಥಾನದಲ್ಲಿ ಇರುವುದಕ್ಕೆ ರಾಜೇಂದ್ರ ಶ್ರೀಗಳು ಕಾರಣ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಹೆಚ್ಚು ಸಂಸ್ಥೆಯ ಸಾಮಾಜಿಕ ಕಾರ್ಯಗಳು ಮುಂದುವರೆಯಲಿ. ನಮ್ಮ ಕ್ಷೇತ್ರದಲ್ಲಿ ರಾಜೇಂದ್ರ ಮಹಾ ಸ್ವಾಮೀಜಿಯವರ 110 ಜನ್ಮ ದಿನೊತ್ಸವ ಆಚರಣೆ ಮಾಡುತ್ತಿರುವುದು ಕ್ಷೇತ್ರದ ಜನರ ಪುಣ್ಯ- ಎಂ ಆರ್ ಮಂಜುನಾಥ್ ಶಾಸಕರು ಹನೂರು