You are currently viewing ಹರವೆ ಚೆನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವ

ಹರವೆ ಚೆನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ಮಹೋತ್ಸವ

ರೇನಾ ಸುದ್ದಿ
ಚಾಮರಾಜನಗರ ಆಗಸ್ಟ್ 15 ತಾಲೂಕಿನ ಹರವೆ ಗ್ರಾಮದ ಚೆನ್ನಬಸವೇಶ್ವರ ಶಾಲೆಯಲ್ಲಿ ಹರವೆ ಮಠ ಅಧ್ಯಕ್ಷರಾದ ಪೂಜ್ಯ ಶ್ರೀ ಶ್ರೀ ಸರ್ಪಭೂಷಣ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಅರ್ಥಪೂರ್ಣವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಭಾರತೀಯ ಸೈನ್ಯಾಧಿಕಾರಿ ಸಾಲ್ವಿನ್ ರವರು ಮಾತನಾಡಿ ನಮ್ಮ ರಾಷ್ಟ್ರಧ್ವಜದ ಮಹತ್ವವನ್ನು ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಅರ್ಥೈಸಿದ್ದರು ನಮ್ಮ ರಾಷ್ಟ್ರಧ್ವಜವನ್ನು ವಿನ್ಯಾಸಗೊಳಿಸಿದವರು ಸ್ವಾತಂತ್ರ ಹೋರಾಟಗಾರ ಪಿಂಗಾಲಿ ವೆಂಕಯ್ಯನವರು ನಮ್ಮ ಧ್ವಜದ ಮೂರು ಬಣ್ಣಗಳು ನಮ್ಮ ದೇಶದ ಸೌಹಾರ್ದತೆಯನ್ನು ಸೂಚಿಸುತ್ತದೆ ಭಾರತೀಯರಾದ ನಾವೆಲ್ಲರೂ ಒಂದೇ ನಮಗೆ ಯಾವುದೇ ಜಾತಿ ಭೇದವಿಲ್ಲ ನಮ್ಮೆಲ್ಲರ ಒಗ್ಗಟ್ಟೆ ನಮ್ಮ ಶಕ್ತಿ ಎಂದರು
ಭಾರತ ದೇಶ ಸ್ವಾತಂತ್ರ್ಯ ಬರುವ ಮುನ್ನ ಬ್ರಿಟಿಷರ ಅಧೀನದಲ್ಲಿ ಬಹಳ ನಿಷ್ಕರುಣೆಯಿಂದ ಕೂಡಿತ್ತು ನಮ್ಮ ದೇಶದ ಜನರ ಊಟ ತಿಂಡಿ ಕೆಲಸ ಎಲ್ಲವನ್ನ ಬ್ರಿಟಿಷರು ನಿರ್ಧರಿಸುತ್ತಿದ್ದರು ನಮ್ಮ ಜನರ ಸಂಪಾದನೆ ನಮ್ಮ ದೇಶದ ಸಂಪತ್ತು ಎಲ್ಲವೂ ಅವರ ಕೈಲಿತ್ತು ಅವರ ಈ ಕಪಿ ಮುಷ್ಟಿಯಿಂದ ಸ್ವತಂತ್ರರಾಗಲು ನಮ್ಮ ದೇಶದ ಮಹಾನ್ ನಾಯಕರು ಶ್ರಮಿಸಿದ್ದಾರೆ ಅವರ ತ್ಯಾಗದ ಪ್ರತಿಕವಾಗಿ ನಾವು ಇಂದು ಇಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸುತ್ತಿದ್ದೇವೆ ಎಂದರು ಈ ಸಂಸ್ಥೆಯ ಪ್ರತಿಯೊಬ್ಬರು ನಿಮ್ಮ ಹೇಳಿಕೆಗಾಗಿ ಶ್ರಮಿಸುತ್ತಿದ್ದಾರೆ ಅವರ ಶ್ರಮಕ್ಕೆ ತಕ್ಕ ಫಲ ಸಿಗಬೇಕಿದೆ ತಾವೆಲ್ಲ ವಿದ್ಯಾರ್ಥಿಗಳು ತಮ್ಮ ಶಿಕ್ಷಕರು ಪೋಷಕರಿಗೆ ವಿಧೇಯರಾಗಿ ನಡೆಯಿರಿ ತಮ್ಮೆಲ್ಲರಿಗೂ ಭಾರತ ದೇಶವನ್ನು ಸುಂದರ ಹಾಗೂ ಸದೃಢಗೊಳಿಸಲು ಒಂದು ಸುವರ್ಣ ಅವಕಾಶ ಸಿಕ್ಕಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಕರೆ ಕೊಟ್ಟರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚೆನ್ನಬಸವೇಶ್ವರ ಸಂಸ್ಥೆಯ ಅಧ್ಯಕ್ಷರು ಪೂಜ್ಯ ಶ್ರೀ ಶ್ರೀ ಸರ್ಪಭೂಷಣ ಸ್ವಾಮಿಗಳವರು ಮಾತನಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಉದ್ದೇಶವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು ವ್ಯಾಪಾರಕ್ಕಾಗಿ ಬಂದಂತಹ ಬ್ರಿಟಿಷರು ನಮ್ಮ ದೇಶವನ್ನು ತಮ್ಮ ಅಧೀನದಲ್ಲಿ ಇಟ್ಟುಕೊಳ್ಳುವ ಮಟ್ಟಕ್ಕೆ ಬೆಳೆದುಬಿಟ್ಟರು ಸರಿ ಸುಮಾರು 200 ವರ್ಷಗಳ ಕಾಲ ನಾವು ಅವರ ದಿನದಲ್ಲಿ ಬೆಂದು ಹೋಗಿದ್ದೆವು. ಅದೆಲ್ಲವೂ ಮಿತಿಮೀರಿ ನಮ್ಮ ದೇಶದ ಜನರ ಜೀವನ ಹೀನಾಯ ಸ್ಥಿತಿಯತ್ತ ಹೋಗುತ್ತಿರುವುದನ್ನು ಮನಗಂಡ ನಮ್ಮ ದೇಶದ ಮಹಾನ್ ನಾಯಕರು ದೇಶಕ್ಕಾಗಿ ಹೋರಾಡಲು ಮುಂದಾದರು ಮಹಾತ್ಮ ಗಾಂಧೀಜಿಯವರ ಹಿಂಸ ತತ್ವದೊಂದಿಗೆ ಅವರ ನೇತೃತ್ವದಲ್ಲಿ ಬಹಳಷ್ಟು ಮಹನೀಯರು ಮಹಾನ್ ಯೋಧರು ನಮ್ಮ ದೇಶದ ಸಾಮಾನ್ಯ ಜನರ ಸಹಕಾರ ದೊಂದಿಗೆ ಶಾಂತಿ ಸೌಹಾರ್ದ ಹಾಗೂ ಬಲಿದಾನದೊಂದಿಗೆ ಹೋರಾಡಿ ನಮಗೆ ಸ್ವಾತಂತ್ರ್ಯ ತಂದು ಕೊಟ್ಟರು
1947 ಆಗಸ್ಟ್ 15ರಂದು ನಾವು ಸಂಪೂರ್ಣವಾಗಿ ಮುಕ್ತಿ ಪಡೆದು ಸ್ವತಂತ್ರ ಭಾರತವಾಗಿ ನೆಲೆ ನಿಂತಿದ್ದೇವೆ ದೇಶ ಮೊದಲು ನಂತರ ನಾವು ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ನಾವೆಲ್ಲರೂ ನಮ್ಮ ದೇಶ ಕಾಯುತ್ತಿರುವ ಯೋಧರು ನಮ್ಮ ಧ್ವಜ ಸಂಸ್ಕೃತಿ ನಮ್ಮ ಗುರುಗಳು ಎಲ್ಲರನ್ನೂ ಗೌರವಿಸಬೇಕು. ದೇಶಕ್ಕಾಗಿ ಏನನ್ನಾದರೂ ಮಾಡುವ ನೆಟ್ಟಿನಲ್ಲಿ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು ವಿದ್ಯಾರ್ಥಿ ಅದಾಗಿನಿಂದಲೇ ದೇಶ ಪ್ರೇಮ ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು
ಮತ್ತೊಬ್ಬ ಅತಿಥಿ ರೇಷ್ಮೆನಾಡು ಪತ್ರಿಕೆ ಸಂಪಾದಕಿ ಸವಿತಾ ಜಯಂತ್ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆ ನಮ್ಮ ದೇಶದ ಪ್ರತಿಯೊಬ್ಬ ಭಾರತೀಯರು ಆಚರಿಸುವಂತಹ ರಾಷ್ಟ್ರೀಯ ಹಬ್ಬ ಇದು ನಮ್ಮೆಲ್ಲರ ಹೆಮ್ಮೆ ಹಾಗೂ ಗೌರವ ನಮಗಾಗಿ ಹೋರಾಡಿದ ಮಹಾ ವ್ಯಕ್ತಿಗಳನ್ನು ಸ್ಮರಿಸುವ ದಿನ ಎಂದರು
ಕಾರ್ಯಕ್ರಮದಲ್ಲಿ ಸಂಸ್ಥೆಯ ಮತ್ತೊಬ್ಬ ಸಂಸ್ಥಾಪಕರಾದ ಗಿರೀಶ್ ರವರು ರೇಷ್ಮೆ ನಾಡು ಪತ್ರಿಕೆ ವ್ಯವಸ್ಥಾಪಕ ಸಂಪಾದಕ ಜೈ ಬಿಆರ್ ಜಯಂತ್ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು

Spread the love

Leave a Reply