ಹೆಚ್ಚುತ್ತಿದೆ ಪ್ರಾಣಿ-ಮಾನವ ಸಂಘರ್ಷ, ಬಲಿಯಾಗುತ್ತಿವೆ ಪ್ರಾಣಿಗಳು, ನಾಶವಾಗುತ್ತಿವೆ ಬೆಳೆಗಳು

ವರದಿ: ಎಂ. ಲಿಂಗಪ್ಪ

ಚಾಮರಾಜನಗರ, ಜ. 11, ಜಿಲ್ಲೆಯಲ್ಲಿ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿ-ಮಾನವ ಸಂಘರ್ಷ ಹೆಣ್ಣಾಗುತ್ತಿದ್ದು, ಕಾಡು ಪ್ರಾಣಿಗಳು, ಜಾನುವಾರುಗಳು ಬಲಿಯಾಗುತ್ತಿದ್ದು, ಕಷ್ಟಪಟ್ಟು ಬೆಳೆದ ಬೆಳೆಗಳು ನಾಶವಾಗುತ್ತ್ತಿದ್ದು, ಪ್ರಾಣಿಗಳಿಗೆ ವಿಷಪ್ರಾಶನ ಮಾಡಿ ಕೊಲ್ಲುವಂತಹ ಮಟ್ಟಕ್ಕೆ ಬಂದು ನಿಂತಿದೆ.

ಕಾಡುಗಳು ಸಮೃದ್ಧವಾಗುತ್ತಿವೆ. ವಕ್ಕ ಪ್ರಾಣಿಗಳ ಸಂಖ್ಯೆಯು ಹೆಚ್ಚುತ್ತಿವೆ, ಅದೇ ರೀತಿ ಪ್ರಾಣಿ-ಮಾನವ ಸಂಘರ್ಷವು ಹೆಚ್ಚುತ್ತಿದೆ.

ಆನೆ, ಹಂದಿ ಕಬ್ಬಿನ ಗದ್ದೆಗೆ, ಬಾಳೆ ತೋಟಕ್ಕೆ ನುಗ್ಗಿ ಬೆಳೆ ಹಾಳುಮಾಡುತ್ತಿವೆ. ಚಿರತೆ ದಸಕರು ಹೊತ್ತೊಯ್ದಿದೆ.

ಪ್ರತೀ ದಿನ ಒಂದಲ್ಲ ಒಂದು ಮಾನವ-ಪ್ರಾಣಿ ಸಂಘರ್ಷ ನಡೆಯುತ್ತಲೇ ಇದೆ, ಹುಲಿ, ಚಿರತೆ, ಕರಡಿ ಮನುಷ್ಯನ ಮೇಲೆ ದಾಳಿ ಮಾಡುತ್ತಿವೆ. ರೋಷಿ ಹೋಗಿರುವ ಹುಲಿಗಳ ಧಾರುಣ ಹತ್ಯೆ, 30ಕ್ಕೂ ಹೆಚ್ಚು ಕೋತಿಗಳ ಸಾತ್ಯ ವಿದ್ಯುತ್ ಬೇಲಿಗೆ ಸಿಲುಕಿ ಆಕೆಗಳ ಸಾವು

ಹುಲಿ, ಚಿರತೆಗಳಿಗೆ ದನಕರುಗಳು ಅತಿ ಪ್ರಿಯವಾದ ಒಳಕ್ಕೆ ನುಗ್ಗಿ ದನಕರುಗಳನ್ನು ಮೇಯಿಸುತ್ತಾರೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಆರಧಿಕೃತ ಎತ್ತಿ ಕಾಡು ಪ್ರಾಣಿಗಳ ಸ್ವಚ್ಛಂದ ವಿಹಾರಕ್ಕೆ ತೊಂದರೆ ಮಾಡುತ್ತಿವೆ.ಇವುಗಳನ್ನು ತೆರವು ಮಾಡಿಸುವುದು ಇಲಾಖೆಗೆ ಕಷ್ಟಕರವಾಗಿದೆ.

ಪ್ರಾಣಿ ಕಳ್ಳ ಸಾಗಣೆ ಒಂದು ದೊಡ್ಡ ದಂಧೆಯಾಗಿ ಮಾರ್ಪಟ್ಟಿದೆ.ಪ್ರಾಣಿಗಳ ಹಲ್ಲು, ಚರ್ಮ,ಮಾಂಸ ಮತ್ತು ವಿವಿಧ ಭಾಗಗಳನ್ನು ಲಕ್ಷಾಂತರ ರುಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.ಇವುಗಳ ತಡೆಗೆ ಸರ್ಕಾರ ಇನ್ನು ಸಾಕಷ್ಟ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಭೂ ಪ್ರದೇಶದ ಶೇ.50ರಷ್ಟು ಅರಣ್ಯವನ್ನು ಹೊಂದಿರುವ ಜಿಲ್ಲೆಯಲ್ಲಿ ಮಾನವ, ಪ್ರಾಣಿ ಸಂಘರ್ಷ ಇದ್ದೆ ಇರುತ್ತದೆ ಆದರೆ, ಈಗ ಇದು ಹೆಚ್ಚುತ್ತಿದ್ದು ಕಾಡಂಚಿನ ಗ್ರಾಮಗಳಲ್ಲಿ ಆತಂಕ ಹೆಚ್ಚುತ್ತಿದೆ.ಕಾಡುಪ್ರಾಣಿಗಳ ಲಗ್ಗೆಯಿಂದ ಸಾವಿರಾರು ಎಕರೆ ಫಸಲು ನಷ್ಟವಾಗುತ್ತಿದೆ.ಅದೇ ರೀತಿಯಲ್ಲಿ ಮನುಷ್ಯನ ಕೆಟ್ಟ ಆಲೋಚನೆಗೆ ಪ್ರಾಣಿಗಳು ಸಹ ಸತ್ತಿವೆ.

ಸಂಘರ್ಷವನ್ನು ತಡೆಯುವ ನಿಟ್ಟಿರಲ್ಲಿ ಅರಣ್ಯ ಇಲಾಖೆ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆಯಾದರೂ ಯಶಸ್ಸು ಸಾಧ್ಯವಾಗಿಲ್ಲ. ಆನೆ ಕಾರಿಡಾರ್ ಒತ್ತುವರಿ, ಕಾಡಂಚಿನಲ್ಲಿ ಅಭಿವೃದ್ಧಿ ಹೆಸರಲ್ಲಿ ಆರಣ್ಯ ಅತಿಕ್ರಮಣ, ಮಳೆ ಕೊರತೆ ಸೇರಿದಂತೆ ಆನೇಕ ಕಾರಣಗಳು ಮಾನವ-ಪ್ರಾಣಿ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತಿವೆ ಎಂಬುದು ಪರಿಸರವಾದಿಗಳ ಆರೋಪ.

ಜಿಲ್ಲೆಯಾ ಅರಣ್ಯದಂಚಿನಲ್ಲಿ ಸೋಲಾರ್ ತಂತಿಬೇಲಿ , ಕಂದಕವನ್ನು ನಿರ್ಮಾಣ ಮಾಡಲಾಗಿದೆ. ರೈಲು ಕಂಬಿಗಳನ್ನು ಬೆಲೆ ಬೇಲಿ ನಿರ್ಮಿಸುವ ಕಾರ್ಯವು ನಡೆದಿದೆ. ಆದರೂ ಕಾಡಾಚೆಗೆ ದಾಳಿ ಮಾಡುವ ಪ್ರಾಣಿಗಳನ್ನು ತಡೆಯಲು ಸಾಧ್ಯವಾಗಿಲ್ಲ. ರೈತನ ಜನವಾರುಗಳು ಸಹ ಬಲಿಯಾಗಿವೆ.

ಹೆಚ್ಚುತ್ತಿರುವ ಮಾನವ-ಪ್ರಾಣಿ ಸಂಘರ್ಷ ಪ್ರಕರಣಗಳನ್ನು ತಗ್ಗಿಸಲು ಕರ್ನಾಟಕ ಅರಣ್ಯ ಇಲಾಖೆ ಈಗ ಆಯಾಮಗಳನ್ನು ಅನ್ವೇಷಿಸುತ್ತಿದೆ ಮತ್ತು ಪರಿಹಾರಗಳನ್ನು ಹುಡುಕುತ್ತಿದೆ.
ಹುಲಿ ಆನೆ ಮತ್ತು ಚಿರತೆಗಳ ಸಂಖ್ಯೆ ಹೆಚ್ಚಳದಿಂದ ಹೆಮ್ಮೆಪಡುತ್ತಿದ್ದರೆ, ಈಗ ಸಂಘರ್ಷ ಪ್ರಕರಣಗಳು ಹೆಚ್ಚಾಗುತ್ತಿವೆ.

ಮಾನವ-ಪ್ರಾಣಿ ಸಂಘರ್ಷ ಇದು ಹೆಚ್ಚಾಗಿ ಆಹಾರ ಅಶ್ರಯ ಅಥವಾ ಇತರ ಸಂಪನ್ಮೂಲಗಳಿಗಾಗಿ ಸ್ಪರ್ಧೆ ಉಂಟಾದಾಗ ಆಗುತ್ತೆ. ಇದರಿಂದಾಗಿ ಮಾನವ ಮತ್ತು ಪ್ರಾಣಿಗಳಿಗೆ ಹಾನಿ ಆಗುತ್ತಿದೆ.

ಆಹಾರದ ಕೊರತೆಯಿಂದಾಗಿ ಪ್ರಾಣಿಗಳು ಬೆಳೆಗಳನ್ನು ನಾಶಪಡಿಸುತ್ತವೆ ಮತ್ತು ಜನವರುಗಳನ್ನು ಭೇಟಿ ಅವುಟ್ತ್ತವೆ ಇದರಿಂದಾಗಿ ರೈತರಿಗೆ ಆರ್ಥಿಕ ನಷ್ಟ ಉಂಟಾಗುತ್ತದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಾಕಷ್ಟು ಹಣ ವ್ಯಯ ಮಾಡುತ್ತಿದೆ.
ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ನೌಕರರಿಗೆ ಸಕಾಲದಲ್ಲಿ ವೇತನ ಪಾವತಿ ಮಾಡಿ ಎಲ್ಲರಿಗು -ಮೂಲಭೂತ ಸೌಕರ್ಯ ಒದಗಿಸಬೇಕು, ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದುಕೊಂಡು ಕರ್ತವ್ಯ ನಿರ್ವಹಿಸಬೇಕು. ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಅರಣ್ಯಗಳನ್ನು ಸಂರಕ್ಷಿಸುವುದು ಮತ್ತು ಅರಣ್ಯ ನಾಶವನ್ನು ತಡೆಯುವುದು ಮುಖ್ಯ.

ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯರನ್ನೊಳಗೊಂಡು ಕಾವಲು ಪಡೆ ರಚಿಸಬೇಕು, ಕಾಡಂಚಿನ ಗ್ರಾಮಗಳ ಜನರಿಗೆ ಅರಣ್ಯ ಕಾಯ್ದೆ ಮತ್ತು ವನ್ಯಜೀವಿ ಸಂರಕ್ಷಣೆಯ ಬಗ್ಗೆ ಅರಿವು ಮೂಡಿಸಬೇಕು. ಕಾಡು ಪ್ರಾಣಿಗಳಿಂದ ಅನಾಹುತವಾದರೆ ಬೇಗ ಪರಿಹಾರ ಒದಗಿಸಬೇಕು.

ವೈವಿಧ್ಯಮಯ ಕಾಡುಗಳನ್ನೊಳಗೊಂಡ ಎರಡು ಹುಲಿ ಸಂರಕ್ಷಿತ ವಲಯ ಹಾಗೂ ಎರಡು ವನ್ಯಜೀವಿ ವಲಯಗಳನ್ನೊಳಗೊಂಡ ರಾಜ್ಯದಲ್ಲೇ ಹೆಚ್ಚು ಹುಲಿಗಳನ್ನು ಹೊಂದಿರುವ ಈ ಜಿಲ್ಲೆಯಲ್ಲಿ ಪ್ರಾಣಿಗಳ ಹತ್ಯೆ ಆಗಬಾರದು. ಅರಣ್ಯ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಕಾಡಿನೊಳಗೆ ಜಾನುವಾರು ಬಿಡುವುದು, ಕಾಡಿನೊಳಗೆ ವಿಷಕಾರಿ ವಸ್ತು ತೆಗೆದುಕೊಂಡು ಹೋಗುವುದು ಶಿಕ್ಷಾರ್ಹ ಅಪರಾಧವಾದ್ದರಿಂದ ಇದರ ಬಗ್ಗೆ ಅರಿವು ಮೂಡಿಸಿ , ಮಾನವ-ಪ್ರಾಣಿ ಸಂಘರ್ಷವನ್ನು ಕಡೈಮ್ ಮಾಡಬೇಕಾಗಿದೆ.

ವನ್ಯ ಸುರಕ್ಷಣೆ ಆಗಬೇಕಾದರೆ ಮಾನವ-ಪ್ರಾಣಿ ಸಂಘರ್ಷ ಕಡಿಮೆ ಆಗಬೇಕು ಈ ನಿಟ್ಟಿನಲ್ಲಿ ಸರಕಾರ ಹಾಗೂ ಸಾರ್ವಜನಿಕ ಸಹಕಾರ ಅತ್ಯಗತ್ಯ. ಈ ಮಾನವ-ಪ್ರಾಣಿ ಸಂಘರ್ಷದಿಂದಾಗಿಯೇ ಐದು ಹುಲಿಗಳ ಹತ್ಯೆ ಆಗಿದೆ, ಚಿರತೇ ಕಳೆಬರ ಕಂಡು ಬಂದಿದೆ, ಮಾನವ-ಪ್ರಾಣಿ ಸಂಘರ್ಷ ಸಂಘರ್ಷ ಕಡಿಮೆಯಾದರೆ ಮಾತ್ರ ಪನ್ನಜೀವಿ ಸಂರಕ್ಷಣೆ ಸಾಧ್ಯ – ಸಂಜಯ್ ಗುಬ್ಬಿ. ವನ್ಯ ಜೀವಿ ವಿಜ್ಞಾನಿ.

ಮಾನವ-ಪ್ರಾಣಿ ಸಂಘರ್ಷ ಹೆಚ್ಚಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿಗಳು, ಸೆಸ್ಕಾಂನವರ ನಿರ್ಲಕ್ಷ್ಯವೂ ಕಾರಣವಾಗಿದೆ. ಬೆಳೆಗಳು ನಾಶವದಾಗ ಜಾನುಜಾರುಗಳು ಬಲಿಯಾದಾಗ ವೈಜ್ಞಾನಿಕ ಪರಿಹಾರವನ್ನು ಬೇಗ ಕೊಡಬೇಕು, ಆರಣ್ಯದೊಳಗೆ ಜಾನುಪಾರುಗಳು ಹೋಗದಂತೆ ಗಸ್ತು ಹೆಚ್ಚಿಸಿ ಮಾಹಿತಿ ಪಡೆಯಬೇಕು ಸೋಲಾರ್ ವಿದ್ಯುತ್ ಬೇಲಿಯ ಬಗ್ಗೆ ಸೆಸ್ಕಾಂನವರು ಆಗಾಗ್ಗೆ ಪರಿಶೀಲಿಸಬೇಕು, ನಮ್ಮ ಜಿಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಹೊಂದಾಣಿಕೆ ಕೊರತೆ ಕಾಡುತ್ತಿದೆ.- ಡಿ.ಎಸ್. ದೊರೆಸ್ವಾಮಿ, ಪರಿಸರವಾದಿಗಳು

ಕಾಡಿನೊಳಗೆ ಅನಧಿಕೃತ ಹೋಮ್ ಸ್ಟೇಗಳು, ರೆಸಾರ್ಟ್ ಗಳು ತಲೆ ಎತ್ತಿರುವುದು ಮಾನವ ಪ್ರಾಣಿ ಸಂಘರ್ಷಕ್ಕೆ ಕಾರಣವಾಗಿದೆ. ಇದರ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಅರಣ್ಯ ಅಧಿಕಾರಿಗಳು, ಸಿಬ್ಬಂದಿಗಳು, ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಬೆಳೆಗಳು ನಾಶವಾದಾಗ, ಜಾನುಜಾರುಗಳು ಬಲಿಯಾದಾಗ ಸೂಕ್ತ ಪರಿಹಾರ ನೀಡುತ್ತಿಲ್ಲ.- ಹಳ್ಳಿಕೆರೆಹುಂಡಿ ಭಾಗ್ಯರಾಜ್, ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ

Spread the love

Leave a Reply