
ನಗರದ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಎಷ್ಟು ಬಾರಿಯಾದರೂ ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡುತ್ತೇನೆ ಇದರಲ್ಲಿ ವಿಶೇಷತೆ ಏನಿಲ್ಲ ಚಾಮರಾಜನಗರಕ್ಕೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತೇವೆ ಎಂಬುದು ಮೂಢನಂಬಿಕೆ ಇವನ್ನೆಲ್ಲ ನಾನು ನಂಬುವುದಿಲ್ಲ ಎಂದರು. ಅನೇಕ ಬಾರಿ ಚಾಮರಾಜನಗರಕ್ಕೆ ಮಲೆ ಮಹದೇಶ್ವರ ಬೆಟ್ಟಕ್ಕೆ ಗುಂಡ್ಲುಪೇಟೆಗೆ ಬಂದಿದ್ದೇನೆ ಅದರಲ್ಲಿ ಏನು ವಿಶೇಷತೆ ಇಲ್ಲ ಎಂದರು ಗುಂಡ್ಲುಪೇಟೆ ತಾಲ್ಲೋಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿದರು
ಇಲ್ಲಿಗೆ ಬಂದಾಗೆಲ್ಲ ಕುರ್ಚಿ ಗಟ್ಟಿ ಆಗುತ್ತದೆ ಅಂತ ಹೇಳಿದ್ರಿ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ ಇಲ್ಲಿಗೆ ಬಂದಾಗ ಅಧಿಕಾರ ಹೋಗುತ್ತದೆ ಎಂದು ಪ್ರಶ್ನೆ ಕೇಳುತ್ತೀರಾ ಅದಕ್ಕೆ ನಾನು ತಮಾಷೆಯಾಗಿ ಉತ್ತರಿಸಿದ್ದೆ ಅಷ್ಟೇ ಇದನ್ನು ಸೂಕ್ಷ್ಮವಾಗಿ ಪರಿಗಣಿಸುವುದು ಬೇಡ ಖಾಸಗಿಯಾಗಿ ಹೇಳಿದ್ದೇನೆ ರಾಜಕೀಯ ಸದುದ್ದೇಶವೇನಿಲ್ಲ ಎಂದರ
ನಲ್ಪಾಡು ಮನೆ ಮೇಲೆ ರೈಡ್ ಆಗಿರುವುದರ ಬಗ್ಗೆ ಪ್ರಶ್ನಿಸಿದ್ದಕ್ಕೆ ಕೇಂದ್ರ ಸರ್ಕಾರದವರು ಯಾವಾಗಲೂ ಕಾಂಗ್ರೆಸ್ ನವರನ್ನೇ ಗುರಿಯಾಗಿಟ್ಟುಕೊಂಡು ರೈಡ್ ಮಾಡುತ್ತಾರೆ ಯಾಕೆ ಬಿಜೆಪಿ ಅವರ ಮೇಲೆ ಯಾವುದೇ ರೈಟ್ ಗಳು ನಡೆಯುವುದಿಲ್ಲ ಎಂದು ಮರು ಪ್ರಶ್ನಿಸಿದರು
ತಮ್ಮ ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ರಾಜ್ಯಗಳು ಪಕ್ಷಗಳು ಕಾಪಿ ಮಾಡುತ್ತಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಯಾರು ಇದನ್ನು ವಿರೋಧಿಸಿದ್ದವರಿಗೆ ಈಗಲಾದರೂ ಗೊತ್ತಾಯಿತಲ್ಲ ಗ್ಯಾರಂಟಿ ಯೋಜನೆಗಳು ಬಡವರಿಗಾಗಿ ಮಾಡಿರುವ ಕಾರ್ಯಕ್ರಮಗಳು ಎಂಬ ಅರಿವಾಗಿದೆಯಲ್ಲ ಅಷ್ಟು ಸಾಕು ಎಂದರು.
ತಮ್ಮ ಕ್ಷೇತ್ರದಲ್ಲಿ ಸತ್ತವರಿಗೆ ಮಾತ್ರ ಪರಿಹರ ಕೊಡುತ್ತಾರೆ ಬೇರೆ ಕ್ಷೇತ್ರಗಳ ಬಗ್ಗೆ ಗಮನಹರಿಸುವುದಿಲ್ಲ ಎಂಬ ಜೆಡಿಎಸ್ ಶಾಸಕರ ಆರೋಪ ಕೇಳಿ ಬರುತ್ತಿದೆ ಈ ಬಗ್ಗೆ ನಿಮ್ಮ ಉತ್ತರವೇನು ಎಂಬುದಕ್ಕೆ ಉತ್ತರಿಸಿದ ಸಿಎಂ ಯಾವುದೇ ಕ್ಷೇತ್ರದ ಶಾಸಕರು ಬಂದು ನನ್ನನ್ನು ಕೇಳಿದರೆ ಖಂಡಿತ ಕೊಡುತ್ತೇನೆ ಅಥವಾ ನನ್ನ ಗಮನಕ್ಕೆ ಬಂದರೂ ಕೊಡುತ್ತೇನೆ ಆರೋಪಿಸಿರುವವರು ನನ್ನನ್ನು ಇದುವರೆಗೂ ಕೇಳಿಲ್ಲ ಕೇಳಿದರೆ ಕೊಡುತ್ತೇನೆ ಎಂದರು
ಕಾಂಗ್ರೆಸ್ನವರು ಮಹಿಳಾ ವಿರೋಧಿಗಳು ಎಂಬ ಆರೋಪಗಳು ಕೇಳಿ ಕೇಳಿ ಬರುತ್ತಿವೆ ಈ ಬಗ್ಗೆ ನಿಮ್ಮ ನಿಲುವೇನು ಎಂಬುದಕ್ಕೆ ಉತ್ತರಿಸಿದ ಸಿಎಂ 73 74 ಅಮೆಂಡ್ಮೆಂಟ್ ಮಾಡಿದವರು ಯಾರು ಅದನ್ನು ವಿರೋಧಿಸಿದವರ್ಯಾರು ಎಂಬುದನ್ನು ನಾನು ಹೇಳುವ ಅಗತ್ಯವಿಲ್ಲ ರಾಜೀವ್ ಗಾಂಧಿ ಕಾಲದಲ್ಲಿ 73 74ರ ಅಮ್ಮೆನ್ಡ್ಮೆಂಟ್ ಗೆ ವಿರೋಧ ವ್ಯಕ್ತಪಡಿಸಿದ್ದು ಏನ್ಡಿಎ ಅವರು ಈಗ ನಮ್ಮ ಮೇಲೆ ಗ*** ಕೂರಿಸುತ್ತಿದ್ದಾರೆ ರಾಜಕೀಯವಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ ನಾವು ಮಹಿಳಾ ಮೀಸಲಾತಿಯನ್ನು ವಿರೋಧಿಸಿಲ್ಲ ಬಿ ಲಿಮಿಟೇಶನ್ ಗೆ ವಿರೋಧ ವ್ಯಕ್ತಪಡಿಸಿದ್ದೇವೆ ಎಂದರು
ಚಾಮರಾಜನಗರದ ಕೋವಿಡ್ ಸಂದರ್ಭದಲ್ಲಿ ಆದ ಆಕ್ಸಿಜನ್ ದುರಂತದಲ್ಲಿ ಸತ್ತವರ ಕುಟುಂಬಕ್ಕೆ ತಮ್ಮ ಭರವಸೆಯಂತೆ ನಡೆದುಕೊಂಡಿದ್ದೀರಿ ಆದರೆ ತಪ್ಪಿತಸ್ಥರ ಬಗ್ಗೆ ಯಾವುದೇ ತನಿಖೆಯಾಗಿಲ್ಲ ತಪ್ಪಿತಸ್ಥರು ಯಾರು ಎಂಬುದು ಇನ್ನು ತಿಳಿದು ಬಂದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ತಿಳಿದು ಮಾತನಾಡುತ್ತೇನೆ ಎಂದರು.
ರಾಜ್ಯದ್ಯಂತ ಅಲ್ಪಸಂಖ್ಯಾತರು ಕಾಂಗ್ರೆಸ್ ಹೈಕಮಾಂಡ್ ಗೆ ಪತ್ರ ಬರೆದಿದ್ದಾರೆ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದು ಕೇಳಿದ್ದಕ್ಕೆ ಉತ್ತರಿಸಿದ ಸಿಎಂ ಅಲ್ಪಸಂಖ್ಯಾತರ ವಿಚಾರದಲ್ಲಿ ತೀರ್ಮಾನ ಕೈಗೊಳ್ಳುವಾಗ ಅಲ್ಪಸಂಖ್ಯಾತರ ಮುಖಂಡರು ಅಲ್ಲೇ ಇದ್ದರು ಅವರು ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ ಈಗ ಪತ್ರ ಬರೆದಿರುವ ಬಗ್ಗೆ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ ಎಂದರು.
ಎರಡು ಕಡೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆ ಗೆಲುವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.