
ಚಾಮರಾಜನಗರ:ಜೆ.೨೩. ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಮಲ್ಲು ೩ ಸಾವಿರ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಡಿ ವೈ ಎಸ್ ಪಿ ಗಜೇಂದ್ರ ಸ್ವಾಮಿ ಮತ್ತು ತಂಡದೊಂದಿಗೆ ದಾಳಿ ಮಾಡಿದ ಸಂದರ್ಭದಲ್ಲಿ ಬಲೆಗೆ ಬಿದ್ದಿದ್ದಾರೆ.
ಅಪಘಾತ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯದಲ್ಲಿ ಪ್ರಕರಣ ಇತ್ಯರ್ಥ ಆಗಿದ್ದರೂ ಕೂಡ ವಾಹನವನ್ನು ಬಿಡುಗಡೆ ಮಾಡದೇ ವಾಹನದ ಮಾಲೀಕರಿಂದ ೩ ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಈ ವಿಷ್ಯವನ್ನು ವಾಹನದ ಮಾಲೀಕ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದು ಶುಕ್ರವಾರ ಮಧ್ಯಾಹ್ನ ೩ ಸಾವಿರ ಲಂಚವನ್ನು ನೀಡುವಾಗ ಹಣದ ಸಮೇತ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿದ್ದಾರೆ.
ಈ ಕಾರ್ಯಚರಣೆಯಲ್ಲಿ ಡಿವೈಎಸ್ಪಿ ಗಜೇಂದ್ರ ಸ್ವಾಮಿ ಇನ್ಸ್ ಪೆಕ್ಟರ್ ಗಿರೀಶ್ ಕುಮಾರ್, ಆರಾಧ್ಯ ಮಹದೇವಸ್ವಾಮಿ, ಪ್ರತಾಪ್, ಗೌತಮ್, ಶಾಂತರಾಜು ಇನ್ನಿತರರು ಹಾಜರಿದ್ದರು.