ಪ್ರತಿಯೊಬ್ಬನಿಗೂ ಭಾವನೆಯ ಅಂತಃಕರಣದ ಹಾಗೂ ಮತದ ಸ್ವಾತಂತ್ರ್ಯಗಳಿಗೆ ಬಾಧ್ಯತೆಯುಂಟು. ಏಕಾಂಗಿಯಾಗಿಯೂ ಇಲ್ಲವೆ ಇತರರೊಡಗೂಡಿಯೂ ತನ್ನ ಮತವನ್ನಾಗಲಿ, ವಿಶ್ವಾಸವನ್ನಾಗಲಿ, ಬದಲಾಯಿಸುವ ಸ್ವಾತಂತ್ರ್ಯವನ್ನೂ, ಬಹಿರಂಗವಾಗಿಯೂ ಗೋಪ್ಯವಾಗಿಯೂ ತನ್ನ ಮತವನ್ನಾಗಲಿ ವಿಶ್ವಾಸವನ್ನಾಗಲಿ ಬೋಧಿಸುವ, ರೂಢಿಸುವ, ಆರಾಧಿಸುವ, ಆಚರಿಸುವ ಸ್ವಾತಂತ್ರ್ಯವನ್ನೂ ಈ ಹಕ್ಕು ಒಳಗೊಂಡಿದೆ. ಪ್ರತಿಯೊಬ್ಬನಿಗೂ ಅಭಿಪ್ರಾಯಪಡುವ, ಉಚ್ಚಾರಣೆಗೈವ ಸ್ವಾತಂತ್ರ್ಯಗಳ ಬಾಧ್ಯತೆಯುಂಟು. ಮಧ್ಯಸ್ಥಿಕೆ ವಹಿಸದಂತೆ ಅಭಿಪ್ರಾಯಗಳನ್ನಿಟ್ಟುಕೊಳ್ಳುವ ಸ್ವಾತಂತ್ರವನ್ನೂ ಸರಹದ್ದುಗಳ ಲಕ್ಷ್ಯವಿಲ್ಲದೆಯೂ ಯಾವ ಮುಖಾಂತರವಾಗಿಯೂ ವರ್ತಮಾನವನ್ನೂ ಭಾವನೆಗಳನ್ನೂ ಅನ್ವೇಷಣಗೈವ, ಸ್ವೀಕರಿಸುವ, ತಿಳಯಪಡಿಸುವ ಸ್ವಾತಂತ್ರ್ಯವನ್ನೂ ಈ ಬಾಧ್ಯತೆ ಒಳಗೊಂಡಿದೆ.