ಜೀ಼ ಕನ್ನಡದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಗ್ರಾಂಡ್ ಫಿನಾಲೆ ಚಾಮರಾಜನಗರದಲ್ಲಿ
ಮನರಂಜನೆಗೆ ಮತ್ತೊಂದು ಹೆಸರೇ ಜೀ಼ ಕನ್ನಡ.ಜನಪ್ರಿಯ ಧಾರಾವಾಹಿಗಳಿಂದ ಮಾತ್ರವಲ್ಲದೇ ರಿಯಾಲಿಟಿ ಶೋಗಳಿಗೆ ಹೊಸತನದ ಮೆರುಗನ್ನು ನೀಡಿ ಎಲ್ಲಾ ವಯೋಮಿತಿಯ ಪ್ರೇಕ್ಷಕರ ಪ್ರೀತಿಗೆ ಪಾತ್ರವಾಗಿದೆ.ಈ ರಿಯಾಲಿಟಿ ಶೋಗಳಲ್ಲಿ ಒಂದಾದ ಎಲ್ಲರ ಅಚ್ಚುಮೆಚ್ಚಿನ ಡಾನ್ಸ್ ಕರ್ನಾಟಕ ಡಾನ್ಸ್ ಈಗ ಕೊನೆಯ ಹಂತಕ್ಕೆ ತಲುಪಿದೆ.ಡಾನ್ಸ್ ಕರ್ನಾಟಕ ಡಾನ್ಸ್ ಫಿನಾಲೆ ಇದೇ ಡಿಸೆಂಬರ್ 1 ರಂದು ಚಾಮರಾಜನಗರದ ಡಾ.ಬಿ ಆರ್ ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದ್ದು ತಾವೆಲ್ಲರೂ ಭಾಗಿಯಾಗಬಹುದಾಗಿದೆ . ಈ ಕಾರ್ಯಕ್ರಮವನ್ನು ನೋಡಲು ಇಚ್ಛಿಸುವವರು ಪಾಸ್ ಅನ್ನು ಇಂದು ಶನಿವಾರ ಸಂಜೆ 4 ಗಂಟೆಗೆ ಕಾರ್ಯಕ್ರಮ ನಡೆಯುವ ಜಾಗ ಅಂದರೆ ಡಾ.ಬಿ. ಆರ್ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಪಡೆಯಬಹುದಾಗಿದೆ. ಉಚಿತ ಪ್ರವೇಶ, ಸ್ಥಿಮಿತ ಆಸನಗಳಿದ್ದು ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತದೆ. ಈ ಕಾರ್ಯಕ್ರಮದ ಪಾಸ್ ಉಚಿತವಾಗಿದ್ದು ವಾಹಿನಿ ಯಾವುದೇ ರೀತಿಯ ಹಣ ಪಡೆಯುತ್ತಿಲ್ಲ ಅನ್ನುವುದು ಮತ್ತೊಂದು ಗಮನ…