You are currently viewing ಗುಂಡ್ಲುಪೇಟೆ : ಅರಣ್ಯ ಇಲಾಖೆಯ ಕರ್ಮಕಾಂಡವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಪರಿಸರವಾದಿ ಜೋಸೆಫ್ ಹೂವರ್ ಅವರಿಗೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪ್ರಭಾಕರನ್ ಧಮ್ಕಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಗುಂಡ್ಲುಪೇಟೆ : ಅರಣ್ಯ ಇಲಾಖೆಯ ಕರ್ಮಕಾಂಡವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಪರಿಸರವಾದಿ ಜೋಸೆಫ್ ಹೂವರ್ ಅವರಿಗೆ ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪ್ರಭಾಕರನ್ ಧಮ್ಕಿ ಹಾಕಿ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬಂಡೀಪುರದಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಮೂಲಸೌಕರ್ಯವನ್ನ ಒದಗಿಸುವಲ್ಲಿ ಅಧಿಕಾರಿಗಳು ಸಂಪೂರ್ಣ ವಿಫಲವಾಗಿದ್ದಾರೆ. ಮೇಲಾಧಿಕಾರಿಗಳಿಗೆ ಐಷಾರಾಮಿ ಕೊಠಡಿಗಳನ್ನ ನಿರ್ಮಾಣ ಮಾಡಿ ದುಂಧು ವೆಚ್ಚ ಮಾಡಲಾಗುತ್ತಿದೆ ಎಂದು ಜೋಸೆಫ್ ಹೂವರ್ ದೂರಿದ್ದರು. ವಲಯ ಅರಣ್ಯಾಧಿಕಾರಿಗಳಿಗೆ , ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೇರಿದಂತೆ ಭವ್ಯವಾದ ಕೊಠಡಿ ನಿರ್ಮಾಣ ಮಾಡಲಾಗಿದೆ, ಹಿಂದಿನ ಸಿಎಫ್ ರಮೇಶ್ ಕುಮಾರ್ ಅವಧಿಯಲ್ಲಿ ನವೀಕರಣಗೊಂಡಿದ್ದ ಕಛೇರಿಯನ್ನೇ ಮತ್ತೇ ನವೀಕರಣಗೊಳಿಕೆಗೆ ಮುಂದಾಗಿ ಕೋಟ್ಯಾಂತರ ರೂ ಹಣವನ್ನ ವ್ಯಯ ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದ್ದವು.

ಕಳ್ಳಭೇಟೆ ಶಿಬಿರಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಮನೆಗಳ ಮೇಲ್ಛಾವಣಿ ಸಂಪೂರ್ಣವಾಗಿ ಹದಗೆಟ್ಟುಹೋಗಿದ್ದು ಮಳೆ ಸಂಧರ್ಭದಲ್ಲಿ ನೀರು ಸೋರುತ್ತಿದೆ, ಅರಣ್ಯ ಸಂರಕ್ಷಣೆಗೆ ಶ್ರಮಿಸುತ್ತಿರುವ ಸಿಬ್ಬಂದಿಗಳ ಹಿತ ಕಾಯದ ಅಧಿಕಾರಿಗಳು ಐಷಾರಾಮಿ ಜೀವನಕ್ಕೆ ಮುಂದಾಗುತ್ತಿದ್ದಾರೆ ಎಂದು ವಿಡಿಯೋ ಸಮೇತ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು ಇದಾದ ಕೆಲ ಘಂಟೆಯಲ್ಲೇ ಬಂಡೀಪುರ ಸಿಎಫ್ ಪ್ರಭಾಕರನ್ ಫೋನ್ ಕರೆ ಮಾಡಿ ಧಮ್ಕಿ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಅರಣ್ಯ ಸಂರಕ್ಷಣೆ ವಿಚಾರದಲ್ಲಿ ಧ್ವನಿ ಎತ್ತುವವರ ಸದ್ದಡಗಿಸುವ ಕೆಲಸಕ್ಕೆ ಮುಂದಾಗಿರುವ ಇಂತಹ ಅಧಿಕಾರಿಗಳ ವಿರುದ್ಧ ಅರಣ್ಯ ಸಚಿವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ವಲಯವಾರು ವಿವರ

ಬಂಡೀಪುರ ಹುಲಿ ಸಂರಕ್ಷಿತಾ ಪ್ರದೇಶದಲ್ಲಿ ಒಟ್ಟು 13 ವಲಯಗಳಿದ್ದು ಮೂರು ಉಪವಿಭಾಗಗಳಿವೇ ಅವುಗಳಲ್ಲಿ ಬಂಡೀಪುರಕ್ಕೆ ಸೇರಿದಂತೆ – ಬಂಡೀಪುರ, ಮೂಲೆಹೊಳೆ, ಗೋಪಾಲಸ್ವಾಮಿ ಬೆಟ್ಟವಿದ್ದರೆ ಗುಂಡ್ಲುಪೇಟೆ ಬಫರ್ ವಲಯದಲ್ಲಿ ಓಂಕಾರ್,ಮದ್ದೂರು, ಕುಂದಕೆರೆ ಸೇರಿವೆ, ಯಡಿಯಾಲ, ನುಗು, ಕಲ್ಕೆರೆ, ಮೊಳೆಯೂರು, ಗುಂಡ್ರೆ, ಎನ್. ಬೇಗೂರು ವಲಯಗಳಿವೆ ಆದರೆ ಅಧಿಕಾರಿಗಳ ಕೃಪೆಗೆ ಪಾತ್ರರಾಗದ ಸಿಬ್ಬಂದಿಗಳು ಹಲವು ಸಮಸ್ಯೆಗಳನ್ನ ಎದುರಿಸುವಂತಾಗಿದೆ , ಕೋಟ್ಯಾಂತರ ರೂ ಹಣವನ್ನ ಪೋಲು ಮಾಡುತ್ತಿರುವ ಸಂಧರ್ಭದಲ್ಲಿ ಅರಣ್ಯ ಕಾವಲುಗಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಿ ಎಂಬುದು ಜೋಸೆಫ್ ಹೂವರ್ ಅವರ ವಾದವಾಗಿದೆ.

Spread the love

Leave a Reply