ಚಾಮರಾಜನಗರ ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆಲುವು. ಚಾಮರಾಜನಗರ ಲೋಕಸಭಾ ಕ್ಷೇತ್ರ ಅನೇಕ ವಿಶೇಷತೆಗಳಿಂದ ಕೂಡಿದೆ 8 ವಿಧಾನಸಭಾ ಕ್ಷೇತ್ರದಲ್ಲಿ 7 ರಲ್ಲಿ ಕಾಂಗ್ರೆಸ್ ಪಕ್ಷದ್ದೇ ಆಡಳಿತ ಇದೆ , ೧ ಜೆಡಿಎಸ್ ಇದೆ೭ ವಿಧಾನಸಭಾ ಕ್ಷೇತ್ರದ ಶಾಸಕರ ಕಾರ್ಯ ಕ್ಷಮತೆ ಇಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಗೆ ವರದಾನವಾಗಿ ಪರಿಣಮಿಸಿದೆ.ಮೊದಲನೇ ಬಾರಿ ಗೆದ್ದ ಜನಪ್ರಿಯ ಶಾಸಕ ಗಣೇಶ್ ಪ್ರಸಾದ್ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ತಮ್ಮ ಮತ ಬ್ಯಾಂಕ್ ಗಟ್ಟಿತನದ ಪ್ರದರ್ಶನಕ್ಕೆ ಇದೊಂದು ನಿದರ್ಶನ.ಕೊಳ್ಳೇಗಾಲ ಕ್ಷೇತ್ರದ ಶಾಸಕ ಎ ಆರ್ ಕೃಷ್ಣಮೂರ್ತಿ ಅವರು ತಮ್ಮಪಕ್ಷದ ಅಭ್ಯರ್ಥಿ ಗೆಲುವಿಗೆ ಬಹಳಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ.ಹನೂರು ಕ್ಷೇತ್ರದಲ್ಲಿ ಜೆಡಿಎಸ್ ಶಾಸಕರಿದ್ದರು ಕಾಂಗ್ರೆಸ್ ಗೆ ಹೆಚ್ಚಿನ ಮತ ಬಂದಿರುವುದು ಮಾಜಿ ಶಾಸಕ ನರೇಂದ್ರ ಮೇಲಿನ ಪ್ರೀತಿ ಹಾಗೂ ಪಕ್ಷದ ಮೇಲಿನ ಒಲವು ಕಾಣುತ್ತಿದೆ.ಇನ್ನ್ನು ಚಾಮರಾಜನಗರ ಲೋಕಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟರು ತಮ್ಮದೇ ಮತ ಬ್ಯಾಂಕ್ ನಿಂದ ಮತ ಭೇಟೆ ನಡೆಸಿ ತಮ್ಮ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದಾರೆ ಇನ್ನು ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಸಚಿವ ಹೆಚ್ ಸಿ ಮಹದೇವಪ್ಪ ತಮ್ಮ ಮಗನ ಪರ ಖುದ್ದು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು ಮಗನ ರಾಜಕೀಯ ಬೆಳವಣಿಗೆಗೆ ಶ್ರಮಿಸಿದ್ದರು. ವರುಣ ವಿಧಾನಸಭಾ ಕ್ಷೇತ್ರದಲ್ಲಂತೂ ಸರಕಾರವೇ ನಿಂತು ಸುನಿಲ್ ಬೋಸ್ ಗೆಲುವಿಗೆ ಮುನ್ನುಡಿ ಬರೆದಿತ್ತು.ನಂಜನಗೂಡು ಹೆಚ್ ಡಿ ಕೋಟೆ ಕ್ಷೇತ್ರಗಳಲ್ಲಿ ದರ್ಶನ ದೃವನಾರಾಯಣ್ ಅನಿಲ್ ಚಿಕ್ಕ ಮಾಧು ಅವರ ಕಾರ್ಯ ಕ್ಷೇಮತೆಗೆ ಉತ್ತರ ಸಿಕ್ಕಿದೆ.ಬಿಜೆಪಿ ಹಾಗು ಜೆಡಿಎಸ್ ನ ಹೊಂದಾಣಿಕೆ ಈ ಬಾರಿ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಯಾವುದೇ ಕೆಲಸಕ್ಕೆ ಬಾರದೆ ಕಾಂಗ್ರೆಸ್ಸಿನ ಗೆಲುವು ಸುಲಭ ವಾಯಿತು.