You are currently viewing ಶ್ರೀ ಪಟ್ಟದ ಗುರುಸ್ವಾಮಿಗಳು

ಶ್ರೀ ಪಟ್ಟದ ಗುರುಸ್ವಾಮಿಗಳು

ಶ್ರೀ ಸಾಲೂರು ಬೃಹನ್ಮಠ, ಶ್ರೀ ಮಲೆ ಮಹದೇಶ್ವರ ಬೆಟ್ಟ

ಜನ್ಮದಿನ  : ೨ ಆಗಸ್ಟ್ ೧೯೫೬

ಶ್ರೀಮಠಕ್ಕೆ ಪಟ್ಟಾಭಿಷೇಕವಾದ ದಿನ : ೨೯ ಜನವರಿ ೧೯೯೫

ಜನ್ಮಸ್ಥಳ :  ಜಿ.ಕೆ.ಹೊಸುರು ಹನೂರು ತಾ.

ಪರ‍್ವಾಶ್ರಮದ ತಂದೆ :  ರುದ್ರಪ್ಪನವರು

 ತಾಯಿ :  ಶರಣೆ ಪುಟ್ಟಮಾದಮ್ಮ

ರ‍್ನಾಟಕದ ಸಾಂಸ್ಕೃತಿಕ ರಾಜಧಾನಿ ಮೈಸೂರು. ಅದರಲ್ಲೂ ಚಾಮರಾಜನಗರ ಜಿಲ್ಲೆ ಜನಪದ ಸಾಹಿತ್ಯದ ಹಾಗೂ ಗಿರಿಧಾಮಗಳ ತವರೂರು. ಇಲ್ಲಿಯದು ವಿಭಿನ್ನ ಸಂಸ್ಕೃತಿ, ಸಂವೇದನೆ ಎಂದರೆ ಅಚ್ಚರಿ ಇಲ್ಲ. ಹಾಗೆಯೇ ಭರತ ಖಂಡದ ಆತ್ಮ, ಜೀವಾಳ ಆಧ್ಯಾತ್ಮ. ನೂರಾರು ದೇವಾಲಯಗಳು, ಮಠ ಮಾನ್ಯಗಳು, ಆಶ್ರಮಗಳು ರ‍್ಮ ರಕ್ಷಣೆಗಾಗಿ ಜನಸಮುದಾಯದ ಉನ್ನತೀಕರಣಕ್ಕಾಗಿ ಇಂದಿಗೂ ಶ್ರಮಿಸುತ್ತಿವೆ. ಅವುಗಳಲ್ಲಿ ಮಹದೇಶ್ವರ ಬೆಟ್ಟದ ಶ್ರೀ ಸಾಲೂರುಸ್ವಾಮಿ ಮಠಕ್ಕೊಂದು ಅನನ್ಯ ಗಣ್ಯವಾದ ಸ್ಥಾನವಿದೆ. ಅದು ಮಾಮೂಲು ಮಠವಲ್ಲ. ಶ್ರೀ ಮಲೆಯ ಮಹದೇಶ್ವರರಿಗೆ ಅನುಗ್ರಹಿಸಿದ ತಪೋವನ. ಭಕ್ತರನ್ನು, ದೇವರ ಗುಡ್ಡರನ್ನು ಆಧ್ಯಾತ್ಮದತ್ತ ಕರೆದೊಯ್ಯುವ ಪುಣ್ಯಧಾಮ. ಶ್ರೀ ಶಾಂತಮಲ್ಲಿಕರ‍್ಜುನಸ್ವಾಮಿಗಳಿಂದ ಸ್ಥಾಪಿತವಾದ ಶ್ರೀ ಸಾಲೂರುಸ್ವಾಮಿ ಮಠವು ವಿಶ್ವ ಮಾನವ ದೋರಣೆಯುಳ್ಳದ್ದು. ಭಕ್ತಿ ಗೌರವ ಬೋಧಿಸುವ ಸಂಜೀವಿಗಳಿಂದ ಕೂಡಿದೆ. ರ‍್ಮ ರ‍್ಮ ಆಧ್ಯಾತ್ಮಗಳನ್ನು ಸರಿಯಾಗಿ ಅನುಸರಿಸಿದಾಗಷ್ಟೇ ಮನುಷ್ಯ ಜನ್ಮ ಸರ‍್ಥಕ ಎಂಬುದನ್ನೇ ಸಾಧಿಸಿ ತೋರಿಸಿಕೊಟ್ಟ ವೈರಾಗ್ಯನಿಧಿ ಶ್ರೀ ಶಾಂತಮಲ್ಲಿಕರ‍್ಜುನರು, ರ‍್ಮ-ರ‍್ಮಗಳನ್ನು ಅರಿತು ಬಾಳುವುದು ಪ್ರತಿಯೊಬ್ಬರ ರ‍್ತವ್ಯವಾಗಿದೆ. ಅವುಗಳನ್ನು ಮನದ ನ್ಯಾಯದ ತಕ್ಕಡಿಯಲ್ಲಿ ತೂಗಿ ಭಗವಂತನನ್ನು ಸಾಕ್ಷಾತ್ಕಾರ ಮಾಡಿಕೊಂಡವರು ಶ್ರೀ ಶಾಂತಮಲ್ಲಿಕರ‍್ಜುನರು, ರ‍್ಮ – ರ‍್ಮಗಳಿಗಿಂತಲೂ ಆಧ್ಯಾತ್ಮ ದೊಡ್ಡದು ಎಂದು ತಿಳಿದಿದ್ದ ಶ್ರೀಗಳು ಇವುಗಳನ್ನು ಪಾಲಿಸದೆ ಹೋದರೆ ಆಧ್ಯಾತ್ಮಿಕ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ ಎಂದು ಭಕ್ತ ಸಂಕುಲಕ್ಕೆ ಬೋಧಿಸತಿದ್ದರು.

ಜಗತ್ತಿನಲ್ಲಿರುವ ಯಾವ ರ‍್ಮಗಳೂ ಮನುಷ್ಯನ ಸೃಷ್ಟಿಯಲ್ಲಿ ಅವು ದೈವ ಸೃಷ್ಟಿ ಎಂಬುದನ್ನು ನಾವು ಮರೆಯುವಂತಿಲ್ಲ. ಉದಾತ್ತ ಆಧ್ಯಾತ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡಿದ್ದ ಶ್ರೀ ಶಾಂತಮಲ್ಲಿಕರ‍್ಜುನಸ್ವಾಮಿಗಳವರ ಪರಂಪರೆ ದೈವೀ ಸಂಭೂತವಾದುದು. ಈ ಪರಂಪರೆಯಲ್ಲಿ ಬಂದವರು ಶ್ರೀ ಶಾಂತಲಿಂಗಸ್ವಾಮಿಗಳು, ಶ್ರೀ ಇಮ್ಮಡಿ ಸಾಲೂರು ಸ್ವಾಮಿಗಳು, ಶ್ರೀ ಕರಿಬಸವ ದೇವರು, ಶ್ರೀ ಮುದ್ದುವೀರಸ್ವಾಮಿಗಳು, ಶ್ರೀ ಶಾಂತದೇವರು, ಶ್ರೀ ನಂಜೇದೇವರು, ಶ್ರೀ ಕೆಂಪನಂಜಸ್ವಾಮಿಗಳು, ಕನಕಪುರ ದೇಗುಲ ಮಠಾಧ್ಯಕ್ಷರಾದ ಶ್ರೀ ಮುಮ್ಮಡಿ ನರ‍್ವಾಣಸ್ವಾಮಿಗಳವರ ನೇತೃತ್ವದಲ್ಲಿ ಹನೂರು ತಾಲ್ಲೂಕಿನ ಜಿ.ಕೆ. ಹೊಸೂರು ಗ್ರಾಮದ ಪಟ್ಟದ ಶ್ರೀ ಗುರುಸ್ವಾಮಿಗಳವರಿಗೆ  ದಿನಾಂಕ: ೨೯-೦೧-೧೯೯೫ ರಂದು ಪಟ್ಟಾಧಿಕಾರವಾಯಿತು. ಶ್ರೀ ಪಟ್ಟದ ಗುರುಸ್ವಾಮಿಗಳು ಶ್ರೀ ಮಠದ ಜವಾಬ್ದಾರಿ ದಾಸೋಹ ವ್ಯವಸ್ಥೆ, ಕೃಷಿ ಮುಂತಾದ ಕೆಲಸ ಕಾವ್ಯಗಳ ಜವಾಬ್ದಾರಿಯನ್ನು ವಹಿಸಿಕೊಂಡು  ಶೈಕ್ಷಣಿಕ ಚಟುವಟಿಕೆಗಳ ಜವಾಬ್ದಾರಿಯನ್ನು ವಹಿಸಲಾಯಿತು. ಈ ಎಲ್ಲಾ ಕಾರಗಳ ನೇತೃತ್ವವನ್ನು ಶ್ರೀ ಮುಮ್ಮಡಿ ನರ‍್ವಾಣ ಮಹಾಸ್ವಾಮಿಗಳು ತುಂಬಾ ರ‍್ಥಪರ‍್ಣವಾಗಿ ಶ್ರೀ ಮಠದ ಭಕ್ತರ ಸಮಕ್ಷಮದಲ್ಲಿ ನೆರವೇರಿಸಿಕೊಟ್ಟರು. ಶ್ರೀ ಬೆಳತೂರು ಕೆಂಪನಂಜಸ್ವಾಮಿಗಳು, ಶ್ರೀ ಮುಮ್ಮಡಿ ಶಾಂತಲಿಂಗ ಸ್ವಾಮಿಗಳು, ಶ್ರೀ ಮುಮ್ಮಡಿ ಮುದ್ದುವೀರಸ್ವಾಮಿಗಳು ಇವರಿಗೆ ಸಹರ‍್ತಿಯಾಗಿ ಸಹಕರಿಸಿ ದುಡಿದವರು ಗುಂಡೆಗಾಲದ ಶ್ರೀ ಮಲ್ಲಿಕರ‍್ಜುನ ಸ್ವಾಮಿಗಳು ಮತ್ತು ಬೆಳತ್ತೂರು ಕೆಂಪನಂಜಸ್ವಾಮಿಗಳ ಸಂಬಂಧಿಕರಾದ ಜಿ.ಕೆ.ಹೊಸೂರು ಗ್ರಾಮದ ಶ್ರೀ ಕೆಂಪನಂಜಸ್ವಾಮಿಗಳು. ಶ್ರೀ ಮಲ್ಲಿಕರ‍್ಜುನ ಶ್ರೀಗಳು ಇವರು ಗುಂಡೆಗಾಲದ ಶ್ರೀಗಳು ಎಂದು ಪ್ರಸಿದ್ಧರಾಗಿದ್ದರು ಶ್ರೀ ಕೆಂಪನಂಜಸ್ವಾಮಿಗಳು ಹೊಸೂರು ಸ್ವಾಮಿಗಳೆಂದು ಪಡೆದಿದ್ದರು ಪಟ್ಟದ ಶ್ರೀ ಮಹದೇವ ಸ್ವಾಮಿಗಳ ಸುಧರ‍್ಘ ಸೇವಾ ನಂತರ ಶ್ರೀ ಮಠದ ಮುದ್ದು ವೀರಸ್ವಾಮಿಗಳ ಕರ ಕಮಲ ಸಂಜಾತರು. ಇವರ ಕಾಲದಲ್ಲಿ ಶ್ರೀಮಠವು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಿದ್ದು, ಅವರು ಲಿಂಗೈಕ್ಯರಾದ ಮೂರು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ನಂತರ ಸಾಲೂರು ಮಠದ ಶ್ರೀ ಪಟ್ಟದ ಗುರುಸ್ವಾಮಿಗಳು ಅಧಿಕಾರ ಸ್ವೀಕರಿಸಿದರು. ತಮ್ಮ ೧೨ನೆಯ ವಯಸ್ಸಿನಲ್ಲಿಯೇ ಶ್ರೀ ಮಠಕ್ಕೆ ಬಂದು ಕಾಯ ವಾಚಾ ಮನಸಾ ತ್ರಿಕರಣ ಶುದ್ಧಿಯಿಂದ ಎಲೆಮರೆಕಾಯಿಯಂತೆ ದುಡಿದರು. ಸುಮಾರು ೧೯೫೭ರಲ್ಲಿ ಇವರು ಶ್ರೀ ಮಠಕ್ಕೆ ಬಂದಾಗ ಶ್ರೀ ಮುದ್ದುವೀರಸ್ವಾಮಿಗಳು, ಶ್ರೀ ಕೆಂಪನಂಜಸ್ವಾಮಿಗಳು, ಶ್ರೀ ಮಹದೇವಸ್ವಾಮಿಗಳು ಹಾಗೂ ಗುಂಡೇಗಾಲದ ಶ್ರೀ ಮಲ್ಲಿಕರ‍್ಜುನಸ್ವಾಮಿಗಳು ಶ್ರೀ ಮಠದ ಸೇವೆಯಲ್ಲಿ ನಿರತರಾಗಿದ್ದರು, ಇವರೆಲ್ಲರ ಸೇವೆಯನ್ನು ಭಕ್ತಿ ಗೌರವದಿಂದ ಭಕ್ತರ ಹೃದಯವನ್ನು ಗೆದ್ದುಕೊಂಡು, ರ‍್ನಾಟಕದ ದಕ್ಷಿಣ ಪ್ರಾಂತ್ಯ ಹಾಗೂ ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮುಂತಾದ ರಾಜ್ಯಗಳಲ್ಲಿರುವ ಸಾವಿರಾರು ಭಕ್ತರಲ್ಲಿ “ಗುರುಸ್ವಾಮಿ ಬುದ್ಧಿಯವರು” ಎಂಬ ಗೌರವ ಪಡೆದು ಭಕ್ತ ಜನ ಮನ ಹೃದಯವನ್ನು ಗೆದ್ದುಕೊಂಡರು; ಜೊತೆಗೆ ನಿಜ ಜಂಗಮರಾಗಿ ಸೇವೆಸಲ್ಲಿಸಿ ಗುರುಲಿಂಗ ಜಂಗಮರೇ ಆಗಿದ್ದಾರೆ. ಈ ಸಂಸ್ಕಾರ ಸನ್ನಡತೆ ಕಾಯಕದಂತೆ ಸಂಯಮ ತ್ಯಾಗ ಬಂದದ್ದು ಇವರ ತಂದೆಯವರಾದ ಶರಣ ಶ್ರೀ ರುದ್ರಪ್ಪನವರಿಂದ ತಾಯಿ ನಿಜಶರಣೆ ಶ್ರೀಮತಿಯಾದ ಪುಟ್ಟಮಾದಮ್ಮನವರಿಂದ ನಾಲ್ಕು ಜನ ಮಕ್ಕಳಲ್ಲಿ ಶ್ರೀಗಳು ಜೇಷ್ಠ ಪುತ್ರರಾಗಿ ಜನಿಸಿ, ಶ್ರೀ ಮಹದೇಶ್ವರರ ಕೃಪಾಕಟಾಕ್ಷದಿಂದ, ಶ್ರೀ ಸಾಲೂರು ಮಠಕ್ಕೆ ಪಟ್ಟಾಧಿಕಾರಿಗಳಾದರು. ಹನೂರು ತಾಲ್ಲೂಕಿನ ಶ್ರೀ ಗಂಗಾಧರನ ಕಟ್ಟೆ ಹೊಸೂರು ಗ್ರಾಮದಲ್ಲಿ ಜನಿಸಿದ ಪೂಜ್ಯಪಾದರು ಸಂಚರಿಸಿದ ಸ್ಥಳವಿಲ್ಲ, ಲಿಂಗ ಪೂಜೆ ಮಾಡದ ಬೆಟ್ಟ ಗುಡ್ಡಗಳಿಲ್ಲ, ಮಾತನಾಡಿಸದ ಭಕ್ತರುಗಳಿಲ್ಲ, ಎಪ್ಪತ್ತೇಳು ಮಲೆಗಳನ್ನು ಸುತ್ತಿರುವ ಕರ‍್ತಿ ಹಿರಿಮೆ ಇವರದ್ದು. ಇಲ್ಲಿ ವಾಸವಾಗಿರುವ ಜನ ಸಮುದಾಯದವರ ಹೆಸರನ್ನು ಸರಾಗವಾಗಿ ಹೇಳಬಲ್ಲರು. ತುಂಬಿದುದು ತುಳಕದು ನೋಡಾ ಎಂಬ ಬಸವ ವಾಣಿಯನ್ನು ಅನಾವರಣಗೊಳಿಸಿಕೊಂಡವರು. ಮಠದಿಂದ ಸ್ವಾಮಿಯಲ್ಲ, ಸ್ವಾಮಿಯಿಂದ ಮಠ ಎಂಬ ಮಾತಿಗೆ ಮಾನ್ಯತೆ ದೊರಕಿಸಿದವರು.

ನಮ್ಮದು ಭಕ್ತರ ಮಠ ರ‍್ವರ‍್ಮ ಸಮನ್ವಯ ಸಾರುವ ಸಾಲೂರು ಮಠ ಸಾಮಾಜಿಕ ಹಿತ ಚಿಂತನೆಯೇ ಇದರ ಮೂಲ ಆಶಯ ಎಂದು ನಂಬಿರುವ ಶ್ರೀ ಸಾಲೂರು ಮಠದ ಗುರು ಪರಂಪರೆ ಪಟ್ಟದ ಶ್ರೀ ಗುರುಸ್ವಾಮಿಗಳವರ ಮೇಲೆ ಅಗಾಧವಾಗಿ ಪರಿಣಾಮವನ್ನುಂಟು ಮಾಡಿದೆ. ಅಷ್ಟೇ ಅಲ್ಲದೆ ತಂದೆ ಶರಣ ರುದ್ರಪ್ಪನವರು ನಿಜರ‍್ಥದಲ್ಲಿ ಕಾಯಕ ಯೋಗಿಗಳು, ನಮ್ಮ ಊರಿನ ಸಮೀಪದಲ್ಲಿರುವ ಗುಡ್ಡದಲ್ಲಿ ಸೊನೆ ಎಂಬ ಹೆಸರಿನ ಮುನೇಶ್ವರ ದೇವಸ್ಥಾನವಿದೆ. ಸುತ್ತಲಿನ ಗ್ರಾಮಾದವರು ಹಬ್ಬ ಹರಿದಿನಗಳಲ್ಲಿ ಇಲ್ಲಿ ಪೂಜೆ ಮಾಡುವ ಸಂಪ್ರದಾಯವಿದೆ. ಶ್ರೀ ರುದ್ರಪ್ಪನವರು ಪೂಜೆ ಮಾಡಿದರೆ ಜೇನು ನೊಣಗಳು ಕಚ್ಚುವುದಿಲ್ಲ ಮತ್ತು ಸಾವಿರಾರು ಅಡಿ ಎತ್ತರವಿರುವ ಬಂಡೆಯ ಗವಿಯಲ್ಲಿ ಇವರು ಪೂಜೆ ಮಾಡಿದರೆ ಮಾತ್ರ ಗಂಗೆ ಉದ್ಭವಿಸುತ್ತಾಳೆ. ಇಲ್ಲವಾದರೆ ನೀರು ಸಿಗುವುದಿಲ್ಲಾ. ಇದೊಂದು ದೊಡ್ಡ ಪವಾಡವೇ ಸರಿ. ಈಗಲೂ ಇವರ ಕುಟುಂಬದವರೆ ಪೂಜೆ ಮಾಡುತ್ತಿದ್ದಾರೆ. ಜೊತೆಗೆ ಗ್ರಾಮದವರಿಗೆ ಮಂಡಿ ಉಳಿಕಿದರೆ, ಭಯ ಭೀತರಾದರೆ ಶ್ರೀ ರುದ್ರಪ್ಪನವರು ಮಂತ್ರಿಸಿದರೆ ಅವರ ನೋವುಗಳು ಮಾಯವಾಗುತ್ತವೆ. ಇದರ ಹಿಂದೆ ಆಧ್ಯಾತ್ಮಿಕ ಶಕ್ತಿ ಇದೆ, ಆ ಶಕ್ತಿಯ ಪ್ರತಿರೂಪದ ಪ್ರತಿಫಲ ಪಟ್ಟದ ಶ್ರೀ ಗುರುಸ್ವಾಮಿಗಳು. * 

ಅವರ ತಂದೆ ರುದ್ರಪ್ಪನವರು, ತಾಯಿ ಶರಣೆ ಪುಟ್ಟಮಾದಮ್ಮನವರು ಆಧ್ಯಾತ್ಮ ಸಂಪನ್ನರು ಹಾಗೂ ಶ್ರೀ ಮಹದೇಶ್ವರರ ಮಹಾತ್ಮ, ಶ್ರೀ ಗುರುಮಲ್ಲೇಶ್ವರರ ಮೂಲ ಆಶಯವನ್ನು ಬದುಕಿನುದ್ದಕ್ಕೂ ನಿರಂತರವಾಗಿ ಕಾಪಾಡಿಕೊಂಡು ಬಂದಿರುವ ಕರ‍್ತಿ ಇವರಿಗೆ ಸಲ್ಲತಕ್ಕದ್ದು. ಶ್ರೀ ಸಿದ್ದಗಂಗಾ ಮಠಾಧ್ಯಕ್ಷರಾದ ಶ್ರೀ ಪರಮಪೂಜ್ಯ ಡಾ॥ ಶ್ರೀ ಶಿವಕುಮಾರ ಮಹಾಸ್ವಾಮಿಗಳು ಮತ್ತು ಸುತ್ತೂರು ಶ್ರೀ ವೀರಸಿಂಹಾಸಾನಾಧೀಶ್ವರರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ದೇಗುಲ ಮಠಾಧ್ಯಕ್ಷರಾದ ಪರಮ ಪೂಜ್ಯ ಮುಮ್ಮಡಿ ನರ‍್ವಾಣ ಮಹಾಸ್ವಾಮಿಗಳವರ ಕೃಪಾಶರ‍್ವಾದವನ್ನು ಬದುಕಿನ್ನೂದ್ದಕ್ಕೂ ಅನುಸರಿಸಿದ್ದಾರೆ. ಶ್ರೀಗಳು ವಿವೇಚನೆಯ ಹಾದಿಯಲ್ಲಿ ನಡೆದು ಆಧ್ಯಾತ್ಮಿಕದತ್ತ ಚಿತ್ತ ಹರಿಸಿದ್ದಾರೆ. ತಮ್ಮ ಗುರು, ತಮಗೆ ಧರ‍್ಮಿಕ ಹಾಗೂ ಸಾಮಾಜಿಕ ತಿಳಿವಳಿಕೆ ಕೊಟ್ಟಿದ್ದಾರೆಂಬುದನ್ನು ಅವರು ಹೃದಯ ತುಂಬಿ ನೆನೆಯುತ್ತಾರೆ.

ದುಡಿಯದೆ ಅನಾಯಾಸವಾಗಿ ಸುಖ ಅನುಭವಿಸಬೇಕೆಂಬ ಇಂದಿನ ಮಾನವರ ಮನೋಭಾವ ಇವರಿಗೆ ಇಷ್ಟವಿಲ್ಲ. ಶರಣರ ಕಾಯಕ ತತ್ವನಿಷ್ಠರು ಸಕಲರಿಗೂ ಲೇಸು ಬಯಸುವ ಸಾಲೂರು ಮಠದ ಪರಂಪರೆ ಗುರುತರ ಜವಬ್ದಾರಿಯನ್ನು ಬಹು ಶ್ರದ್ಧಾಭಕ್ತಿಯಿಂದ ಶಕ್ತಿಯಿಂದ ಐದು ದಶಕಗಳಿಂದಲೂ ಉದಾರ ಭಾವನೆಯಿಂದ ನರ‍್ವಹಿಸುತ್ತಿರುವ ಇವರ ಸೇವೆ, ಉಳಿದ ಮಠಗಳಿಗೆ ಮಾದರಿಯಾಗಿದೆ.

ಈಶಾ ವಾಸ್ಯಮಿದಂ ರ‍್ವಂ ಯತ್‌ಕಿಂಚ ಜಗತ್ಯಾಂ ಜಗತ್

 ತೇನ ತ್ಯಕ್ತನ ಭುಂಜೀಥಾ ಮಾಗೃದಃ ಕಸ್ಸ ಸ್ವಿದ್ದನಮ್

ಜಗತ್ತಿನಲ್ಲಿ ಚಲನಾತ್ಮಕವಾದುದು ಏನಿದೆಯೇ ಅದೆಲ್ಲವೂ ಪರಮಾತ್ಮನಿಂದ (ಈಶ್ವರನಿಂದ) ಸೃಜಿಸಲ್ಪಟ್ಟಿದೆ. ಅವರ ತ್ಯಾಗದಿಂದ ನಿನ್ನನ್ನು ನೀನು ಕಾಪಾಡಿಕೊ ಯಾರ ಧನವನ್ನು ಬಯಸಬೇಡ ಅಂದರೆ ಕಳ್ಳತನ ಮಾಡಬೇಡ ಎಂಬುದು ಉಪನಿಷತ್‌ಕಾರರ ಸಂದೇಶ. ಈ ಸಂದೇಶಕ್ಕೆ ಅನ್ವಯವಾಗಿ ಬದುಕಿ ತೋರಿಸಿದ್ದಾರೆ ಪಟ್ಟದ ಶ್ರೀ ಗುರುಸ್ವಾಮಿಗಳು. ಎಲ್ಲದಕ್ಕಿಂತ ಹೆಚ್ಚಾಗಿ ಇವರು ಬರಿ ಧರ‍್ಮಿಕ ಆಚರಣೆಗೆ ಸೀಮಿತವಾಗದೆ. ಸಾಮಾಜಿಕ ಶೈಕ್ಷಣಿಕ ಸಾಂಸ್ಕೃತಿಕ ಹಾಗೂ ರ‍್ವ ಜನಾಂಗದ ಹಿತರಕ್ಷಣೆ ಇವೇ ಮುಂತಾದ ರಂಗಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಪಟ್ಟದ ಶ್ರೀ ಗುರುಸ್ವಾಮಿಗಳು ಸದಾ ರ‍್ತವ್ಯ ನಿರತರು, ವಿವೇಕ ಶೀಲರು. ಕಲ್ಲನ್ನು ಶಿಲ್ಪವನ್ನಾಗಿ ಮಾಡುವ ದೂರ ದೃಷ್ಟಿವುಳ್ಳವರು. ಇವರು ಸಿರಿ ಸಂಪತ್ತು ಗೋಜಿಗೆ ಹೋಗದೆ ಮಾತಿನ ಮೂಲಕವೇ ಕರ‍್ಯ ದಕ್ಷತೆಯ ಮೂಲಕವೇ ಸಂಪತ್ತನ್ನು ಸೃಷ್ಟಿ ಮಾಡುವ ಜಾಣೆ ಇವರದು. ಶ್ರೀ ಮಹದೇಶ್ವರಸ್ವಾಮಿ ಪೂಜಾ ರ‍್ಚಕರಾದ ‘ಚಿಕ್ಕಪಾಲು, ದೊಡ್ಡಪಾಲು ಮತ್ತು ಕಾಡುವೀರಪಾಲು” ಹಾಗೂ ಕಾರಯ್ಯ, ಬಿಲ್ಲಯ್ಯ ವಂಶಸ್ಥರು ಇವರೇ ಮುಂತಾದ ಸಹಸ್ರಾರು ಭಕ್ತರ ಹಿತ ಕಾಯುವಲ್ಲಿ ಶ್ರೀಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸುಮಾರು ೫೦ ಕಿ.ಮೀ. ಅಂತರದಲ್ಲಿರುವ ಬೆಟ್ಟಗುಡ್ಡಗಳ ಸಾಲಿನಲ್ಲಿರುವ ಅವರೆಲ್ಲರ ಮನೆಗೆ ಹೋಗಿ ಪೂಜಾ ಪುನಸ್ಕಾರಗಳನ್ನು ಮಾಡುತ್ತಾರೆ. ರ‍್ಮದ ತಿರುಳಿನಲ್ಲಿ ಬೋಧಿಸುತ್ತಾರೆ ಇವರ ಎಲ್ಲಾ ಧರ‍್ಮಿಕ ವಿಧಿ ವಿಧಾನಗಳನ್ನು ಮಾಡುವುದರ ಮೂಲಕ ಅವರಿಗೆ ಸಂಸ್ಕಾರ ಬೋಧಿಸುತ್ತಾರೆ. ಇವರ ಎಲ್ಲಾ ಧರ‍್ಮಿಕ ವಿಧಾನಗಳಲ್ಲಿ ಮದುವೆ ಮುಂತಾದ ಶುಭ ಕರ‍್ಯಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ತಂಬಡಗೆರೆ ಇಂಡಿ ಬಸಪ್ಪ ಮುಂತಾದವರು ಮಹದೇಶ್ವರರು ಪಾದಸ್ರ‍್ಶ ಮಾಡಿದ ಸ್ಥಳಗಳಲ್ಲಿ ನಡೆಯುವ ಪರಿಷೆ, ಜಾತ್ರೆ, ಶುಭಕರ‍್ಯಗಳಲ್ಲಿ ತಾವೇ ಸಾಮಾಗ್ರಿಗಳನ್ನು ಪೂರೈಸಿ ರ‍್ಚಕರ ಸಂಭ್ರಮದಲ್ಲಿ ತಾವು ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಅವರೂ ಕೂಡ ಶ್ರೀಗಳನ್ನು ಬಿಟ್ಟು ಯಾವುದೇ ಶುಭ ಕರ‍್ಯಗಳನ್ನು ಮಾಡುವುದಿಲ್ಲ.

ಪೂಜ್ಯ ಶ್ರೀಗಳ ಅಧಿಕಾರಾವದಿಯಲ್ಲಿ ಶ್ರೀ ಮಠದಲ್ಲಿ ನಿತ್ಯ ದಾಸೋಹ ಸೇವೆ, ಶ್ರೀ ಮಹದೇಶ್ವರ ದೇವಸ್ಥಾನದ ಅಭಿವೃದ್ಧಿ, ಶ್ರೀ ಮಠದ ಅಭಿವೃದ್ಧಿ ಶ್ರೀ ಮಠದ ಅಭಿವೃದ್ಧಿಗೊಸ್ಕರ ರ‍್ಚಕರ ಜೀವನದ ಉದ್ಧಾರ ಜೊತೆಗೆ ಶ್ರೀ ಸಾಲೂರು ಸ್ವಾಮಿ (ಟ್ರಸ್ಟ್) ವತಿಯಿಂದ ಈ ಕ್ಷೇತ್ರದ ಸಮೀಪವಿರುವ ಪೊನ್ನಾಚಿಯಲ್ಲಿ ಗಿರಿಜನ, ದೀನ ದಲಿತರ ಹಿಂದುಳಿದವರ ಉಳಿವಿಗಾಗಿ ಪ್ರೌಢಶಾಲೆ ಮತ್ತು ಉಚಿತ ಹಾಸ್ಟೆಲ್ ಸ್ಥಾಪನೆ ೧೯೯೯ ರಲ್ಲಿ ಕೊಳ್ಳೇಗಾಲ ತಾಲ್ಲೂಕಿನ ಕೆಂಪನ ಪಾಳ್ಯದಲ್ಲಿ. ಪ್ರೌಢಶಾಲೆ, ವೃದ್ಧರಿಗೆ ಆಶ್ರಯ ನೀಡಲು ೧೦ ಎಕರೆ ವಿಸ್ತರ‍್ಣದಲ್ಲಿ ಹನೂರಿನ ಸಮೀಪ ವೃದ್ದಾಶ್ರಮವನ್ನು ಸ್ಥಾಪಿಸಿ, ನೂರಾರು ನಿರಾಶ್ರಿತರಿಗೆ ಆಶ್ರಯದಾತರಾಗಿದ್ದಾರೆ. ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಲು ಹಲವಾರು ಸಂಸ್ಕೃತ ಪಾಠಶಾಲೆಗಳನ್ನು ತೆರೆದಿದ್ದಾರೆ. ಹಬ್ಬ ಜಾತ್ರೆ ಸಂರ‍್ಭದಲ್ಲಿ ಸಹಸ್ರಾರು ಮಂದಿ ಭಕ್ತರು ಇಲ್ಲಿ ಬಂದು ದಾಸೋಹ ಸ್ವೀಕರಿಸುತ್ತಾರೆ.

ಪಟ್ಟದ ಶ್ರೀ ಗುರುಸ್ವಾಮಿಗಳವರ ಕ್ರಿಯಾಶೀಲ ದೂರ ದೃಷ್ಟಿ ಎಂದರೆ ಮಠದ ಪಾರಂಪರಿಕವಾಗಿ ನಡೆದು ಬಂದಿರುವ ಶ್ರೀಕ್ಷೇತ್ರದ ದೇವಸ್ಥಾನದ ತ್ರಿಕಾಲ ಪೂಜೆಯಲ್ಲಿ ಶ್ರೀ ಮಠದ ವತಿಯಿಂದ ಸ್ವಾಮಿಗಳೊಬ್ಬರನ್ನು ಕಳುಹಿಸಿ ಕೊಡುವುದು, ಇದು ಇಂದಿಗೂ ನಿರಂತರವಾಗಿ ನಡೆದುಕೊಂಡು ಬಂದಿದೆ. ಮತ್ತೊಂದು ವಿಶೇಷವೆಂದರೆ ಶ್ರೀ ಸಾಲೂರು ಮಠದ ವತಿಯಿಂದ ಗುಂಡೇಗಾಲ ಮಲ್ಲಿಕರ‍್ಜುನಸ್ವಾಮಿಗಳವರ ಸಹೋದರರಾದ ಶ್ರೀ ಪುಟ್ಟೇಗಾಲ ಶ್ರೀಗಳವರನ್ನು ಮಠದ ವತಿಯಿಂದ ಶ್ರೀ ಸ್ವಾಮಿಯ ನಿತ್ಯ ಪೂಜೆಗಾಗಿ ಕಳುಹಿಸಿ ಕೊಡುತ್ತಿದ್ದರು. ಜೊತೆಗೆ ಇವರು ದೇವಸ್ಥಾನಕ್ಕೆ ಹೊಂದಿಕೊಂಡಿರುವ ಕಟ್ಟೆ ಮನೆಯ ಜವಬ್ದಾರಿಯನ್ನು ಅವರಿಗೆ ವಹಿಸಿದ್ದರು. ಪುಟ್ಟೇಗಾಲ ಶ್ರೀಗಳು ಶತಾಯುಷಿಗಳು ಸುಮಾರು ೮೦ ರ‍್ಷಗಳ ಕಾಲ ಶ್ರೀ ಸ್ವಾಮಿಯವರ ಪೂಜಾ ಕೈಂರ‍್ಯವನ್ನು ಸಲ್ಲಿಸಿ ಎರಡು ರ‍್ಷಗಳ ಹಿಂದೆ ಲಿಂಗೈಕ್ಯರಾಗಿದ್ದಾರೆ ಇವರ ಸೇವೆ ಅವಿಸ್ಮರಣೇಯವಾದುದು ಇಂಥ ಪೂಜ್ಯರ ಎಲ್ಲಾ ಕೆಲಸ ಕರ‍್ಯಗಳ ಯಶಸ್ಸಿಗೆ ಶ್ರೀ ಗುರುಸ್ವಾಮಿಗಳವರು ಬೆನ್ನೆಲುಬಾಗಿ, ಇವರ ಯಶಸ್ವಿಗೆ ಕಾರಣ ರ‍್ತರಾಗಿದ್ದಾರೆ. ಅಷ್ಟೇ ಅಲ್ಲದೆ ಪೂಜ್ಯರು ಶ್ರೀಮಠದ ಎದುರಿನ ಗವಿಯ ಅಭಿವೃದ್ಧಿ, ನಿತ್ಯ ಪೂಜೆ ಮುಂತಾದ ಭಕ್ತರ ಕೈಂರ‍್ಯಗಳನ್ನು ಮಾಡಿದ್ದಾರೆ.

ಈ ಗವಿಯಲ್ಲಿ ಗುಂಡೇಗಾಲ ಶ್ರೀಗಳು ಆಗಾಗ್ಗೆ ಧ್ಯಾನ ತಪಸ್ಸು ಮಾಡುತ್ತಿದ್ದರು ಇಲ್ಲಿ ಶ್ರೀ ಮಠದ ಪರ‍್ವ ಭಾಗದಲ್ಲಿರುವ ಶ್ರೀ ಮಠದ ಹಿಂದಿನ ಗುರುಗಳ ಗದ್ದಿಗೆಗಳ ಪೂಜೆಯನ್ನು ಶ್ರೀಗಳು ನಿರಂತರವಾಗಿ ಮಾಡಿಕೊಂಡು ಬಂದಿರುತ್ತಾರೆ ಜೊತೆಗೆ ಅವುಗಳ ಅಭಿವೃದ್ಧಿಯನ್ನು ಸಹ ಮಾಡಿದ್ದಾರೆ. ಶ್ರೀ ಗುರುಸ್ವಾಮಿಗಳವರು ಆರಂಭದಲ್ಲಿ ಶ್ರೀ ಮಠಕ್ಕೆ ಅವಿರತವಾಗಿ ದುಡಿಯುತ್ತಿದ್ದು ಸಾವಿರಾರು ಮೈಲಿಗಳು ಸಂಚಾರ ಮಾಡಿದ್ದಾರೆ. ಭಕ್ತಾದಿಗಳ ಮನೆ ಮನೆಗೆ ಭೇಟಿ ನೀಡಿ ದವಸ ಧಾನ್ಯಗಳನ್ನು ಸಂಗ್ರಹಿಸಿ, ಶ್ರೀ ಮಠದಲ್ಲಿ ವ್ಯಾಸಂಗ ಮಾಡುತ್ತಿದ್ದ ಸುಮಾರು ೪೦೦ ವಿದ್ಯರ‍್ಥಿಗಳಿಗೆ ಉಚಿತವಾಗಿ ಊಟ ವಸತಿ ಸೌಲಭ್ಯ ಒದಗಿಸಿದ್ದಾರೆ. ಸುಮಾರು ೪೦ ರ‍್ಷಗಳಿಂದಲು ಬಡ ವಿದ್ಯರ‍್ಥಿಗಳಿಗೆ ಆತ್ಮಸ್ಥರ‍್ಯ ತುಂಬಿ ಧನ ಸಹಾಯವನ್ನು ಸಹ ಮಾಡುತ್ತಾ ಬಂದಿದ್ದಾರೆ. ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಶ್ರೀ ಮಠದ ಕೃಷಿ ಕರ‍್ಯಗಳನ್ನೂ ಬಹಳ ಚೆನ್ನಾಗಿ ನಿಭಾಯಿಸಿಕೊಂಡು ಬರುತ್ತಿದ್ದಾರೆ. ಇದಕ್ಕೆ ಸ್ಫರ‍್ತಿ ಇವರು ಆರಂಭದಿಂದಲೂ ಹಿರಿಯ ಗುರುಗಳ ಗದ್ದುಗೆಗಳನ್ನು ಪೂಜಿಸಿಕೊಂಡು ಬರುವ ಕೈಂಕಯ್ಯಗಳನ್ನು ನಿರಂತರವಾಗಿ ನರ‍್ವಹಿಸುತ್ತಿರುವರು. ಇವರು ೧೫ನೇ ವಯಸ್ಸಿಗೆ ಶ್ರೀ ಪಟ್ಟದ ಮಹದೇವಸ್ವಾಮಿಗಳವರಿಂದ ದೀಕ್ಷೆ ಪಡೆದ ಶ್ರೀ ಗುರುಸ್ವಾಮಿಗಳವರು ಅಂದಿನಿಂದ ಇಲ್ಲಿಯ ತನಕ ಆಧ್ಯಾತ್ಮದ ಹಾದಿಯಲ್ಲಿ ಶ್ರೀ ಮಠಕ್ಕೆ ಚ್ಯುತಿ ಬರದಂತೆ ನಡೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ ಶ್ರೀ ಗುರುಸ್ವಾಮಿಗಳವರು ಅಜಾತ ಶತ್ರು, ಯಾರಿಗೂ ನೋವನ್ನುಂಟು ಮಾಡುವ ಸ್ವಭಾವ ಇವರಲ್ಲಿಲ್ಲ. ರ‍್ವರನ್ನು ಸಮಭಾವದಿಂದ ಕಾಣುತ್ತಾರೆ, ಆದ್ದರಿಂದಲೇ ಎಲ್ಲಾ ರ‍್ಗದವರು ಇವರನ್ನು ಗೌರವಿಸುತ್ತಾರೆ. ಉದಾಹರಣೆಗೆ ಪ್ರತಿ ರ‍್ಷ ಬರಗೂರಿನಲ್ಲಿ ನಡೆಯುವ ಗಿರಿ ಜಾತ್ರೆಯಲ್ಲಿ ಶ್ರೀಗಳವರು ಸಕ್ರಿಯಾವಾಗಿ ಭಾಗವಹಿಸುತ್ತಾರೆ. ಅವರಿಗೆ ಎಲ್ಲಾ ರೀತಿಯ ಸಹಾಯ ಸಹಕಾರವನ್ನು ನೀಡುತ್ತಾರೆ. ಯಾರೇ ಕಡು ಬಡವರು ಇವರನ್ನು ಪೂಜೆಗೆ ಆಹ್ವಾನಿಸಿದರು ಅವರ ಮನೆಗೆ ಹೋಗಿ ಪೂಜೆ ಮುಗಿಸಿ ಅವರಿಗೆ ಆತ್ಮಸ್ಥೆಯ್ಯ ತುಂಬಿ ಬರುತ್ತಾರೆ. ಭಾರತದಲ್ಲಿನ ಎಲ್ಲಾ ಪುಣ್ಯ ಕ್ಷೇತ್ರಗಳ ಪ್ರವಾಸ ಮಾಡಿ ಅನುಭವ ಪಡೆದಿರುವ ಶ್ರೀಗಳು ತಮ್ಮ ಕ್ಷೇತ್ರವನ್ನು ಸಹ ಅದೇ ರೀತಿ ಬೆಳೆಸಿ ಅಭಿವೃದ್ಧಿ ಪಡಿಸಬೇಕೆಂಬ ಹಂಬಲ ಉಳ್ಳವರಾಗಿದ್ದಾರೆ. ಸ್ವಾಮಿಗಳೊಬ್ಬರನ್ನು ಕಳುಹಿಸಿಕೊಡುವುದು, ಆಯಾ ಕಾಲದಲ್ಲಿ ನಡೆಯುವ ಪೂಜಾ ವಿಧಿ ವಿಧಾನಗಳಿಗೆ ಪಡಿ ನೀಡುವುದು. ಆ ಸಂಪ್ರದಾಯ ಯುಕ್ತವಾಗಿರುವ ಪೂಜಾ ಕಾವ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದು.

ಶಿವರಾತ್ರಿ, ಯುಗಾದಿ, ಕರ‍್ತಿಕ ಸೋಮವಾರ, ಎಣ್ಣೆ ಮಜ್ಜನ ಸೇವೆ, ವಿಜಯ ದಶಮಿ, ದೀಪಾವಳಿ ಮುಂತಾದ ವಿಶೇಷ ದಿನಗಳಲ್ಲಿ ಶ್ರೀಗಳವರು ಉಪಸ್ಥಿತರಿದ್ದು ಭಕ್ತಾದಿಗಳಿಗೆ ರ‍್ಶನಾಶರ‍್ವಾದ ನೀಡುತ್ತಾ ಬಂದಿದ್ದಾರೆ, ಶ್ರೀಕ್ಷೇತ್ರಕ್ಕೆ. ರ‍್ಮರ‍್ಶಿಯಾಗಿರುವ ಶ್ರೀ ಗುರುಸ್ವಾಮಿಗಳವರು ಮಹದೇಶ್ವರ ದೇವಸ್ಥಾನದ ಎಲ್ಲಾ ಧರ‍್ಮಿಕ ಸಭೆ, ಸಮಾರಂಭಗಳಲ್ಲಿ, ಅಭಿವೃದ್ಧಿ ಕ್ರಿಯಾ ಯೋಜನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಜತೆಗೆ ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಭಕ್ತರ ಮೂಲ ಸೌರ‍್ಯಗಳನ್ನೇ ಕುರಿತು ಆಗಾಗ್ಗೆ ಸಂಬಂಧಿಸಿದ ಅಧಿಕಾರಿ ರ‍್ಗದವರಿಗೆ ಸಲಹೆ ಸೂಚನೆಗಳನ್ನು ನೀಡುತ್ತಾರೆ. ಇಷ್ಟೆಲ್ಲಾ ಕೆಲಸ ಕಾರಗಳ ನಡುವೆ ಪೂಜ್ಯರು ಶ್ರೀಕ್ಷೇತ್ರದ ಸುತ್ತಲಿನ ೫೦ ಕಿ.ಮೀ. ದೂರದ ೭೭ ಮಲೆಗಳಲ್ಲಿ ಸಂಚರಿಸಿದ್ದಾರೆ ಸುತ್ತಲಿನ ಹಳ್ಳಿಗಳಿಗೂ ಭೇಟಿ ನೀಡಿ, ಅವರಿಗೆ ರ‍್ಮ ಸಂದೇಶವನ್ನು ನೀಡುತ್ತಾ ಬಂದಿದ್ದಾರೆ.

೧. ಬರಗೂರು, ೨. ನಾಗಮಲೆ, ೩. ಪೂನ್ನಾಚಿ, ೪. ಹಳೆಯೂರು, ೫. ಕೊಂಬದಿಕ್ಕಿ, ೬. ಅಣೆ ಹೊಲ, ೭. ಕೀರನ ಹೊಲ, ೮. ತೊಳಸಿ ಕೆರೆ, ೯. ಇಂಡಿಗನ್ನತ್ತ, ೧೦. ಪಡಸನ್ನತ್ತ, ೧೧. ಕೊಕ್ಕರೆ, ೧೨. ತೋಕರೆ, ೧೩. ದೊಡ್ಡೆಣೆ, ೧೪, ವಡಕೆಹಳ್ಳಿ, ೧೫. ಬೆದರಳ್ಳಿ, ೧೬. ಕಡಬೂರು, ೧೭. ಸುಳುವಾಡಿ, ೧೮. ಎಲಚಿಕೆರೆ, ೧೯. ತಟ್ಟೆಕೆರೆ, ೨೦. ಹೂಜುಮಲೆ, ೨೧. ತಾವರೆಗೆರೆ, ೨೨. ಗುಂಡ್ರೆ, ೨೩. ಮೂಕನಪಾಳ್ಯ, ೨೪. ತಪಸೆರೆ, ೨೫. ದೋಣನಗಿರಿ, ೨೬. ಯರಳ್ಳಿ, ೨೭. ಅಸೂರು, ೨೮. ಮರೂರು, ೨೯. ಗೇರಟ್ಟಿ, ೩೦. ಕಕ್ಕೆ ಹೊಲ, ೩೧. ಬೆಜ್ಜಲ ಪಾಳ್ಯ ಇವೇ ಮುಂತಾದ ನೂರಾರು ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಗಿರಿಜನರು ಮತ್ತು ರ‍್ಚಕರಿಗೆ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸುವುದರ ಜತೆಗೆ ಶುಭ, ಅಶುಭ ಕರ‍್ಯಗಳಲ್ಲಿ ಭಾಗವಹಿಸುತ್ತಿದ್ದರು.

ವಿಶೇಷವೇನೆಂದರೆ ಈ ಎಲ್ಲಾ ಗ್ರಾಮಗಳೂ ಬೆಟ್ಟ ಗುಡ್ಡಗಳಿಂದ ಕೂಡಿದ್ದು. ಅಲ್ಲಿ ಸಂಚರಿಸುವುದು ಕಷ್ಟ ಸಾಧ್ಯವಾದ ಪ್ರದೇಶಗಳು ಎಂದರೆ ತಪ್ಪಾಗಲಾರದು. ಶ್ರೀಗಳವರ ಮನಸ್ಸು, ಮಾತು ಮೃದು. ಸರಳತೆ ಸಂಯಮ ಮತ್ತು ಇವರ ಒಳ್ಳೆಯ ಮಾತು ಭಕ್ತರನ್ನು ಆರ‍್ಷಿಸುತ್ತದೆ. ರ‍್ವರಿಗೂ ಸಮವಾಗಿ ಹಂಚಿ ಊಟ ಮಾಡುವ ಉದಾರ ಮನೋಭಾವ ಉಳ್ಳವರು. ಇವರು ಜಾತ್ಯಾತೀತ ಸ್ವಭಾವ ಉಳ್ಳವರು. ಸ್ವರ‍್ಮ ನಿಷ್ಠೆಯ ಜೊತೆಗೆ ಪರರ‍್ಮ ಸಹಿಷ್ಣುತೆಯನ್ನು ಮೈಗೂಡಿಸಿಕೊಂಡಿದ್ದಾರೆ. ನೋವನ್ನು ಕಂಡರೆ ಇವರು ನೊಂದು ಕೊಳ್ಳುತ್ತಾರೆ. ಅವರ ಕಷ್ಟ ಸಂಕಷ್ಟಗಳಿಗೆ ಸ್ಪಂದಿಸುತ್ತಾರೆ. ಇದಕ್ಕೆಲ್ಲ ಕಾರಣ ಶ್ರೀ ಮಾದೇಶ್ವರರು ನೆಲೆಯೂರಿದ, ಮೂಹರ‍್ತಕಂಬ ಸಂಸ್ಥಾಪಿಸಿದ ಮಹತ್ವದಿಂದ ಶ್ರೀ ಮಠವು ಜನಪರ ಸಾಂಸ್ಕೃತಿಕ ಜಗತ್ತಿನಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ. ರ‍್ವಸಮಾನತೆಯನ್ನು ಸಾರುವಲ್ಲಿ ಶ್ರೀ ಸಾಲೂರು ಮಠವು ಹಾಗೂ ಮಲೆಯ ಮಾದೇಶ್ವರರು ಬೆಳಕಿನಂತೆ ಪ್ರಕಾಶಿಸಿದ್ದಾರೆ. ಆ ಬೆಳಕು ರ‍್ನಾಟಕಕ್ಕೆ ಮಾತ್ರವಲ್ಲ, ದಕ್ಷಿಣ ಭಾರತಕ್ಕೆ ಮಾದರಿಯಾಗಿದೆ. ಬೋಧೆಗಿಂತ ಆಚರಣೆ ಮೇಲು ಎಂಬುದನ್ನು ಮುಂದುವರಿಸಿಕೊಂಡು ಹೋಗುವ ಗುರುತರ ಜವಾಬ್ದಾರಿ ಪಟ್ಟದ ಗುರುಸ್ವಾಮಿಗಳವರ ಹೆಗಲಮೇಲೆ ಇತ್ತು . ಅದನ್ನು ಸರ‍್ಥವಾಗಿ ನಿಭಾಯಿಸಿಕೊಂಡು ಬಂದಿದ್ದರು ಪೂಜ್ಯಪಾದರ ಅವಿರತ ಶ್ರಮ ಅವಿಸ್ಮರಣೀಯವಾದುದು.

“ಜಗವೆಲ್ಲ ನಗುತಿರಲಿ, ಜಗದಳುವು ನನಗಿರಲಿ” ಎನ್ನುವುದನ್ನೇ ತಮ್ಮ ಜೀವನದ ಮೂಲ ಆಶಯವನ್ನಾಗಿಟ್ಟುಕೊಂಡು ಮಹಿಮೆಯನ್ನು ಮೆರೆದ ಮಲೆಯ ಮಾದೇಶ್ವರರು ಭಕ್ತರನುದ್ಧರಿಸಿ ಮಹಾತ್ಮರೆನಿಸಿದವರು. ಅನಂತರ ನೆಲೆಗೊಂಡ ಕ್ಷೇತ್ರವೇ ಪುಣ್ಯ ಕ್ಷೇತ್ರವಾಯಿತು. ಶ್ರೀ ಸಾಲೂರು ಸ್ವಾಮಿ ಮಠದ ಇತಿಹಾಸಕ್ಕೆ ಪೂಜ್ಯಶ್ರೀಗಳು ಕಳಸ ಪ್ರಾಯರಾದರು. ಇಂತಹ ಮಹಾನುಭಾವರ ತತ್ವ ಸಿದ್ಧಾಂತಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು, ಆ ಪರಂಪರೆಯನ್ನು ಮುಂದುವರಿಸಿಕೊಂಡು ಬಂದವರು ಸಾಲೂರು ಮಠದ ಗುರು ಪರಂಪರೆಯವರು. ಈ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿರುವ ಶ್ರೀ ಪಟ್ಟದ ಗುರುಸ್ವಾಮಿಗಳವರು ಶ್ರೀ ಸಾಲೂರು ಸ್ವಾಮಿ ಮಠದ ಶ್ರೇಯೋ ಅಭಿವೃದ್ಧಿಗೆ ಕಾರಣೀಭೂತರಾಗಿದ್ದಾರೆ. ಪೂಜ್ಯ ಶ್ರೀಗಳು ತಮಗೆ ಅಧಿಕಾರವಿಲ್ಲದಿದ್ದಾಗಲೂ ಕಪಟವಿಲ್ಲದಂತೆ ಬದುಕಿದ್ದಾರೆ, ಹಾಗೆಯೇ ಬದುಕುವಂತೆ ಬೇರೆಯವರಿಗೂ ಬೋಧಿಸುತ್ತಾರೆ. ಸದಾಚಾರ, ಸದ್ಗುಣಗಳೂ, ಕ್ಷಮಾಗುಣ, ತ್ಯಾಗ ಪರತೆ ಇವರಲ್ಲಿ ಮನೆಕೊಂಡಿವೆ. ಇವರಿಗೆ ನಾಲಿಗೆ ರುಚಿಗಿಂತ ಆಧ್ಯಾತ್ಮ ಜೀವನ, ಕ್ರಿಯಾಶೀಲ ಬದುಕು ಬಹಳ ಇಷ್ಟವಾಗಿತ್ತು. ಇವರು ಜಾತಿ ಮತಗಳನ್ನು ನೋಡುವುದಕ್ಕಿಂತ, ಭಕ್ತ ಸಮುದಾಯವನ್ನು ನೋಡುತ್ತಾರೆ.

ಪಟ್ಟದ ಶ್ರೀ ಗುರುಸ್ವಾಮಿಗಳವರು ನಡೆ ನುಡಿಯಿಂದಲೇ ಸರಳತೆ ಸಜ್ಜನಿಕೆಯಿಂದಲೇ ದೊಡ್ಡವರಾಗಿದ್ದರು ಅವರ ಆರ‍್ಶ ಬದುಕು, ತ್ಯಾಗ ತೃಪ್ತಿ ಜೀವನ ಸಹಸ್ರಾರು ಭಕ್ತರ ಮನದಲ್ಲಿ ಅಚ್ಚಳಿಯದೆ ಉಳಿದಿದರು.  ಆದುದರಿಂದಲೇ ಇವರನ್ನು ಶ್ರೀ ಮಲೆಯ ಮಾದೇಶ್ವರರು ತಾವು ನೆಲೆಗೊಂಡ ಸ್ಥಳಕ್ಕೆ ಕರೆಯಿಸಿಕೊಂಡಿದ್ದಾರೆ. ಈ ಪುಣ್ಯಫಲ ಎಲ್ಲರಿಗೂ ಸಿಗುವುದಿಲ್ಲ. ಕೋಟಿಗೊಬ್ಬರಿಗೆ ಇಂತಹ ಸ್ಥಾನ ಲಭಿಸುತ್ತದೆ. ಇದು ಪರ‍್ವಜನ್ಮದ ಸುಕೃತವೂ ಕೂಡ. ಕೃತಜ್ಞ ಭಕ್ತ ಸಮುದಾಯದ ಮನಸ್ಸಿನಲ್ಲಿ ಇವರು ನಿಜ ಜಂಗಮರು. ದಾರಿತಪ್ಪುತ್ತಿರುವ ಇಂದಿನ ಯುವ ಜನಾಂಗಕ್ಕೆ ಇವರ ನೇರ ನಡೆ ನುಡಿ ಸನ್ಮರ‍್ಗದತ್ತ ಕರೆದೊಯ್ಯುವ ತೋರುಗಂಬವಾಗಿದ್ದರು.

ಆದುದರಿಂದ ಪಟ್ಟದ ಶ್ರೀ ಗುರುಸ್ವಾಮಿಗಳವರು ಸಾಲೂರು ಮಠದ ಗುರುಪರಂಪರೆಯಲ್ಲಿ ಹೆಚ್ಚಿನ ರ‍್ಷಗಳ ಕಾಲ ಸೇವೆಗೈದ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆ. ಕಿಂಕರ ಶಂಕರನಾದಂತೆ ಸಾಲೂರು ಮಠದ ಅಭಿನವ ಅಲ್ಲಮಪ್ರಭುಗಳಂತಿದ್ದ ಪಟ್ಟದ ಶ್ರೀ ಮಹದೇವಸ್ವಾಮಿಗಳವರ ಭವಿಷ್ಯದ ಎಲ್ಲಾ ಕನಸುಗಳು ಮತ್ತು ಭಕ್ತರ ಆಶೋತ್ತರಗಳನ್ನು ಇವರು ಪರ‍್ಣಗೊಳಿಸಿ ಕಲಿಯುಗದ ಮಹದೇಶ್ವರರೆನಿಸಿಕೊಂಡರು. 

ಪೂಜ್ಯಶ್ರೀಗಳು ತಮ್ಮ ಅನಾರೋಗ್ಯ ನಿಮಿತ್ತ ಶ್ರೀ ಸಾಲೂರು ಬೃಹನ್ಮಠದ ಅನೂಚನವಾದ ಸಂಪ್ರದಾಯ ಮತ ಮುಂದುವರೆಸಲು ಸರ‍್ಥವಾದ ಉತ್ತರಾಧಿಕಾರಿಯನ್ನು ಪೂಜ್ಯ ಸುತ್ತೂರು ಜಗದ್ಗುರುಗಳು ಸಿದ್ಧಗಂಗಾ ಶ್ರೀಗಳು ದೇಗುಲ ಮಠದ ಶ್ರೀಗಳು ಕುಂದೂರು ಮಠದ ಶ್ರೀಗಳ ಮರ‍್ಗರ‍್ಶನ ಆಶರ‍್ವಾದದಿಂದ ಅಪಾರ ವಿದ್ವತ್ತಿನಿಂದ ಕೂಡಿದ ಇವರು ಹದಿನೆಂಟನೆಯ ಪೀಠಾಧಿಪತಿಗಳಾಗಿ ದಿನಾಂಕ : ೮ ಆಗಸ್ಟ್ ೨೦೨೦ ರಂದು ಶ್ರೀ ಸಾಲೂರು ಮಠ ಹಾಗೂ ದೇವಸ್ಥಾನದ ಉಸ್ತುವಾರಿಯನ್ನು ವಹಿಸಿಸಿದರು.

ವಿಶಾಲವಾದ ದೂರದೃಷ್ಟಿ, ಅಪಾರ ವಿದ್ವತ್ತು, ಪ್ರಗತಿಪರ ಚಿಂತನೆಗಳಿಂದ ಕೂಡಿದ ಶ್ರೀಗಳವರಿಂದ ಶ್ರೀಮಠ ಮತ್ತು ದೇವಸ್ಥಾನಗಳೆರಡೂ ಅಭಿವೃದ್ಧಿ ಪಥದಲ್ಲಿ ಸಾಗುವುದರಲ್ಲಿ ಅನುಮಾನವಿಲ್ಲ. ಈಗಾಗಲೇ ಶ್ರೀಮಠದ ಅಪಾರ ಭಕವೃಂದ ಶ್ರೀಗಳ ವ್ಯಕ್ತಿತ್ವಕ್ಕೆ ಮಾರುಹೋಗಿ ಇನ್ನಿಲ್ಲದ ನಿರೀಕ್ಷೆಗಳಿಂದ ಭರವಸೆಯ ದೃಷ್ಟಿಯಲ್ಲಿ ಶ್ರೀಗಳಿಗೆ ಮರ‍್ಗರ‍್ಶನ ನೀಡುತ್ತಿದದ್ದರು. ಶ್ರೀಗಳ ನಡೆಯನ್ನು ಗಮನಿಸಿದಾಗ ಈ ಭಕ್ತರ ನಿರೀಕ್ಷೆ ಸುಳ್ಳಾಗುವುದಿಲ್ಲ ಎಂಬ ಭರವಸೆ ಮೂಡುತ್ತದೆ.

Spread the love

Leave a Reply